ದೇಶದ ಮೊದಲ ಆರ್ಟಿ-ಪಿಸಿಆರ್ ಒಮಿಕ್ರಾನ್ ಪರೀಕ್ಷಾ ಕಿಟ್ಗೆ ಡಿಸೆಂಬರ್ 30ರಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅನುಮತಿ ನೀಡಿದೆ. ಈ ಪರೀಕ್ಷಾ ಕಿಟ್ಗೆ ಓಮಿಸೂರ್ (Omisure) ಎಂದು ಹೆಸರಿಡಲಾಗಿದೆ.
ಈ ಕಿಟ್‌ನ ವಿನ್ಯಾಸ ಮತ್ತು ಅಭಿವೃದ್ಧಿಯನ್ನು ಯುಎಸ್ ಮೂಲದ ಕಂಪನಿ ಥರ್ಮೋ ಫಿಶರ್ ಮಾಡಿದ್ದು, ಇದನ್ನು ಟಾಟಾ ಕಂಪನಿ ತಯಾರಿಸಿದೆ. ಇದು ಎಸ್-ಜೀನ್ ಟಾರ್ಗೆಟ್ ಫೇಲ್ಯೂರ್ನನ್ನು ಬಳಸಿಕೊಂಡು, ಹೊಸ ರೂಪಾಂತರಿ ಒಮಿಕ್ರಾನ್ ಪತ್ತೆ ಮಾಡುತ್ತದೆ.
ಇಲ್ಲಿಯವರೆಗೆ ಜಿನೋಮ್ ಸೀಕ್ವೆನ್ಸಿಂಗ್ ಮೂಲಕ ಒಮಿಕ್ರಾನ್ ಪ್ರಕರಣಗಳನ್ನು ಪತ್ತೆ ಮಾಡಲಾಗುತ್ತಿತ್ತು. ಆರ್ಟಿ-ಪಿಸಿಆರ್ ಪರೀಕ್ಷೆ ಮಾಡುವಾಗ ಮೂಗು ಮತ್ತು ಬಾಯಿಯ ದ್ರವವನ್ನು ಸಂಗ್ರಹಿಸಲಾಗುತ್ತದೆ. ಇದೇ ದ್ರವದಿಂದ ಒಮಿಸೂರ್ ಕಿಟ್‌ನ ಸಹಾಯದಿಂದ ಇದೀಗ ಒಮಿಕ್ರಾನ್ ಪ್ರಕರಣಗಳನ್ನು ಪತ್ತೆ ಹಚ್ಚಬಹುದಾಗಿದೆ.ಪ್ರಸ್ತುತ ಭಾರತದಲ್ಲಿ ಈ ವಿಧಾನದ ಮೂಲಕ ಒಮಿಕ್ರಾನ್ ಪತ್ತೆ ಹಚ್ಚಲು ಬಳಸಬಹುದಾದ ಏಕೈಕ ಕಿಟ್ ಇದಾಗಿದೆ.
ಇದನ್ನೂ ಓದಿ:ಒಮಿಕ್ರಾನ್ ವಿರುದ್ಧ ಲಸಿಕೆಯ ಪರಿಣಾಮಕಾರಿತ್ವವನ್ನು ಬೂಸ್ಟರ್ ಡೋಸ್ ಶೇ.88ರಷ್ಟು ಹೆಚ್ಚಿಸುತ್ತದೆ: ಅಧ್ಯಯನ