ಬೆಂಗಳೂರು: ಹೃದಯಾಘಾತಕ್ಕೆ ತುತ್ತಾಗುವವರು ಹಾಗೂ ಮೃತಪಡುವವರ ಅಂಕಿ - ಅಂಶ ಗಮನಿಸಿದರೆ ಭಾರತ ದೇಶವು ಜಾಗತಿಕ ರಾಜಧಾನಿಯಾಗಿ ಗೋಚರಿಸುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳು ಸೇರಿದಂತೆ ಅನ್ಯ ದೇಶಗಳಲ್ಲಿ ವೈಯಕ್ತಿಕ ಆರೋಗ್ಯ ಕಾಳಜಿಗೆ ನೀಡುವ ಗಮನವನ್ನು ಭಾರತೀಯರು ನೀಡದೇ ಇರುವುದು ಈ ಸಮಸ್ಯೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಭವಿಷ್ಯ ರೂಪಿಸಿಕೊಳ್ಳುವ ಚಿಂತೆಯಲ್ಲಿ ವರ್ತಮಾನದ ಆರೋಗ್ಯವನ್ನು ಜನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತನ್ನು ವೈದ್ಯ ಲೋಕವೇ ಹೇಳುತ್ತಿದೆ. ಐಟಿ ಬಿಟಿ ಕ್ರಾಂತಿಯ ಬಳಿಕ ದೇಶದಲ್ಲಿ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಉತ್ತಮ ವೇತನ ಪಡೆಯುವ ಉದ್ಯೋಗ ಪಡೆಯುತ್ತಿದ್ದು, ತಮ್ಮ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಯುವ ಸಮುದಾಯ ತಮ್ಮ ಜೀವನವನ್ನೇ ಪಣಕ್ಕಿಡುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಚೀನಾಗೆ ಹೋಲಿಸಿದರೆ ನಾವು ಅವರಿಗಿಂತಲೂ ಕೊಂಚ ಮುಂದಿದ್ದೇವೆ. ಆರೋಗ್ಯ ಕಾಳಜಿ ಕೊರತೆ ಹಾಗೂ ಬದಲಾದ ಆಹಾರ ಪದ್ಧತಿ ಮತ್ತು ನಿಯಮಿತವಾಗಿ ನಿದ್ರಿಸದಿರುವುದೇ ಹೃದಯಾಘಾತ ಹೆಚ್ಚಳಕ್ಕೆ ಕಾರಣವಾಗಿದೆ.
ವ್ಯಕ್ತಿಯ ಸಾವಿಗೆ ಕಾರಣವಾಗಲ್ಲ, ಪ್ರಮುಖ ನಾಲ್ಕು ಜೀವನ ಶೈಲಿ ರೋಗಗಳಲ್ಲಿ ಮೊದಲ ಸ್ಥಾನದಲ್ಲಿ ಹೃದ್ರೋಗ ಇದೆ. ಭಾರತದಲ್ಲಿ ಶೇಕಡ 54ರಷ್ಟು ಮಂದಿ 70 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿಯೇ ಸಾವನ್ನಪ್ಪುತ್ತಿದ್ದಾರೆ. ಈ ಸಾವಿನಲ್ಲಿ ಹೃದಯ ರೋಗಿಗಳ ಪ್ರಮಾಣ ಶೇಕಡ 28, ದೇಶದಲ್ಲಿ ಸಾಯುವವರ ಪ್ರತಿ ಮೂರಲ್ಲಿ ಒಬ್ಬರು ಹೃದಯ ರೋಗಕ್ಕೆ ಸಂಬಂಧಪಟ್ಟಂತೆ ಸಾವನ್ನಪ್ಪುತ್ತಿದ್ದಾರೆ. ಈ ಕಾಯಿಲೆಯಿಂದ ಪ್ರತಿ ವರ್ಷ 1.70 ಕೋಟಿ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಅಂಕಿ ಅಂಶ ಎಂದು ವಿವರ ನೀಡುತ್ತದೆ.
ಭಾರತೀಯರಲ್ಲಿ ಪ್ರತಿ ಮೂವರಲ್ಲಿ ಇಬ್ಬರಿಗೆ ಅಧಿಕಾರಕ್ಕೆ ತಡ ಸಮಸ್ಯೆ ಇರುತ್ತದೆ. 1 ಲಕ್ಷ ಮಂದಿಗೆ 272 ಮಂದಿ ಹೃದಯ ಸಮಸ್ಯೆಯಿಂದ ಬಳಲುತ್ತಿರುವುದು ಭಾರತದಲ್ಲಿ ಗಮನಕ್ಕೆ ಬರುತ್ತದೆ. ಇದೇ ಅಂಕಿ - ಅಂಶ ಜಾಗತಿಕವಾಗಿ ನೋಡಿದಾಗ 235 ಇದೆ.
ಹೃದಯಾಘಾತದ ಜಾಗತಿಕ ರಾಜಧಾನಿ ಆಗ್ತಿದೆಯಾ ಭಾರತ?:ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನಲ್ಲಿರುವ ಸಾಗರ್ ಆಸ್ಪತ್ರೆಯ ಕಾರ್ಡಿಯಾಲಜಿಸ್ಟ್ ಡಾ.ಕೆ.ಎಸ್. ಕಿಶೋರ್ ಪ್ರಕಾರ, ಭಾರತ ದೇಶ ಹೃದಯಘಾತದ ವಿಚಾರದಲ್ಲಿ ಜಾಗತಿಕ ರಾಜಧಾನಿಯಾಗಿ ಗೋಚರಿಸುತ್ತಿದೆ. ಹೃದಯಾಘಾತ ಯಾವುದೇ ಸಂದರ್ಭದಲ್ಲಿ ಬೇಕಾದರೂ ಎದುರಾಗಬಹುದು. ಏನಾಗುತ್ತಿದೆ ತಮ್ಮ ಶರೀರದಲ್ಲಿ ಎಂಬುದನ್ನು ಜನ ಅರ್ಥ ಮಾಡಿಕೊಂಡರೆ ಅರ್ಧದಷ್ಟು ಹೃದಯಘಾತ ತಡೆಯಬಹುದು.