ಕರ್ನಾಟಕ

karnataka

By ETV Bharat Karnataka Team

Published : Oct 6, 2023, 3:12 PM IST

ETV Bharat / sukhibhava

2020ರಲ್ಲಿ ಭಾರತದಲ್ಲೇ ಅತಿ ಹೆಚ್ಚು ಅಕಾಲಿಕ ಮಕ್ಕಳ ಜನನ: ಲ್ಯಾನ್ಸೆಟ್​ ವರದಿ

ಶಿಶುಗಳ ಅಕಾಲಿಕ ಜನನ ಜಗತ್ತಿನಾದ್ಯಂತ ಕಾಳಜಿಯ ವಿಷಯವಾಗಿದೆ. ಭಾರತಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಸಂಶೋಧನಾ ವರದಿ ಪ್ರಕಟಗೊಂಡಿದೆ.

In 2020 India have the most premature births globally
In 2020 India have the most premature births globally

ನವದೆಹಲಿ: 2020ನೇ ವರ್ಷದಲ್ಲಿ ಭಾರತದಲ್ಲಿ 3.02 ಮಿಲಿಯನ್ (30 ಲಕ್ಷಕ್ಕೂ ಹೆಚ್ಚು)​ ಶಿಶುಗಳು ಅವಧಿಪೂರ್ವ ಜನಿಸಿದ್ದು, ಈ ಸಂಖ್ಯೆ ಜಾಗತಿಕವಾಗಿ ಹೆಚ್ಚಿದೆ. ಜಾಗತ್ತಿನಾದ್ಯಂತ ಅವಧಿಪೂರ್ವ ಜನಿಸುವ ಮಕ್ಕಳ ಸಂಖ್ಯೆ ಶೇ 20ರಷ್ಟಿದೆ ಎಂದು ಲ್ಯಾನ್ಸೆಟ್​​ ಜರ್ನಲ್​ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ), ಯುನಿಸೆಫ್​​​ ಮತ್ತು ಲಂಡನ್​ ಸ್ಕೂಲ್​ ಆಫ್​ ಹೈಜೆನ್ಸಿ ಮತ್ತು ಟ್ರೊಫಿಕಲ್​​ ಮೆಡಿಸಿನ್​ ಲೇಖಕರು ಈ ಅಧ್ಯಯನ ನಡೆಸಿದ್ದಾರೆ. 2020ರಲ್ಲಿ ಜಾಗತಿಕ ಅವಧಿಪೂರ್ವ ಮಕ್ಕಳ ಜನನ ಸಂಖ್ಯೆ ಎಂಟು ದೇಶದಲ್ಲಿನ ಪ್ರಮಾಣದಲ್ಲಿ ಶೇ 50ರಷ್ಟಿದೆ. ಭಾರತ, ಪಾಕಿಸ್ತಾನ, ನೈಜೀರಿಯಾ, ಚೀನಾ, ಇಥಿಯೋಪಿಯಾ, ಬಾಂಗ್ಲಾದೇಶ ಡೆಮಾಕ್ರಟಿಕ್​ ರಿಪಬ್ಲಿಕ್​ ಆಫ್​ ದಿ ಕಾಂಗೋ ಮತ್ತು ಅಮೆರಿಕದಲ್ಲಿ ಹೆಚ್ಚಿನ ಸಂಖ್ಯೆಯ ಅವಧಿಪೂರ್ವ ಮಕ್ಕಳ ಜನನ ಕಂಡುಬಂದಿದೆ.

ಅಧಿಕ ಸಂಖ್ಯೆಯ ಅವಧಿ ಪೂರ್ವ ಜನನದ ದರವು ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ವರದಿಯಾಗಿದೆ. ಅಧಿಕ ಆದಾಯದ ದೇಶಗಳಲ್ಲೂ ಕೂಡ ಅವಧಿಪೂರ್ವ ಮಕ್ಕಳ ಜನನ ಶೇ 10ರಷ್ಟಿದೆ. ಗ್ರೀಸ್​ನಲ್ಲಿ ಶೇ 11.6ರಷ್ಟಿದ್ದರೆ, ಅಮೆರಿಕದಲ್ಲಿ ಶೇ 10.0 ಇದೆ.

2020ರ ವರದಿಯನುಸಾರ ಜಾಗತಿಕವಾಗಿ 37 ವಾರಗಳ ಗರ್ಭಾವಸ್ಥೆ ತುಂಬುವ ಮೊದಲೇ ಅವಧಿ ಪೂರ್ವ ಜನನವಾದ ಮಕ್ಕಳ ಸಂಖ್ಯೆ ಶೇ 13.4ರಷ್ಟಿದೆ. ಅಂದರೆ, 10ರಲ್ಲಿ 1 ಮಗುವಿನ ಜನನ ಅಕಾಲಿಕವಾಗಿದೆ. ಕಳೆದೊಂದು ದಶಕದಿಂದ ಈ ಅಕಾಲಿಕ ಜನನದ ದರವನ್ನು ಜಗತ್ತಿನ ಯಾವುದೇ ಪ್ರದೇಶವೂ ಗಮನಾರ್ಹವಾಗಿ ಕಡಿಮೆ ಮಾಡಲು ಸಾಧ್ಯವಾಗಿಲ್ಲ.

2010 ಮತ್ತು 2020ರ ನಡುವೆ ಜಾಗತಿಕವಾಗಿ ಅಕಾಲಿಕ ಜನನದ ವಾರ್ಷಿಕ ದರ ಶೇ 0.14ರಷ್ಟಿದೆ. ಈ ಹಿನ್ನೆಲೆಯಲ್ಲಿ ಅಕಾಲಿಕ ಜನನ ಮಕ್ಕಳ ತಡೆಯುವ ನಿಟ್ಟಿನಲ್ಲಿ ತುರ್ತು ಕ್ರಮಕ್ಕೆ ಏಜೆನ್ಸಿ ಕರೆ ನೀಡಿದೆ. ಈ ನಿಟ್ಟಿದಲ್ಲಿ ತಾಯಂದಿರ ಆರೋಗ್ಯ ಮತ್ತು ಪೋಷಣೆಗೆ ಒತ್ತು ನೀಡಬೇಕಿದೆ ಎಂದು ಸಲಹೆ ನೀಡಿದೆ. ಅಕಾಲಿಕವಾಗಿ ಜನಿಸಿದ ಮಕ್ಕಳು ಅನಾರೋಗ್ಯ, ಅಂಗವೈಕಲ್ಯತೆ ಮತ್ತು ಅಭಿವೃದ್ದಿ ವಿಳಂಬ ಮತ್ತು ದೀರ್ಘಕಾಲಿನ ಸಮಸ್ಯೆಗಳಾದ ಮಧುಮೇಹ ಮತ್ತು ಹೃದಯ ಸಮಸ್ಯೆಯಿಂದ ಬಳಲುವ ಸಾಧ್ಯತೆ ಜಾಸ್ತಿ ಇದೆ.

ಅಕಾಲಿಕವಾಗಿ ಜನಿಸಿದ ಮಕ್ಕಳು ದುರ್ಬಲತೆಯಿಂದ ಕೂಡಿದ್ದು, ಆರೋಗ್ಯದ ಸಮಸ್ಯೆಗಳು ಜೀವಕ್ಕೆ ಬೆದರಿಕೆ ಒಡ್ಡುತ್ತವೆ. ಅವರಿಗೆ ವಿಶೇಷ ಆರೈಕೆ ಮತ್ತು ಕಾಳಜಿ ಅಗತ್ಯ ಎಂದು ಎಬ್ಲ್ಯೂಎಚ್​ಒ ವೈದ್ಯ ಡಾ.ಅಂಶು ಬ್ಯಾನರ್ಜಿ ಹೇಳುತ್ತಾರೆ. ಪ್ರತಿ ಗರ್ಭಾವಸ್ಥೆ ಮತ್ತು ಅದಕ್ಕೂ ಮುನ್ನ ಗುಣಮಟ್ಟದ ಆರೋಗ್ಯ ಸೇವೆಯ ಭರವಸೆ ಒದಗಿಸುವುದು. ಅಕಾಲಿಕ ಜನನ ತಡೆಯಲು ಮತ್ತು ಅಪಾಯ ತಡೆಗಟ್ಟಲು ಕುಟುಂಬ ಮತ್ತು ಮಹಿಳೆಗೆ ಸೇವೆಯ ಬೆಂಬಲ ಒದಗಿಸಲು ಗಂಭೀರವಾದ ಹೂಡಿಕೆಯ ತುರ್ತನ್ನು ತೋರಿಸಿದೆ ಎಂದಿದ್ದಾರೆ.

ಇದನ್ನೂ ಓದಿ: ಅಪೌಷ್ಟಿಕತೆಯಿಂದ ಮಗುವಿನ ಬೆಳವಣಿಗೆ ಕುಂಠಿತ... ಸಾವಿನ ಅಪಾಯವೂ ಹೆಚ್ಚು..

ABOUT THE AUTHOR

...view details