ಕರ್ನಾಟಕ

karnataka

ETV Bharat / sukhibhava

ಚಳಿಗಾಲದ ನಿಮ್ಮ ಡಯಟ್​ ಹೀಗಿರಲಿ..  ಈ ಸೂಪರ್​ ಫುಡ್​ ಸೇವನೆ ಆರೋಗ್ಯಕ್ಕೆ ಉತ್ತಮ! - ಚಳಿಗಾಲದ ಸೂಪರ್​ಫುಡ್​ನಲ್ಲಿ ಪೋಷಕಾಂಶಗಳು

ಚಳಿಯ ವಿರುದ್ಧ ಹೋರಾಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ - ಪ್ರೋಟಿನ್​ ಸಮೃದ್ಧವಾಗಿರುವ ಡ್ರೈ ಪ್ರೂಟ್ಸ್​ ಸೇವನೆ ಆರೋಗ್ಯಕ್ಕೆ ಉತ್ತಮ - ಡ್ರೈಫ್ರೂಟ್ಸ್​ಗಳ ಸೇವನೆ ಲಾಭಗಳು ಇಲ್ಲಿವೆ.

ಚಳಿಗಾಲದ ನಿಮ್ಮ ಡಯಟ್​ನಲ್ಲಿ ಸೇರಿಸಿ ಈ ಸೂಪರ್​ ಫುಡ್​ಗಳನ್ನು
include-these-super-foods-in-your-winter-diet

By

Published : Jan 10, 2023, 3:28 PM IST

ನವದೆಹಲಿ: ಚಳಿಗಾಲ ತೀವ್ರವಾಗುತ್ತಿದ್ದು, ದಿನದಿಂದ ದಿನಕ್ಕೆ ಶೀತಗಾಳಿ ಪ್ರಮಾಣ ಹೆಚ್ಚುತ್ತಿದೆ. ಇದರ ವಿರುದ್ಧ ಹೋರಾಟಕ್ಕೆ ದೇಹವನ್ನು ಹುರಿಗೊಳಿಸುವುದು ಅವಶ್ಯ. ಇದಕ್ಕಾಗಿ ನಿಮ್ಮ ಚಳಿಗಾಲದ ಸೂಪರ್​ಫುಡ್​ನಲ್ಲಿ ಪೋಷಕಾಂಶಗಳು ಅವಶ್ಯಕವಾಗಿದೆ.

ಒಣಹಣ್ಣಗಳನ್ನು ಚಳಿಗಾಲದಲ್ಲಿ ಹೆಚ್ಚು ಸೇವಿಸುವುದರಿಂದ ನಿಮ್ಮ ದೇಹವನ್ನು ಬೆಚ್ಚಗಿಡುವುದರ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಚಳಿಗಾಲದ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಶಕ್ತಿ, ಪ್ರೋಟಿನ್​, ವಿಟಮಿನ್​ ಮತ್ತು ಇತರೆ ಪೋಷಕಾಂಶಗಳನ್ನು ಈ ಒಣಹಣ್ಣುಗಳು ದೇಹಕ್ಕೆ ನೀಡುತ್ತದೆ.

ಪ್ರತಿ ಊಟದಲ್ಲಿ ಕೆಲವು ಭಾಗ ಒಣಹಣ್ಣುಗಳು ಇರುವಂತೆ ನೋಡಿಕೊಳ್ಳುವುದು ಅವಶ್ಯವಾಗಿದೆ. ನೀವು ತೂಕ ಕಳೆದುಕೊಳ್ಳಬೇಕು ಎಂದಿದ್ದರೆ, ಕೆಲವು ಡ್ರೈಫ್ರೂಟ್ಸ್​ಗಳನ್ನು ಕೈಬಿಡುವುದು ಉತ್ತಮ . ನ್ಯೂಟ್ರಿಷಿಯನ್​ ಸಮೃದ್ಧವಾಗಿರುವ ಈ ಹಣ್ಣುಗಳು ಆರೋಗ್ಯಕರ ಲಾಭವನ್ನು ಹೊಂದಿದ್ದು, ಇವು ಸೋಂಕಿನ ವಿರುದ್ಧ ಹೋರಾಡಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಜೀರ್ಣಾಂಗ ಕ್ರಿಯೆಯನ್ನು ವೃದ್ಧಿಸುತ್ತದೆ.

ಅತಿ ಹೆಚ್ಚು ಡ್ರೈ ಫ್ರೂಟ್ಸ್​ಗಳ ಸೇವನೆ ಕೂಡ ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಇದರಿಂದ ತೂಕ ಹೆಚ್ಚಳವೂ ಆಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಕೆಲವು ಡ್ರೈ ಫ್ರೂಟ್ಸ್​ಗಳ ಲಾಭ ಹೀಗಿದೆ.

ಒಣದ್ರಾಕ್ಷಿ: ಇದರಲ್ಲಿ ಮಿನರಲ್​ ಮತ್ತು ವಿಟಮಿನ್​ ಹೆಚ್ಚಿರುತ್ತದೆ. ನೈಸರ್ಗಿಕವಾಗಿ ಹೆಚ್ಚು ಸಿಹಿ ಹೊಂದಿರುವ ಇದು, ಹೆಚ್ಚಿನ ಕ್ಯಾಲೋರಿಯನ್ನು ಹೊಂದಿರುತ್ತದೆ. ಜೀರ್ಣಾಂಗಕ್ಕೆ ಇದು ಸಹಾಯ ಮಾಡುವುದರ ಜೊತೆ ಇದರಲ್ಲಿ ಹೆಚ್ಚು ಫೈಬರ್​ ಅಂಶ ಇದೆ. ಇದು ನಿಮ್ಮ ಕೊಲೆಸ್ಟ್ರಾಲ್​ ಮಟ್ಟಕ್ಕೆ ಕಡಿಮೆ ಹಾನಿಕಾರಕವಾಗಿದೆ.

ಐರನ್​, ಕ್ಯಾಲ್ಸಿಯಂ ಮತ್ತು ಬೊರೊನ್​ ಇದರಲ್ಲಿ ಇರುತ್ತದೆ. ಕೆಂಪು ರಕ್ತಕಣ ವೃದ್ಧಿಗೆ ಹಾಗೂ ರಕ್ತ ಹೀನತೆ ಸಮಸ್ಯೆಗೆ ವಿರುದ್ಧ ಇದು ಹೋರಾಡುತ್ತದೆ. ಆ್ಯಂಟಿ ಆಕ್ಸಿಡೆಂಟ್​ ಗುಣ ಹೊಂದಿದ್ದು, ಕ್ಯಾನ್ಸರ್​, ಹೃದಯ ಕಾಯಿಲೆ ವಿರುದ್ಧ ನಿಮ್ಮ ರಕ್ಷಣೆ ಮಾಡುತ್ತದೆ.

ಒಣ ಖರ್ಜೂರ:ಬಹುತೇಕರ ಮನೆಯಲ್ಲಿರುವ ಸೂಪರ್​ ಫುಡ್​ ಇದಾಗಿದೆ. ಕ್ಯಾಕ್ಸಿಯಂ, ಮೆಗ್ನಿಶಿಯಂ, ಪೋಟಾಶಿಯಂ, ಐರನ್​ ಮತ್ತು ಇತರೆ ಪೋಷಕಾಂಶಗಳಿಂದ ಸಮೃದ್ದವಾಗಿದೆ. ಇದರಲ್ಲಿನ ಪಾಲೊಪೆನಲ್​ ಉತ್ತಮ ಜೀರ್ಣ ಕ್ರಿಯೆ ಜೊತೆ ಕಾನ್ಸರ್​ ಬಾರದಂತೆ ತಡೆಯುತ್ತದೆ.

ದೇಹ ನಿರ್ಜಲೀಕರಣಗೊಳ್ಳದಂತೆ ತಡೆಯುವ ಈ ಹಣ್ಣು ಪ್ರೋಟಿನ್​ ಬಾರ್​ ಆಗಿ ಗರ್ಭಿಣಿಯರು ಬಳಸಿದರೆ, ಆರೋಗ್ಯಕ್ಕೆ ಉತ್ತಮ. ಪ್ರತಿನಿತ್ಯ ನಿಮ್ಮ ಡಯಟ್​ನಲ್ಲಿ 2 ರಿಂದ 3 ಒಣ ಖರ್ಜೂರ ಇರುವಂತೆ ನೋಡಿಕೊಳ್ಳಿ.

ಪಿಸ್ತಾ: ಪೋಟಾಶಿಯಂ ಜೊತೆ ಆರೋಗ್ಯಯುತ ಕೊಬ್ಬು ಇದರಲ್ಲಿದೆ. ಆ್ಯಂಟಿ ಇನ್ಫ್ಲಾಮೆಟರಿ ಮತ್ತು ಆ್ಯಂಟಿ ಆಕ್ಸಿಡೆಂಟ್​ ಪರಿಣಾಮ ಹೊಂದಿದೆ. ಇದು ನಿಮ್ಮ ಹೃದಯಕ್ಕೆ ಉತ್ತಮ.ಕರುಳಿನ ಸಮಸ್ಯೆಗೆ ಇದು ಪರಿಹಾರವಾಗಿದೆ.

ತೂಕ ಕಳೆದುಕೊಳ್ಳಲು ಸಹಾಯಕವಾಗುವ ಪಿಸ್ತಾ ಹೆಚ್ಚಿನ ಪ್ರೋಟಿನ್​ ಮತ್ತು ಫೈಬರ್​ ಹೊಂದಿದೆ. ಸೋಡಿಯಂ ಹೊಂದಿರುವ ಈ ಪಿಸ್ತಾವನ್ನು ಸಾಧಾರಣ ಪ್ರಮಾಣದಲ್ಲಿ ಸೇವನೆ ಮಾಡಬೇಕಿದೆ. ಅತಿ ಹೆಚ್ಚಿನ ಉಪ್ಪಿನ ಪ್ರಮಾಣ ಸೇವನೆ ಆರೋಗ್ಯಕ್ಕೆ ಹಾನಿಯಾಗುತ್ತದೆ.

ಗೋಡುಂಬಿ:ಅತಿ ಹೆಚ್ಚಿನ ಆರೋಗ್ಯ ಲಾಭಾ ಹೊಂದಿರುವ ಗೋಡಂಬಿಯಲ್ಲಿ ಮೆಗ್ನಿಶಿಯಂ, ಕಾಪರ್​, ಮ್ಯಾಗನೀಸ್​ ಗುಣ ಇದ್ದು ಇದು ಮಿದುಳಿನ ಕಾರ್ಯ, ಮೂಳೆ ಆರೋಗ್ಯ ಮತ್ತು ರೋಗ ನಿರೋಧಕ ವ್ಯವಸ್ಥೆ ಸುಧಾರಣೆಗೆ ಪ್ರಮುಖವಾಗಿದೆ. ಇದು ಆ್ಯಂಡಿ ಆಕ್ಸಿಡೆಂಟ್​ ಗುಣಗೊಂದಿದ್ದು, ರೋಗದ ವಿರುದ್ಧ ನಿಮ್ಮನ್ನು ಕಾಪಾಡುತ್ತದೆ.

ಹೃದಯ ಆರೋಗ್ಯಕ್ಕೆ ಉತ್ತಮವಾಗಿರುವ ಗೋಡುಂಬಿ ಉತ್ತಮ ಕೊಬ್ಬನ್ನು ಹೆಚ್ಚಿಸುವ ಜೊತೆಗೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಶಕ್ತಿಯ ಮೂಲವಾಗಿರುವ ಗೋಡಂಬಿ ಅನೇಕ ಪಾದಾರ್ಥಗಳಲ್ಲಿ ಬಳಕೆ ಮಾಡಬಹುದಾಗಿದೆ. ಕಚ್ಛಾ ಗೋಡುಂಬಿಯಲ್ಲಿ ಉಪ್ಪು ಮತ್ತು ಎಣ್ಣೆ ಪ್ರಮಾಣ ಹೆಚ್ಚಿದ್ದು, ಇದನ್ನು ಹುರಿದು ತಿಂದರೆ ಲಾಭ ಹೆಚ್ಚು.

ಬಾದಾಮಿ:ಮಿದುಳಿನ ಶಕ್ತಿ ಹೆಚ್ಚಿಸುವಲ್ಲಿ ಬಾದಾಮಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದು ಬಹುತೇಕರಿಗೆ ತಿಳಿದ ವಿಷಯ. ರಾತ್ರಿ ಬಾದಾಮಿ ನೆನಸಿ ಬೆಳಗ್ಗೆ ತಿಂದರೆ ಇದು ಉತ್ತಮ ಪರಿಣಾಮ ಬೀರುತ್ತದೆ. ವಿಟಮಿನ್​ ಇ ಸಮೃದ್ದವಾಗಿದೆ.

ಮೆಗ್ನಿಶಿಯಂ ಹೆಚ್ಚಿರುವ ಈ ಬಾದಾಮಿಯು ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡುತ್ತದೆ, ಫೈಬರ್​, ಉತ್ತಮ ಕೊಬ್ಬು ಹಾಗೂ ಪ್ರೋಟಿನ್​ ಅನ್ನು ಇದು ಹೊಂದಿದೆ.

ವಾಲ್​ನಟ್​​: ಪೋಷಕಾಂಶ ಸಮೃದ್ದಿಯಾಗಿರುವ ಈ ವಾಲ್​ನಟ್​ ಚರ್ಮದ ಆರೋಗ್ಯಕ್ಕೆ ಉತ್ತಮ. ಇದರಲ್ಲಿನ ಫ್ಯಾಟಿ ಆಸಿಡ್​ಗಳು ಕೂಡ ಹೃದಯದ ಸಮಸ್ಯೆಯಿಂದ ಕಾಪಾಡುತ್ತದೆ. ಕರುಳಿನ ಆರೋಗ್ಯ ವೃದ್ಧಿಗೆ ಮಾಡುವ ವಾಲ್​ನಟ್​ ವಿಟಮಿನ್​ ಇ ಮತ್ತು ಪಾಲಿನಸ್ಯಾಚುರೆಟೆಡ್​ ಫ್ಯಾಟ್​ ಹೊಂದಿದೆದಿನಕ್ಕೆ 190 ಕ್ಯಾಲರಿ ವಾಲ್​ನಟ್​ ಸೇವನೆ ಆರೋಗ್ಯಕ್ಕೆ ಉತ್ತಮವಾಗಿದೆ.

ABOUT THE AUTHOR

...view details