ಕರ್ನಾಟಕ

karnataka

ETV Bharat / sukhibhava

ಮಾಡೆಲ್​ನಂತೆ ಹೊಳೆಯುವ ಕೂದಲು ನಿಮ್ಮದಾಗಬೇಕಾ?: ಹಾಗಾದರೆ ನೀವು ಟಿಪ್ಸ್​​​ ಅನುಸರಿಸಿ!

ಮಾಡೆಲ್​ಗಳ ಅಥವಾ ಸಿನಿಮಾ ನಟಿಯರ ಕೂದಲನ್ನು ನೋಡಿದಾಗ ಅಷ್ಟೇ ಚೆಂದದ ಕೂದಲು ನಮಗೆ ಇರಬೇಕಿತ್ತು ಎನ್ನಿಸುವುದು ಸಹಜ. ಅದರಂತೆ ಕೂದಲು ನಿಮ್ಮದಾಗಬೇಕು ಎಂದರೆ, ಈ ರೀತಿ ಸಲಹೆ ಪಾಲಿಸಿ.

By

Published : Jun 27, 2023, 11:40 AM IST

If you want to have hair that shines like a model, take care like them
If you want to have hair that shines like a model, take care like them

ನವದೆಹಲಿ: ಕಾಂತಿಯುತ ಕೂದಲನ್ನು ಕಾಪಾಡುವ ಒಂದೆಲ್ಲಾ ಎರಡೂ ಮಾದರಿಗಳು ಖಂಡಿತವಾಗಿಯೂ ತಿಳಿದಿರುತ್ತದೆ. ಆದರೆ, ಮಾಡೆಲ್​ನಂತೆ ಸದಾ ಕೂದಲ ಆರೈಕೆ ಮಾಡುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಇಂತಹ ಹೇರ್​ ಕೇರ್​​ಗೆ ಸಂಬಂಧ ಫ್ಯಾಷನ್​ವೀಕ್​ಗಳಲ್ಲಿ ಅನೇಕ ಹೇರ್​ಸ್ಟೈಲ್​ ಸೆಷನ್​ ಸೇರಿದಂತೆ ಅನೇಕ ಮಾದರಿಗಳ ಪ್ರಯೋಗಗಳನ್ನು ನಡೆಸಲಾಗುವುದು. ಅದ್ಬುತ ಕೂದಲ ಕಾಳಜಿ ದಿನಚರಿಗೆ ಉತ್ತಮ ಫಲಿತಾಂಶ ಪಡೆಯಲು ಅನೇಕ ಪ್ರಯೋಗಗಳನ್ನು ನಡೆಸಲಾಗುತ್ತದೆ. ಡೈಸೊನ್​ ಇಂಡಿಯಾ ಅರ್ಪಿತಾ ಮೆಹ್ತಾ ಕೂದಲ ಕಾಳಜಿ ವಿಚಾರದಲ್ಲಿ ಕೆಲವು ಅದ್ಬುತ ಸಲಹೆಗಳನ್ನು ನೀಡಿದ್ದಾರೆ. ಈ ಕುರಿತ ಕೆಲವು ಮಾಹಿತಿ ಇಲ್ಲಿದೆ.

ಉತ್ತಮ ಗುಣಮಟ್ಟದ ಹೇರ್​ಬ್ರಶ್​​:ಭಾರತದ ಮಾಡೆಲ್​ಗಳಲ್ಲಿ ಒಬ್ಬರಾದ ಅನಿತಾ ಕುಮಾರ್​​ ಈ ಸಂಬಂಧ ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ. ಕೂದಲನ್ನು ಬಾಚುವ ಹೇರ್​ ಬ್ರಶ್​ಗಳು ಸಾಮಾನ್ಯವಾಗಿ ಕೂದಲಿಗೆ ಹಾನಿ ಮಾಡುತ್ತದೆ. ಅವು ಕೂದಲನ್ನು ಕಿತ್ತು, ತುಂಡಾಗುವಂತೆ ಮಾಡುತ್ತದೆ. ಈ ಹಿನ್ನೆಲೆ ಕೂದಲಿನ ಆರೈಕೆಗೆ ಮೊದಲು ಉತ್ತಮ ಬ್ರಶ್​​ ಕೊಳ್ಳುವುದು ಅವಶ್ಯಕವಾಗಿದೆ.

ಡೈಸನ್​ ಪಡ್ಡಲ್​ ಬ್ರಶ್​​ ಅತ್ಯುತ್ತಮವಾಗಿ ವಿನ್ಯಾಸ ಮಾಡಲಾಗಿರುತ್ತದೆ. ಇದು ಕೂದಲನ್ನು ಒಣಗಿಸುವಾಗ ಮೃದುವಾಗಿಸುತ್ತದೆ. ಜೊತೆಗೆ ಇದು ಲಘವಾಗಿದ್ದು, ಇದನ್ನು ಸುಲಭವಾಗಿ ಸಮತೋಲನ ಮಾಡಬಹುದಾಗಿದೆ. ಜೊತೆಗೆ ಬುಡವನ್ನು ಶುಚಿಯಾಗಿಡುವಂತೆ ಮಾಡುತ್ತದೆ.

ತೆಂಗಿನ ಎಣ್ಣೆ ಬಳಕೆ: ಸಂಪ್ರದಾಯಿಕ ತೆಂಗಿನ ಎಣ್ಣೆ ಬಳಕೆ ಕೂದಲ ಪೋಷಣೆ ನೀಡುತ್ತದೆ. ಈ ಕುರಿತು ಮಾತನಾಡಿರುವ ಪಲ್ಲವಿ ಸಿಂಗ್​, ಪರಿಣಾಮಕಾರಿ ಟ್ರಿಕ್​ ಎಂದರೆ, ಕೂದಲ ಬುಡಕ್ಕೆ ಎಣ್ಣೆಯನ್ನು ಹಚ್ಚಿ, ಚೆನ್ನಾಗಿ ಕೂದಲನ್ನು ಕಟ್ಟಿ ಶವರ್​ ಕ್ಯಾಪ್​ ಹಾಕಿ. ಮೂವತ್ತು ನಿಮಿಷದ ಬಳಿಕ ಶ್ಯಾಂಪೂವಿನಲ್ಲಿ ಕೂದಲನ್ನು ಚೆನ್ನಾಗಿ ತೊಳೆಯುವುದರಿಂದ ಸಹಜವಾಗಿ ಕೂದಲ ಹೊಳೆಯುತ್ತದೆ.

ಉತ್ತಮ ಸಾಧನದಿಂದ ಸ್ವಯಂ ಸ್ಟೈಲ್ ಮಾಡಿ, ಕಡಿಮೆ ಹೀಟ್​ ಬಳಕೆ ಅವಶ್ಯ: ಮಾಡೆಲ್​ಗಳು ತಮ್ಮ ಫ್ಯಾಷನ್​ ಶೋಗಳಿಗಾಗಿ ಹೆಚ್ಚು ಹೀಟ್​ ಹೊಂದಿರುವ ಸ್ಟೈಲ್​ಗೆ ಮೊರೆ ಹೋಗುವುದು ಅನಿವಾರ್ಯ. ಆದರೆ, ಸ್ವಯಂ ಸ್ಟೈಲ್​ ಮಾಡುವಾಗ ಇದನ್ನು ತಡೆಯಬಹುದು. ಆದರೆ, ಕೆಲವು ಸಂದರ್ಭದಲ್ಲಿ ನಿಜಕ್ಕೂ ನಿಮಗೆ ಕೂದಲು ಅಧಿಕ ತಾಪಮಾನದ ಹೀಟ್​ ಬಳಕೆ ಮಾಡಿ ಕೂದಲ ಸ್ಟೈಲ್​ ಮಾಡಬೇಕು ಎಂದರೆ ಡೈಸನ್​ ಏರ್​ರ್ಯಾಪ್​ಟಿಎಂ ಮಲ್ಟಿ-ಸ್ಟೈಲರ್​​ ಬಳಕೆ ಮಾಡಿ ಮಾಡಬಹುದಾಗಿದೆ. ಇದರಿಂದ ಅಧಿಕ ಹೀಟ್​ನಿಂದ ಕೂದಲಿಗೆ ಯಾವುದೇ ಹಾನಿಯಾಗುವುದಿಲ್ಲ.

ಸಹಜವಾಗಿ ಕೂದಲು ಒಣಗಿಸಿ:ಕೂದಲನ್ನು ನೈಸರ್ಗಿಕವಾಗಿ ಸಹಜವಾಗಿ ಒಣಗುವಂತೆ ಮಾಡಿ. ನಿಶಾ ಯಾದವ್​ ಹೇಳುವಂತೆ ಹೇರ್​ ಸ್ಪ್ರೆ ಉಪಯೋಗ ಬೇಡ. ಬೆಣ್ಣೆ ಎಣ್ಣೆ ಅಥವಾ ಆಲಿವ್​ ಎಣ್ಣೆ ನೈಸರ್ಗಿಕ ಮಾಸ್ಕ್​ ಆಗಿದೆ. ಇದು ಕೂದಲಿಗೆ ಸಹಾಯ ಮಾಡುತ್ತದೆ.

ಮೆಕಾನಿಕಲ್​ ಹಾನಿಯಿಂದ ಕೂದಲನ್ನು ರಕ್ಷಿಸಿ: ನಮ್ಮ ಕೂದಲೂ ಮೆಕಾನಿಕಲ್​ ಆಗಿ ಹಾನಿಯಾದಾಗ ಅದನ್ನು ಸರಿಪಡಿಸುವುದು ಸಾಧ್ಯವಿಲ್ಲ. ಇಂತಹ ಹಾನಿ ತಡೆಯಲು ಮಾಡೆಲ್​ಗಳು ತಲೆ ಸ್ನಾನವಾದ ಬಳಿಕ ಹಳೆ ಟೀಶರ್ಟ್​ ಅಥವಾ ಮೈಕ್ರೋ ಫೈಬರ್​ ಟವೆಲ್​ ಮೂಲಕ ಕೂದಲನ್ನು ಕಟ್ಟುತ್ತಾರೆ. ಹಸಿ ಕೂದಲನ್ನು ಪ್ರಾಗಿಲ್​​ ಆಗಿ ಕೂದಲು ತುಂಡಾಗುತ್ತದೆ. ಜೊತೆಗೆ ಟವಲ್​ಗಳಲ್ಲಿನ ಹಾನಿಯುತ ಫೈಬರ್​ ಕೂಡ ಹೆಚ್ಚು ಪರಿಣಾಮ ಬೀರುತ್ತದೆ. ಮಲಗುವಾಗಲೂ ತಲೆ ದಿಂಬಿಗೆ ಸ್ಯಾಟಿನ್​ ಕವರ್​ ಬಳಸುವುದರಿಂದ ಕೂದಲು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಕಾಟನ್​ ದಿಂಬಿನ ಕವರ್​ಗಳು ಕಡಿಮ ಘರ್ಷಣೆ ಉಂಟು ಮಾಡಿದರೆ ಬಳಸುವುದು ಸೂಕ್ತ. ಇದು ಕೂಡ ತಲೆ ಕೂದಲು ತುಂಡಾಗುವುದು, ಒಣದಾಗುವುದನ್ನು ತಡೆಯುತ್ತದೆ.

ಇದನ್ನೂ ಓದಿ: ಕೂದಲು ಉದುರುವ ಸಮಸ್ಯೆಯೇ? ಹೆಚ್ಚು ಖರ್ಚಿಲ್ಲ, ಮನೆಯಲ್ಲೇ ಇದೆ ಪರಿಹಾರ!

ABOUT THE AUTHOR

...view details