ಕರ್ನಾಟಕ

karnataka

ETV Bharat / sukhibhava

ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಈ ಸೂಪರ್​ ಫುಡ್​ - ಆಹಾರಗಳ ಆಯ್ಕೆಯಲ್ಲಿ ಎಚ್ಚರವಹಿಸಬೇಕು

ಮಿಲೆಟ್​ ಭರಿತ ಆಹಾರಗಳು ಸಾಕಷ್ಟು ಪ್ರಯೋಜನ ಹೊಂದಿದೆ. ಭಾರತದ ಸಾಂಪ್ರದಾಯಿಕ ಈ ಆಹಾರದಿಂದ ಆರೋಗ್ಯದ ಗುರಿ ಸಾಧಿಸಬಹುದು.

Include this super food in your diet
Include this super food in your diet

By

Published : Jun 19, 2023, 1:34 PM IST

ಆರೋಗ್ಯದ ಗುರಿಗಳೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದೇ ರುಚಿಕರ ಸ್ವಾದಿಷ್ಟ ಆಹಾರ ತಿನ್ನಬಹುದು. ಆದರೆ, ಈ ಆಹಾರಗಳ ಆಯ್ಕೆಯಲ್ಲಿ ಎಚ್ಚರವಹಿಸಬೇಕು. ಇದು ನಿಮ್ಮ ದೇಹಕ್ಕೆ ಪೋಷಕಾಂಶವನ್ನು ನೀಡುವ ಜೊತೆಗೆ ಜಿಹ್ವೆಯ ರುಚಿಯನ್ನು ತಣಿಸಬೇಕು.

ಸೂಪರ್​ಫುಡ್​ಗಳ ಕಲ್ಪನೆ ಪ್ರಾಚೀನ ಕಾಲದಿಂದಲೂ ಇವೆ. ಸಂಸ್ಕೃತಿಯಲ್ಲಿ ಬೇರೂರಿವ ಇದು ಜಾಗತಿಕವಾಗಿ ಮನ್ನಣೆಯನ್ನು ಪಡೆದಿದೆ. ನೈಸರ್ಗಿಕವಾಗಿ ಲಭ್ಯವಾಗರುವ ಈ ಸೂಪರ್​ಫುಡ್​ಗಳು ದೇಹಕ್ಕೆ ಸಂಪೂರ್ಣ ಪೋಷಣೆ ನೀಡುತ್ತದೆ. ಪ್ರತಿಯೊಂದು ಸೂಪರ್​ಫುಡ್​ಗಳು ವಿಶಿಷ್ಟ ಪೋಷಕಾಂಶಗಳನ್ನು ಮತ್ತು ಆರೋಗ್ಯ ಪ್ರಯೋಜನವನ್ನು ಹೊಂದಿದೆ.

ಮಿಲೆಟ್​​, ಕಾಸ್ತೂರಿ ಬೀಜ, ಅಮರಾನಾಥ ಬೀಜ ಮತ್ತಿತ್ತರ ಪದಾರ್ಥಗಳು ದೇಹದ ಆರೋಗ್ಯ ಕಾಪಾಡುವಲ್ಲಿ ನಿಜಕ್ಕೂ ಪ್ರಮುಖ ಪಾತ್ರವಹಿಸುತ್ತದೆ. ಇದು ಬಾಯಿಯ ರುಚಿಯ ಜೊತೆಗೆ ಆರೋಗ್ಯ ಸುಧಾರಣೆಯನ್ನು ಮಾಡುತ್ತದೆ. ಈ ಹಿನ್ನೆಲೆ ಮಿಲೆಟ್​ ಆಧಾರಿತ ಸ್ನಾಕ್ಸ್​ ಕಂಪನಿಯೊಂದು ಹೇಗೆ ಪ್ರತಿ ನಿತ್ಯದ ಜೀವನದಲ್ಲಿ ಇವುಗಳನ್ನು ಬಳಕೆ ಮಾಡುವ ಮೂಲಕ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದೆ.

ಜೀರ್ಣವಾಗುವ ರೋಟಿಗಳು: ಭಾರತದ ಊಟದ ಅವಶ್ಯಕ ಭಾಗದಲ್ಲಿ ಇದು ಪ್ರಮುಖವಾಗಿದೆ. ಉತ್ತಮ ಕರುಳಿನ ಆರೋಗ್ಯಕ್ಕೆ ಇದು ಪ್ರಯೋಜಕಾರಿಯಾಗಿದೆ ಎಂದು ಸಾಬೀತು ಮಾಡಿದೆ. ಈ ಹಿನ್ನೆಲೆ ಸಾಂಪ್ರದಾಯಿಕ ಹಿಟ್ಟಿಗೆ ಬದಲಾಗಿದೆ. ಆರೋಗ್ಯಯುತ ಪರ್ಯಾಯವಾಗಿ ರಾಗಿ ಮತ್ತು ಇತರ ಮಿಲೆಟ್​ಗಳನ್ನು ಬಳಕೆ ಮಾಡಲಾಗುತ್ತಿದೆ. ಮಿಲೆಟ್​ಗಳು ಸಾಮಾನ್ಯವಾಗಿ ಕರುಳು ಆರೋಗ್ಯ ಸೇರಿದಂತೆ ಹಲವು ಆರೋಗ್ಯಕರ ಲಾಭವನ್ನು ಹೊಂದಿದೆ.

ಕಿಚಡಿ: ಭಾರತದ ಸದಾ ಕಾಲದ ಸಂಪ್ರದಾಯಿಕ ಆಹಾರದಲ್ಲಿ ಇದು ಪ್ರಮುಖ ಸ್ಥಾನ ಹೊಂದಿದೆ. ಬೇಳೆಕಾಳುಗಳ ಸಮೃದ್ದ ಪ್ರಯೋಜನವನ್ನು ಇದರಿಂದ ಪಡೆಯಬಹುದು. ಜೊತೆಗೆ ಸಮತೋಲಿತ ಆಹಾರ ಪದ್ದತಿ ನಿರ್ವಹಣೆಗೆ ಇದು ಸಹಾಯ ಮಾಡುತ್ತದೆ. ಹೆಸರು ಬೇಳೆ, ತೊಗರಿ ಸೇರಿದಂತೆ ಹಲವು ಬೇಳೆಗಳ ಬಳಕೆಯಿಂದ ಆರೋಗ್ಯ ಮತ್ತು ಬಾಯಿಯ ರುಚಿಯನ್ನು ಪಡೆಯಬಹುದಾಗಿದೆ.

ಪರ್ಯಾಯ ಕಾರ್ಬೋಹೈಡ್ರೇಟ್​​: ದೇಹದ ಅಗತ್ಯ ಪೋಷಕಾಂಶ ಮತ್ತು ಮಾನಸಿಕ ಕಾರ್ಯಾಚರಣೆಗೆ ಬೆಂಬಲವಾಗಿ ಕಾರ್ಬೋಹೈಡ್ರೇಟ್​ ಕೆಲಸ ಮಾಡುತ್ತದೆ. ಆದಾಗ್ಯೂ ಸರಿಯಾದ ರೀತಿಯ ಕಾರ್ಬೋಹೈಡ್ರೇಟ್​ ವಿಧವನ್ನು ಆಯ್ಕೆ ಮಾಡುವ ಮೂಲಕ ಇದರ ನಿರ್ವಹಣೆ ಮಾಡಬಹುದು. ಪೋಷಕಾಂಶ, ಫೈಬರ್​​ ಮತ್ತು ಸುಸ್ಥಿರ ಶಕ್ತಿಯನ್ನು ಈ ಕಾರ್ಬೋ ಹೈಡ್ರೇಟ್​ ನೀಡುತ್ತದೆ. ಮಿಲೆಟ್​ ಆಧಾರಿತ ಆಹಾರಗಳು ಪ್ರಖ್ಯಾತ ಕಾರ್ಬೋಹೈಡ್ರೇಟ್​​ಗೆ ಬದಲಿಯಾಗಿ ಬಳಕೆ ಮಾಡಬಹುದಾಗಿದೆ.

ಮೈಂಡ್​ಫುಲ್​ ಟೀ: ಚೀಯಾ ಬೀಜಗಳದ ಸಂಪದ್ಬರಿತ ಟೀಗಳು ಇದಾಗಿದೆ. ಒಮೆಗಾ3, ಫ್ಯಾಟಿ ಆ್ಯಸಿಡ್​​, ಆ್ಯಂಟಿಆಕ್ಸಿಡೆಂಟ್​, ಫೈಬರ್​​, ಮತ್ತು ಅಗತ್ಯ ಮಿನರಲ್ಸ್​ಗಳಿಂದ ಕೂಡ ಚೀಯಾ ಜೀಜಗಳ ಪಾನೀಯಾ ಅನೇಕ ಆರೋಗ್ಯ ಪ್ರಯೋಜನ ಹೊಂದಿದೆ.

ಅಸಾಂಪ್ರದಾಯಿಕ ಹಾಲು: ಸಸ್ಯಾಧಾರಿತ ಪರ್ಯಾಯಗಳು ಆರೋಗದಯ ವೃದ್ಧಿಯಲ್ಲಿ ಗಮನಾರ್ಹ ಪ್ರಯೋಜನವೊಂದಿದೆ. ಮಿಲೆಟ್​ ಹಾಲುಗಳು ಸಮೃದ್ದ ವಿಟಮಿನ್​, ಮಿನರಲ್ಸ್​​ ಮತ್ತು ಆ್ಯಂಟಿಆಕ್ಸಿಡೆಂಟ್​​ ಹೊಂದಿದ್ದು, ಇದು ಸಂಪೂರ್ಣ ಯೋಗಕ್ಷೇಮಕ್ಕೆ ಸಹಾಯ ಮಾಡುತ್ತದೆ. ಕ್ರೀಮ್​ ಭರಿತವಾದ ಸಿಹಿಯಾದ ಈ ಹಾಲುಗಳನ್ನು ಸ್ಮೂಥಿಗಳಾಗಿ ಬಳಕೆ ಮಾಡಬಹುದು. ಲ್ಯಾಕ್ಟೋಸ್​​ ಆಗದವರು ಅಥವಾ ವೆಗಾನ್​ ಆಹಾರ ಪದ್ಧತಿ ಹೊಂದಿರುವವರಿಗೆ ಇದು ಉತ್ತಮ ಪರ್ಯಾಯ ಆಹಾರವಾಗಿದೆ. ಜೊತೆಗೆ ಮಿಲೆಟ್​ ಹಾಲಿನಲ್ಲಿ ಕಡಿಮೆ ಗ್ಲೆಸೆಮಿಕ್​ ಸೂಚ್ಯಂಕ ಇದ್ದು ಇದು ರಕ್ತದ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡುತ್ತದೆ.

ಇದನ್ನೂ ಓದಿ: ಗ್ರಾಹಕರು ಶಾಪಿಂಗ್​ ವೇಳೆ ಆರೋಗ್ಯಕ್ಕಿಂತ ಬೆಲೆಯಲ್ಲೇ ಜಾಸ್ತಿ ರಾಜಿ ಆಗೋದು: ಅಧ್ಯಯನ

ABOUT THE AUTHOR

...view details