ಕರ್ನಾಟಕ

karnataka

ETV Bharat / sukhibhava

ಹೊಸ ಅಧ್ಯಯನದಿಂದ ಭಾರತದಲ್ಲಿ ಟೈಪ್​ 2 ಮಧುಮೇಹದ ಚಿಕಿತ್ಸೆ ಸುಧಾರಣೆ: ಲ್ಯಾನ್ಸೆಟ್​ ಜರ್ನಲ್​ - ಟೈಪ್​ 2 ಮಧುಮೇಹದ ಹಲವು ಮಾದರಿ

ಭಾರತ ಮತ್ತು ಯುರೋಪ್​ನಲ್ಲಿನ ಟೈಪ್​ 2 ಮಧುಮೇಹದ ಹಲವು ಮಾದರಿಗಳ ನಡುವೆ ವಿಭಿನ್ನತೆ ಕುರಿತು ಅಧ್ಯಯನ ನಡೆಸಿದೆ.

Improving the treatment of type 2 diabetes in India; The Lancet Journal
Improving the treatment of type 2 diabetes in India; The Lancet Journal

By

Published : May 4, 2023, 3:43 PM IST

ನವದೆಹಲಿ: ಭಾರತ ಮತ್ತು ಯುರೋಪ್​ನಲ್ಲಿ ಅನುವಂಶಿಕ ಸಾಮ್ಯತೆ ಮತ್ತು ಟೈಪ್​ 2 ಮಧುಮೇಹದ ಹಲವು ಮಾದರಿಗಳ ನಡುವೆ ವಿಭಿನ್ನತೆಯನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಮೂಲಕ ದೇಶದಲ್ಲಿ ಚಿಕಿತ್ಸೆಯ ಸುಧಾರಣೆಗಳನ್ನು ಬಳಕೆ ಮಾಡಬಹುದು. ಸ್ವೀಡನ್​ನಲ್ಲಿನ ಸಂಶೋಧಕರು ಈ ಹಿಂದೆಯೇ ಮಧುಮೇಹವನ್ನು 5 ಉಪಗುಂಪುಗಳಾಗಿ ವಿಂಗಡಿಸಬಹುದು ಎಂದು ತೋರಿಸಿದ್ದಾರೆ. ಟೈಪ್​ 2 ಮಧುಮೇಹಕ್ಕೆ ಹೋಲಿಸಿದಾಗ ನಾಲ್ಕು ಉಪಗುಂಪುಗಳಲ್ಲಿ ಅನುವಂಶಿಕ ವ್ಯತ್ಯಾಸವನ್ನು ಕಾಣಬಹುದು.

ಲ್ಯಾನ್ಸೆಟ್​ ರಿಜಿನಲ್​ ಹೆಲ್ತ್​​ ಸೌತ್​ಈಸ್ಟ್​ ಏಷ್ಯಾ ಜರ್ನಲ್​ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ಈ ವರ್ಗಗಳ ವ್ಯವಸ್ಥೆಗಳು ಪಾಶ್ಚಿಮಾತ್ಯ ಭಾರತದಲ್ಲಿನ ಗುಂಪುಗಳಿಗೆ ಅನ್ವಯಿಸಲಾಗಿದೆ. ಅನುಂಶಿಕ ಸಾಮ್ಯಾತೆ ಮತ್ತು ಭಾರತ ಮತ್ತು ಯುರೋಪ್​ನಲ್ಲಿನ ಟೈಪ್​ 2 ಮಧುಮೇಹದ ಹಲವು ಮಾದರಿಗಳ ನಡುವೆ ವಿಭಿನ್ನತೆ ಬಗ್ಗೆ ಅಧ್ಯಯನ ಎತ್ತಿ ತೋರಿಸಿದೆ ಎಂದು ಸ್ವೀಡನ್​ನ ಲುಂಡ್​​ ವಿಶ್ವವಿದ್ಯಾಲಯದ ಅಸೋಸಿಯೇಟ್​ ಪ್ರೊಫೆಸರ್​ ರಶ್ಮಿ ಪ್ರಸಾದ್​ ತಿಳಿಸಿದ್ದಾರೆ.

ಭಾರತದಲ್ಲಿನ ಟೈಪ್​ 2 ಮಧುಮೇಹವನ್ನು ಅಭಿವೃದ್ಧಿಪಡಿಸಲು ಮತ್ತು ಉತ್ತಮ ಅರ್ಥೈಸಿಕೊಳ್ಳುವಿಕೆಗೆ ಹೊಸ ಹೆಜ್ಜೆ ಇಡಲು ನಾವು ಉತ್ಸಾಹದಲ್ಲಿದ್ದೇವೆ ಎಂದು ಪ್ರಸಾದ್​ ತಿಳಿಸಿದ್ದಾರೆ. ಈ ಆಧ್ಯಯನವನ್ನು ಕ್ಲಿನಿಕಲ್​ ದತ್ತಾಂಶದ ಆಧಾರದ ಮೇಲೆ ನಡೆಸಲಾಗಿದ್ದು, 2,217 ರೀಗಿಗಳನ್ನು ಮತ್ತು ಅನುವಂಶಿಯತೆ ಸಂಬಂಧಿಸಿದ ಮತ್ತು ಅನುವಂಶಿಕತೆ ಅಪಾಯದ ಸ್ಕೋರ್​ ಮೇಲೆ ವಿಶ್ಲೇಷಣೆ ನಡೆಸಲಾಗಿದೆ. ಪಾಶ್ವಿಮಾತ್ಯ ಭಾರತದಲ್ಲಿ ಟೈಪ್​ 2 ಮಧುಮೇಹ ಹೊಂದಿರುವ 821 ಜನರನ್ನು ಒಳಪಡಿಸಲಾಗಿದೆ.

ಈ ಗುಣಲಕ್ಷಣಗಳು ಯುರೋಪಿಯನ್​ ಮಧುಮೇಹ ಹೊಂದಿರುವವರಲ್ಲಿ ಎಲ್ಲ ಉಪಗುಂಪಿನಲ್ಲಿ ಪ್ರತಿಧ್ವನಿಸಲಿದೆ. ಹಿಂದಿನ ಅಧ್ಯಯನವನ್ನು ನಾವು ದೃಢೀಕರಿಸುತ್ತಿದ್ದು, ಫಲಿತಾಂಶದಲ್ಲಿ ತೋರಿಸಿದಂತೆ ನಿರ್ದಿಷ್ಟವಾಗಿ ಕಡಿಮೆ ಬಿಎಂಐ ತೋರಿಸಿದಂತೆ ಭಾರತದಲ್ಲಿ ಟೈಪ್​ 2 ಡಯಾಬೀಟಿಸ್​ ಸಾಮಾನ್ಯವಾಗಿದೆ.

ಉಪಗುಂಪುಗಳನ್ನು ತೀವ್ರತರದ ಇನ್ಸುಲಿನ್​ ಕೊರತೆ ಮಧುಮೇಹ ಎಂದು ಕರೆಯಲಾಗಿದೆ. ಇದು ಟೈಪ್​ 2 ಡಯಾಬೀಟಿಸ್​ ಒಂದು ಲಕ್ಷಣವಾಗಿದೆ. ನಿಧಾನ ಲಸಿಕೆ ಸ್ರವಿಸುವಿಕೆ ಮತ್ತು ಕಳಪೆ ಚಯಪಚಯನ ನಿಯಂತ್ರಣ ಲಕ್ಷಣ ಹೊಂದಿದೆ ಎಂದು ಸಂಶೋಧನೆ ತಿಳಿಸಿದೆ. ಭಾರತದಲ್ಲಿ ನಡೆಸಿದ ಟೈಪ್​2 ಅಧ್ಯಯನದಲ್ಲಿ ಶೇ 47ರಷ್ಟು ಮಂದಿ ತೀವ್ರತರದ ಇನ್ಸುಲಿನ್​ ಕೊರತೆ ಮಧುಮೇಹದಿಂದ ಬಳಲುತ್ತಿರುವ ಗುಂಪು ಎಂದು ಗುರುತಿಸಲಾಗಿದೆ.

ಹಿಂದಿನ ಅಧ್ಯಯನದಲ್ಲಿ ಸ್ವೀಡನ್​ನಲ್ಲಿನ ಜನಸಂಖ್ಯೆ ಸಣ್ಣ ವಯಸ್ಸಿನ ಸಂಬಂಧಿಸಿದ ಡಯಾಬೀಟಿಸ್​ ತೋರಿಸಿದೆ. ಇದು ತಡವಾಗಿ ಆರಂಭವಾಗುವ ಲಕ್ಷಣವಾಗಿದೆ. ಭಾರತದಲ್ಲಿ ಆರಂಭಿಕ ಜೀವನದಲ್ಲಿ ಪೋಷಕಾಂಶ ಕೊರತೆ ಕಂಡು ಬಂದಿದ್ದು, ಇದು ಆರಂಭಿಕ ಆಕ್ರಮಣಕಾರಿ ಟೈಪ್​ 2 ಮಧುಮೇಹದ ಕೊಡುಗೆ ಹೊಂದಿದೆ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಇದೇ ಕಾರಣಕ್ಕೆ ನಾವು ಭಾರತ ಮತ್ತು ಸ್ವೀಡನ್​ ನಡುವೆ ಹಂಚಿಕೆಯ ವ್ಯತ್ಯಾಸ ಕಾಣಬಹುದಾಗಿದೆ ಎಂದಿದ್ದಾರೆ. ಭಾರತೀಯ ಮತ್ತು ಸ್ವೀಡಿಷ್ ಗುಂಪುಗಳ ನಡುವಿನ ಆನುವಂಶಿಕ ವ್ಯತ್ಯಾಸಗಳಿಗೆ ಇದು ಆಸಕ್ತಿದಾಯಕ ಉದಾಹರಣೆಯಾಗಿದೆ. ಈ ಸಂಶೋಧನೆಯು ರೋಗದ ಕಾರಣಗಳು ಎರಡು ಜನಸಂಖ್ಯೆಯ ನಡುವೆ ಭಿನ್ನವಾಗಿರುತ್ತವೆ ಎಂದು ಅಧ್ಯಯನ ಸೂಚಿಸುತ್ತದೆ.

ಇದನ್ನೂ ಓದಿ: ಕಡಿಮೆ ಕಾರ್ಬೋಹೈಡ್ರೇಟ್​ ಇರುವ ಆಹಾರಗಳಿಂದ ಪ್ರಾಣಾಪಾಯ: ಅಧ್ಯಯನ

ABOUT THE AUTHOR

...view details