ಲಂಡನ್: ಹೊಸ ವರ್ಷದ ನಿರ್ಣಯವನ್ನು ಕೈಗೊಳ್ಳುವಾಗ ಅನೇಕ ಮಂದಿ ಜಿಮ್, ಯೋಗದಂತಹ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಫಿಟ್ ಆಗಿರಲು ನಿರ್ಧರಿಸುತ್ತಾರೆ. ಬಹುತೇಕರ ಹೊಸ ವರ್ಷದ ನಿರ್ಣಯದ ಪಟ್ಟಿಯಲ್ಲಿ ಇದು ಅಗ್ರಸ್ಥಾನವನ್ನು ಹೊಂದಿರುತ್ತದೆ. ಇದರ ಹಿಂದೆ ಸಾಮಾಜಿಕ ಜಾಲತಾಣದ ಪ್ರಭಾವ ಹೆಚ್ಚಿರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಗಮನಿಸಿದಾಗ ಬಹುತೇಕ ಜನರ ಹೊಸ ವರ್ಷದ ನಿರ್ಣಯದಲ್ಲಿ ಉತ್ತಮ ದೇಹ ಪಡೆಯುವುದು, ತೂಕವನ್ನು ಕಳೆದುಕೊಳ್ಳುವುದು ಮತ್ತು ಆಹಾರಕ್ರಮವನ್ನು ಸುಧಾರಿಸುವುದು ಪ್ರಮುಖ ಮೂರು ನಿರ್ಣಯಗಳಲ್ಲಿ ಒಂದಾಗಿದೆ ಎಂದು ಯುಗವ್ ಬಹಿರಂಗ ಪಡಿಸಿದೆ. ಈ ದೇಹದ ನೋಡುವಿಕೆ ವಿಚಾರ (lookism) ಮತ್ತು ದೇಹದ ಕುರಿತು ಅಂಶಗಳಿಂದ ಸಾಮಾಜಿಕ ಮಾಧ್ಯಮದಿಂದ ಪ್ರೇರಿಪಿತವಾಗುವುದು ವಿಷಕಾರಿ ನಿರ್ಣಯವಾಗಿದೆ ಎಂದು ಎಚ್ಚರಿಸಿದ್ದಾರೆ.
ಹೆಚ್ಚು ವ್ಯಾಯಾಮ ಮಾಡುವುದು. ತೂಕ ಕಳೆದು ಕೊಳ್ಳುವುದು ಮತ್ತು ಡಯಟ್ ಹೊಸ ವರ್ಷದ ಸಾಮಾನ್ಯ ಸಂಕಲ್ಪಗಳಾಗಿರುತ್ತದೆ. ಇದನ್ನು ಆರೋಗ್ಯ ಸುಧಾರಣೆ ನೆಪದಲ್ಲಿ ಕೈಗೊಳ್ಳಬಹುದಾಗಿದ್ದರೂ ಇದರ ಹಿಂದಿನ ಉದ್ದೇಶ ಸೌಂದರ್ಯ ಕಾಪಾಡಿಕೊಳ್ಳುವುದಾಗಿದೆ ಎಂದು ಪ್ರೊ ಹೀದರ್ ವಿಡೋಸ್ ತಿಳಿಸಿದ್ದಾರೆ.
ನಮ್ಮೊಳಗಿರುವುದನ್ನು ಬದಲಾಯಿಸಬೇಕು ಎಂದು ನಾವು ಯೋಚಿಸುತ್ತಿದ್ದೇವೆ. ನಮ್ಮನ್ನು ನಾವು ಇತರರೊಂದಿಗೆ ಹೋಲಿಕೆ ಮಾಡಿ ನಿರ್ಧರಿಸುತ್ತೇವೆ. ಅಥವಾ ನಾವು ಹೇಗೆ ಜಗತ್ತಿಗೆ ಪ್ರಸ್ತುತಪಡಿಸುತ್ತೇವೆ ಎಂಬುದನ್ನು ನಿರ್ಣಯಿಸುತ್ತೇವೆ. ಆದರೆ, ಸಾಮಾಜಿಕ ಮಾಧ್ಯಮಗಳು ಬಂದ ಬಳಿಕ ಇದು ಬದಲಾಗಿದೆ. ಈಗ ನಮಗೆ ಹೇಗೆ ಕಾಣುತ್ತೇವೆ ಎಂಬುದು ಮುಖ್ಯವಾಗಿದೆ. ಗುರುತನ್ನು ಸಂಪೂರ್ಣವಾಗಿ ಬದಲಾಯಿಸಲಾಗುತ್ತಿದೆ. ಇದು ಸ್ವಾಭಿಮಾನದ ಪ್ರಶ್ನೆಯಾದರೂ ನಾವು ಅದನ್ನು ಗುರುತಿಸುತ್ತಿಲ್ಲ ಎಂದಿದ್ದಾರೆ.