ಬೆಂಗಳೂರು: ಬಿರು ಬೇಸಿಗೆಯ ಬಳಿಕ ಬರುವ ಮಳೆಗಾಲ ನಿಜಕ್ಕೂ ಹಿತಕರವಾಗಿತ್ತದೆ. ಈ ಋತುಮಾನದ ಬದಲಾವಣೆಯು ನಿಮ್ಮ ಚರ್ಮ, ವಾತಾವರಣದ ಆರ್ದ್ರತೆ ಮೇಲೂ ಪರಿಣಾಮ ಬೀರುತ್ತದೆ. ವಾತಾವರಣ ಬದಲಾದಂತೆ ನಿಮ್ಮ ದೈನಂದಿನ ಚರ್ಮದ ಕಾಳಜಿ ಕೂಡ ಸಂಪೂರ್ಣವಾಗಿ ಬದಲಾಗುತ್ತದೆ. ಮಳೆಗಾಲದಲ್ಲಿ ನಿಮ್ಮ ತ್ವಚೆಯ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.
ಕ್ಲೈನ್ಸಿಂಗ್: ಮಾನ್ಸೂನ್ ವೇಳೆ ನಿಮ್ಮ ತ್ವಚೆಯನ್ನು ಶುದ್ಧ ಮತ್ತು ಒಣದಾಗಿರಿಸಿಕೊಳ್ಳುವುದು ಹೆಚ್ಚು ಮುಖ್ಯ. ಮಳೆ ವಾತಾವರಣವೂ ಗಾಳಿಯಲ್ಲಿ ರೋಗಾಣು ಮತ್ತು ಕೊಳೆಯನ್ನು ಹೊತ್ತು ತರುತ್ತದೆ. ಈ ಹಿನ್ನೆಲೆ ತ್ವಚೆಯ ಕಾಳಜಿ ವಹಿಸುವುದು ಅತ್ಯಗತ್ಯವಾಗಿದೆ. ಚರ್ಮದಲ್ಲಿರುವ ಸತ್ತ ಕೋಶವನ್ನು ತೆಗೆಯುವುದು ಅವಶ್ಯಕ.
ನೈಸರ್ಗಿಕ ಆರೈಕೆ: ಮಾನ್ಸೂನ್ನಲ್ಲಿ ಆರ್ದ್ರತೆ ಹೆಚ್ಚಿರುತ್ತದೆ. ಇದರ ಅರ್ಥ ನೀವು ತಾಜಾತನದ ಪರಿಹಾರಕ್ಕೆ ಹೆಚ್ಚಿನ ಕಾಳಜಿ ಅಗತ್ಯವಾಗಿದೆ. ಹಣ್ಣು ಮತ್ತು ನಟ್ಗಳಿಂದ ಕೂಡಿದ ಉತ್ಪನ್ನಗಳು ನಿಮ್ಮ ತ್ವಚೆಗೆ ಸಾಕಷ್ಟು ಪ್ರಯೋಜನ ನೀಡುತ್ತದೆ. ಏಪ್ರಿಕಾಟ್, ಮಾವು ಮತ್ತು ಅಕ್ಕಿ ಹಾಲು, ರಾಸ್ಪ್ಬೆರಿ, ಬ್ಲೂಬೆರ್ರಿ, ಬಾದಾಮಿ ಹಾಲಿನ ಬಳಕೆ ಮಾಡಬಹುದು.
ಎಕ್ಸ್ಫೋಲಿಯೇಟ್: ಚರ್ಮದಲ್ಲಿ ಅಡಗಿರುವ ಸತ್ತ ಕೋಶಗಳನ್ನು ತೆಗೆಯಲು ಎಕ್ಸ್ಫೋಲಿಯೇಟ್ ಸಹಾಯ ಮಾಡುತ್ತದೆ. ಚರ್ಮದಲ್ಲಿ ಸತ್ತ ಚರ್ಮಗಳು ಸೇರಿರುತ್ತದೆ. ಇದರ ನಿವಾರಣೆಗೆ ಬಲವಾದ ಸ್ಕ್ರಬ್ ಬಳಸುವುದರಿಂದ ಚರ್ಮ ಕಿರಿಕಿರಿ ಅನುಭವಿಸುತ್ತದೆ. ಇದರ ಬದಲಿಗೆ ಹಣ್ಣು ಅಥವಾ ಸಸ್ಯಾಧಾರಿತ ವಸ್ತುಗಳನ್ನು ಬಳಕೆ ಮಾಡಬಹುದು. ಮುಖ್ಯವಾದ ಅಂಶ ಎಂದರೆ, ಎಕ್ಸ್ಫೋಲಿಯೇಟ್ ಅನ್ನು ವಾರದಲ್ಲಿ ಎರಡು ಬಾರಿ ಮಾತ್ರ ಮಾಡಬೇಕು.