ವಾಷಿಂಗ್ಟನ್: ಅಮೆರಿಕದಲ್ಲಿ ವಾರಾಂತ್ಯಕ್ಕೆ 10 ಸಾವಿರ ಮಕ್ಕಳಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ ಎಂದು ಅಮೆರಿಕನ್ ಅಕಾಡೆಮಿ ಆಫ್ ಪೀಢಿಯಾಟ್ರಿಕ್ಸ್ ಮತ್ತು ಚಿಲ್ಡ್ರನ್ ಹಾಸ್ಪಿಟಲ್ ಅಸೋಸಿಯೇಷನ್ ತಿಳಿಸಿದೆ. ಏಪ್ರಿಲ್ 27ರ ವಾರಾಂತ್ಯದ ವೇಳೆ ಸುಮಾರು 10 ಸಾವಿರ ಮಕ್ಕಳಲ್ಲಿ ಕೋವಿಡ್ ಸೋಂಕು ಕಂಡು ಬಂದಿದೆ ಎಂದು ಇದು ತಿಳಿಸಿದೆ. 2020ರಲ್ಲಿ ಜಗತ್ತನ್ನೇ ತಲ್ಲಣಗೊಳಿಸಿದ್ದ ಈ ಕೋವಿಡ್ ಸೋಂಕು ರೂಪಾಂತರ ಹೊಂದುತ್ತಿದೆ. ಲಸಿಕೆ ಬಳಿಕವೂ ಸೌಮ್ಯ ಸ್ವಭಾವದ ಸೋಂಕು ಪತ್ತೆಯಾಗುತ್ತಿದೆ. ಅಮೆರಿಕದಲ್ಲಿ 2020ರಿಂದ ಇಲ್ಲಿಯವರೆಗೆ 15.6 ಮಿಲಿಯನ್ ಮಕ್ಕಳಲ್ಲಿ ಈ ಕೋವಿಡ್ ಸೋಂಕು ದೃಢಪಟ್ಟಿದೆ.
ಇಳಿಕೆಯಾದ ಸೋಂಕು: ಕಳೆದ ಏಳು ತಿಂಗಳ ವರದಿ ಅನುಸಾರ, ವಾರದಲ್ಲಿ 27 ಸಾವಿರ ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದೆ. ಕಳೆದ ನಾಲ್ಕು ತಿಂಗಳಲ್ಲಿ ಈ ಸೋಂಕಿನಲ್ಲಿ ಇಳಿಕೆ ಕಂಡು ಬಂದಿದೆ. ಇದೀಗ ವಾರದಲ್ಲಿ 10 ಸಾವಿರ ಮಕ್ಕಳಲ್ಲಿ ಈ ಸೋಂಕು ದೃಢ ಪಟ್ಟಿದೆ ಎಂದು ವರದಿ ತಿಳಿಸಿದೆ. ಈ ವರದಿ ಅನ್ವಯ, ಮಕ್ಕಳಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದಿದ್ದಾರೆ.
ಈ ಸಂಬಂಧ ಇನ್ನು ಹೆಚ್ಚು ನಿರ್ದಿಷ್ಟ ವಯಸ್ಸಿನ ದಾಖಲೆಗಳನ್ನು ಸಂಗ್ರಹಿಸಿದ ಪರಿಶೀಲಿಸಬೆಕಿದೆ. ಈ ಮೂಲಕ ರೋಗದ ತೀವ್ರತೆ ಮತ್ತು ಹೊಸ ರೂಪಾಂತರಿ ದೀರ್ಘಾವಧಿಯಲ್ಲಿ ಎಷ್ಟು ರೂಪಾಂತಾರಿಯಾಗಿದೆ ಎಂಬುದನ್ನು ತಿಳಿಯಬೇಕಿದೆ ಎಂದಿದ್ದಾರೆ. ಸಾಂಕ್ರಾಮಿಕವೂ ಮಕ್ಕಳ ಆರೋಗ್ಯದ ಮೇಲೆ ತತ್ಕ್ಷಣದ ಪರಿಣಾಮವನ್ನು ಕುರಿತು ಗುರುತಿಸುವುದು ಅತಿ ಮುಖ್ಯವಾಗಿದೆ. ಆದರೆ, ಇದರ ಜೊತೆಗೆ ಅವರ ದೈಹಿಕ ಮತ್ತು ಮಾನಸಿಕ ಹಾಗೂ ಅವರ ಸಾಮಾಜಿಕ ಯೋಗ ಕ್ಷೇಮದಲ್ಲಿ ಬೀರುವ ಪರಿಣಾಮವನ್ನು ಕುರಿತು ಕೂಡ ಪತ್ತೆ ಮಾಡಬೇಕಿದೆ ಎಂದಿದ್ದಾರೆ.