ನವದೆಹಲಿ: ದೀಪಾವಳಿ ಆರಂಭವಾಗುತ್ತಿದ್ದಂತೆ ದೆಹಲಿ - ಎನ್ಸಿಆರ್ಗಳಲ್ಲಿ ಗಾಳಿ ಮಟ್ಟ ಕುಸಿಯುತ್ತದೆ. ಈ ವಾಯು ಮಾಲಿನ್ಯವೂ ಮಿದುಳಿನಲ್ಲಿ ಊರಿಯೂತಕ್ಕೆ ಕಾರಣವಾಗುವ ಸಾಧ್ಯತೆ ಇದ್ದು, ಇದು ಆತಂಕ, ಖಿನ್ನತೆ ಮತ್ತು ಸ್ಮರಣೆ ಸಮಸ್ಯೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ. ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನದ ನಿಮಿತ್ತ ಈ ಕುರಿತು ಎಚ್ಚರಿಸಿರುವ ವೈದ್ಯರು, ಮಾಲಿನ್ಯವೂ ಮನುಷ್ಯನ ಯೋಗಕ್ಷೇಮಕ್ಕೆ ಹಾನಿ ಮಾಡುತ್ತದೆ ಎಂಬ ಅಂಶವನ್ನು ಒತ್ತಿ ಹೇಳಿದ್ದಾರೆ.
ಪರಿಸರದ ಬದಲಾವಣೆಗಳ ಪರಿಣಾಮ: ಏಮ್ಸ್ನ ಸೈಕಿಯಾಟ್ರಿಕ್ ವಿಭಾಗದ ಪ್ರೋ ಡಾ. ನಂದ ಕುಮಾರ್ ಮಾತನಾಡಿ, ವಾಯು ಮಾಲಿನ್ಯದ ಹೊರತಾಗಿ, ಪರಿಸರದಲ್ಲಿನ ಬದಲಾವಣೆಗಳು ಮತ್ತು ಪ್ರವಾಹ, ಬಿರುಗಾಳಿಗಳಂತಹ ಹವಾಮಾನದ ಅತಿರೇಕ ಘಟನೆಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಈ ರೀತಿಯ ಹವಾಮಾನ ಬದಲಾವಣೆಗೆ ಒಳಗಾಗುವ ಜನರಲ್ಲಿ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗಳು ಅಭಿವೃದ್ಧಿಯಾಗುತ್ತದೆ. ಉದಾಹರಣೆಗೆ ಪಿಟಿಎಸ್ಡಿ, ಖಿನ್ನತೆ ಅಥವಾ ಪರ್ಯಾಯ ಸಮಸ್ಯೆಗಳು ಕಾಣಿಸಬಹುದು ಎಂದರು. ವಾಯುಮಾಲಿನ್ಯ ದೆಹಲಿಯಲ್ಲಿ ವಾಸಿಸುವ ಜನರ ಬದುಕುಳಿಯುವ ಅವಧಿಯನ್ನು 11.9ರಷ್ಟು ಕಡಿಮೆ ಮಾಡಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿದೆ. ಅಲ್ಲದೇ, ಜಗತ್ತಿನ ಅತಿ ಹೆಚ್ಚು ಮಾಲಿನ್ಯ ನಗರ ಎಂಬ ಬಿರುದನ್ನು ದೆಹಲಿ ಪಡೆದುಕೊಂಡಿದೆ.
ಚಿಕಾಗೋ ಎನರ್ಜಿ ಪಾಲಿಸಿ ಇನ್ಸುಟಿಟ್ಯೂಟ್ ಯುನಿವರ್ಸಿಟಿ ವಾಯು ಗುಣಮಟ್ಟ ಜೀವನ ಸೂಚ್ಯಂಕ (ಎಕ್ಯೂಎಲ್ಐ) 2023ರ ವರದಿ ಪ್ರಕಾರ, ಭಾರತ ಜಾಗತಿಕವಾಗಿ ಎರಡನೇ ಹೆಚ್ಚು ಮಾಲಿನ್ಯ ದೇಶವಾಗಿದ್ದು, ಜಗತ್ತಿನಲ್ಲೆ ಹೆಚ್ಚು ಮಾಲಿನ್ಯ ನಗರ ಎಂದರೆ ಅದು ದೆಹಲಿಯಾಗಿದೆ.