ವಯಸ್ಸಾದಂತೆ ಮಹಿಳೆಯರಲ್ಲಿನ ಫಲವತ್ತತೆಯ ಪ್ರಮಾಣ ಕಡಿಮೆ ಆಗುತ್ತದೆ. ಮಹಿಳೆಯರಲ್ಲಿ ಸೀಮಿತ ಪ್ರಮಾಣದಲ್ಲಿ ಅಂಡಾಣುಗಳು ಉತ್ಪತ್ತಿಯಾಗುವುದರೊಂದಿಗೆ ಅದರ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಆದರೂ ವಯಸ್ಸು 30 ದಾಟಿದ ಬಳಿಕ ಮಗು ಮಾಡಿಕೊಳ್ಳಲು ನಿರ್ಧರಿಸುವ ಮಹಿಳೆಯರ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಮೂಲಕ ಆರೋಗ್ಯಯುತ ಮಗು ಪಡೆಯಬಹುದು.
ಮಗುವಿನ ವಿಚಾರದಲ್ಲಿ ತಾಯಿಯ ಫಲವತ್ತತೆಯಂತೆಯೇ ಪುರುಷರಲ್ಲಿನ ಕಡಿಮೆ ವೀರ್ಯಾಣು ಚಲನಶೀಲತೆ ಕೂಡ ಪರಿಣಾಮ ಬೀರುತ್ತದೆ. ನಲ್ವತ್ತು ವರ್ಷದ ಹಿಂದೆ ಪುರುಷರೊಬ್ಬರಲ್ಲಿದ್ದ ವೀರ್ಯಾಣು ಸಂಖ್ಯೆಯ ಅರ್ಧದಷ್ಟನ್ನು ಇಂದು ವ್ಯಕ್ತಿ ಹೊಂದಿದ್ದು, ಈ ವೀರ್ಯವು ಸ್ವಾಭಾವಿಕವಾಗಿ ಸ್ತ್ರೀ ಸಂತಾನೋತ್ಪತ್ತಿಗೆ ಬರುವುದಿಲ್ಲ ಎಂದು ನವದೆಹಲಿಯ ವೈದ್ಯಕೀಯ ನಿರ್ದೇಶಕ ಮತ್ತು ಬಂಜೆತನ ತಜ್ಞೆ ಡಾ.ಶೋಭಾ ಗುಪ್ತಾ ತಿಳಿಸಿದ್ದಾರೆ.
ಯಾವುದೇ ದೈಹಿಕ ಸಮಸ್ಯೆಗಳು ಇಲ್ಲದಿದ್ದರೆ, ಜೀವನ ಶೈಲಿಯಲ್ಲಿ ಅಂಶಗಳು ಕೂಡ ಪರಿಣಾಮ ಬೀರುತ್ತವೆ. ಇದಕ್ಕೆ ತೂಕದ ಸಮಸ್ಯೆ ಮತ್ತು ಮದ್ಯಸೇವನೆ ಕೂಡ ಕಾರಣವಾಗುತ್ತದೆ. ಫಲವತ್ತತೆ ಹೆಚ್ಚಿಸಲು ಡಾ.ಶೋಭಾ ಕೆಲವು ಸಲಹೆಗಳನ್ನು ನೀಡಿದ್ದು, ಇದರಲ್ಲಿ ಲೈಂಗಿಕ ಜೀವನ ಮತ್ತು ಎಷ್ಟು ಪ್ರಮಾಣದ ಜಂಕ್ ಫುಡ್ ಸೇವನೆ ಮಾಡಬೇಕು ಎಂಬುದನ್ನು ತಿಳಿಯಬೇಕಿದೆ.
ಆರೋಗ್ಯಯುತ ಆಹಾರ ಸೇವಿಸಿ: ಜಂಕ್ ಫುಡ್ ಸೇವನೆ ಕಡಿಮೆ ಮಾಡುವುದು ಉತ್ತಮ ಅಭ್ಯಾಸ. ನಿಮ್ಮ ದೇಹವನ್ನು ಸುಸ್ಥಿತಿಯಲ್ಲಿಡಲು ಪೋಷಕಾಂಶ ಸೇವಸಿ. ಹಣ್ಣು ಮತ್ತು ತರಕಾರಿ, ಕಾರ್ಬೋಹೈಡ್ರೆಟ್, ಪ್ರೋಟಿನ್ ಮತ್ತು ಉತ್ತಮ ಕೊಬ್ಬುಗಳನ್ನು ಹೊಂದುವುದು ಅಗತ್ಯವಾಗಿದೆ. ಗರ್ಭಾವಸ್ಥೆಯಲ್ಲಿ ರಕ್ತಹೀನತೆ ತೊಡೆದು ಮಹಿಳೆಯರು ಕ್ಯಾರೆಟ್ ಸೇವನೆ ಮಾಡುವುದೊಳಿತು. ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ಜಿಂಕ್ ಕೂಡ ಪ್ರಮುಖವಾಗಿದೆ.
ಕಡಿಮೆ ಒತ್ತಡ: ಒತ್ತಡವೂ ನೀವು ತಾಯಿಯಾಗುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಒತ್ತಡ ಅನೇಕ ಅನಾರೋಗ್ಯ ಮತ್ತು ಅನಾನುಕೂಲತೆಗೆ ಕಾರಣವಾಗುತ್ತದೆ. ನಿಮ್ಮ ಮಿದುಳಿನ ಹೈಪೋಥಲಮಸ್ ಹಾರ್ಮೋನ್ ಮತ್ತು ಋತುಚಕ್ರವನ್ನು ನಿಯಂತ್ರಿಸುತ್ತದೆ. ಇದು ಒತ್ತಡದಿಂದ ಪರಿಣಾಮಕ್ಕೆ ಒಳಗಾಗುತ್ತದೆ. ಇದು ಅಂಡಾಂಶ ಉತ್ಪಾದನೆ ಫಲಿತಾಂಶವನ್ನು ವಿಳಂಬಿಸಬಹುದು ಇಲ್ಲವೇ ಮಾಡದೇ ಇರಬಹುದು. ಈ ಹಿನ್ನೆಲೆಯಲ್ಲಿ ಒತ್ತಡರಹಿತವಾಹಿರುವುದು ಅವಶ್ಯವಾಗಿದೆ. ನೈಸರ್ಗಿಕ ಒತ್ತಡದಿಂದ ತಪ್ಪಿಸಿಕೊಳ್ಳಲು ಯೋಗ ಅಥವಾ ಧ್ಯಾನ ಒಳ್ಳೆಯ ಜೀವನ ವಿಧಾನ.