ನವದೆಹಲಿ:ಮಂಡಿ ನೋವು ಹೆಚ್ಚು ತ್ರಾಸದಾಯಕ ಜೊತೆಗೆ ದೀರ್ಘ ಕಾಲ ಕಾಡುವ ನೋವಾಗಿದೆ. ಇದರಿಂದ ಓಡಾಡುವುದು ಕಷ್ಟವಾಗುವುದರ ಜೊತೆಗೆ ಮಾನಸಿಕ ಸ್ಥಿತಿ ಮೇಲೆ ಕೂಡ ಪರಿಣಾಮ ಬೀರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಈ ನೋವು ನಿಯಂತ್ರಣ ಹೆಚ್ಚು ಕಷ್ಟಕರವಾಗಿರಲಿದೆ. ವಾತಾವರಣದಲ್ಲಿ ವಾಯುಭಾರ ಕುಸಿತದಿಂದ ಕೀಲು ನೋವಿನ ಸಮಸ್ಯೆ ಹೆಚ್ಚುವುದರ ಜೊತೆಗೆ ಊತಕ್ಕೆ ಕೂಡ ಕಾರಣವಾಗುತ್ತದೆ. ಈ ಕೀಲು ನೋವು ಅಸಾಧ್ಯವಾದ ಮಂಡಿ ನೋವಿಗೆ ಕಾರಣವಾಗುತ್ತದೆ.
ಮಂಡಿ ನೋವು ನಿಮ್ಮ ದೈನಂದಿನ ಚಟುವಟಿಕೆಗೆ ಅಡ್ಡಿ ಮಾಡುತ್ತಿದ್ದರೆ, ಇದರಿಂದ ನಿಮ್ಮ ದೈನಂದಿನ ಚಟುವಟಿಕೆ ಮಾಡಲು ಸಾಧ್ಯವಾ ಎಂಬುದನ್ನು ಮೊದಲು ಪರಿಶೀಲನೆ ನಡೆಸಬೇಕು. ಮಂಡಿ ಕಾಲಿನ ಸಮಸ್ಯೆಗೆ ಶಸ್ತ್ರ ಚಿಕಿತ್ಸೆ ಹೊರತಾದ ಚಿಕಿತ್ಸೆಗಳನ್ನು ಕೂಡ ಪರಿಶೀಲನೆ ನಡೆಸಬೇಕಾಗುತ್ತಿದೆ. ವೈದ್ಯರು ನೀವು ಶಸ್ತ್ರ ಚಿಕಿತ್ಸೆಗೆ ಒಳಗಾಗುವುದರಿಂದ ಇದರಿಂದ ಉಪಶಮನ ಪಡೆಯಬಹುದು ಎಂದರೆ, ಅದರ ಮೊರೆ ಹೋಗುವುದು ಅನಿವಾರ್ಯ ಮತ್ತು ಅವಶ್ಯವಾಗಿರುತ್ತದೆ. ಇನ್ನು ಶಸ್ತ್ರ ಚಿಕಿತ್ಸೆ ಇಲ್ಲದೇ, ಈ ಮಂಡಿ ಕಾಲಿನ ನೋವನ್ನು ಉಪ ಶಮನ ಮಾಡುವುದು ಹೇಗೆ ಎಂದು ಚಿಂತಿಸುತ್ತಿದ್ದರೆ, ಅದಕ್ಕೆ ಸರಳ ಉಪಾಯಗಳು ಇಲ್ಲಿವೆ.
ಎನ್ಎಸ್ಎಐಡಿ: ನಾನ್ ಸ್ಟಿರಾಯ್ಡ್ ಆ್ಯಂಟಿ ಇನ್ಫ್ಲಾಮೆಟರಿ ಡ್ರಗ್ಸ್ ಅಂದರೆ ಸ್ಟಿರಾಯ್ಡ್ ಹೊರತಾದ ನೋವಿನ ಔಷಧಗಳು ಕೆಲವೊಮ್ಮೆ ಈ ಮಂಡಿ ನೋವಿನಿಂದ ನಿಮ್ಮನ್ನು ಪಾರು ಮಾಡಬಹುದಾದ ಮೊದಲ ಹಂತವಾಗಿದೆ. ಪ್ರಿಸಕ್ಷಿಪ್ನಲ್ಲಿ ಸೂಚಿಸಿದಂತಹ ಎನ್ಎಸ್ಎಐಡಿಗಳು ಈ ಮಂಡಿಕಾಲಿನ ಸಮಸ್ಯೆಗೆ ಪರಿಹಾರ ನೀಡಬಲ್ಲದು. ದೀರ್ಘಾವಧಿಯ ಹಾಗೂ ಚೇತರಿಸಿಕೊಳ್ಳುವಾಗ ಅಥವಾ ಇತರ ಚಿಕಿತ್ಸಾ ಆಯ್ಕೆಗಳನ್ನು ಮಾಡುವಾಗ ಇದು ಹೆಚ್ಚು ಅಗತ್ಯವಿರುವ ಪರಿಹಾರವನ್ನು ಒದಗಿಸುತ್ತದೆ.
ಚುಚ್ಚುಮದ್ದು: ಮಂಡಿ ನೋವಿನ ಸಮಸ್ಯೆ ನಿವಾರಣೆಗೆ ಮತ್ತೊಂದು ಪರಿಣಾಮಕಾರಿ ಚಿಕಿತ್ಸೆ ಎಂದರೆ ಚುಚ್ಚುಮದ್ದು. ಈ ಚುಚ್ಚುಮದ್ದುಗಳಲ್ಲಿ ಸ್ಟಿರಾಯ್ಡ್ ಅಥವಾ ಆ್ಯಂಟಿ ಇನ್ಫ್ಲಾಮಟರಿ ಡ್ರಗ್ ಇದ್ದು, ಇದು ತಾತ್ಕಾಲಿಕವಾಗಿ ನಿಮ್ಮ ನೋವನ್ನು ಕಡಿಮೆ ಮಾಡುತ್ತದೆ.
ಸ್ಟಿರಾಯ್ಡ್ ಇಂಜೆಕ್ಷನ್ ತಕ್ಷಣಕ್ಕೆ ನಿಮ್ಮ ಕಾರ್ಯ ನಿರ್ವಹಿಸುವುದರಿಂದ ನೋವಿನ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಹೈಲುರಾನಿಕ್ ಆ್ಯಸಿಡ್, ಲೂಬ್ರಿಕಂಟ್ಗಳು ಮತ್ತು ಆ್ಯಂಟಿ- ಇನ್ಫ್ಲಾಮೆಟರಿ ಔಷಧಗಳನ್ನು ಆಗಾಗ್ಗೆ ಇನ್ಫ್ಲಾಮೆಟರಿ ಚುಚ್ಚುಮದ್ದುಗಳಲ್ಲಿ ಸಂಯೋಜಿಸಲಾಗುತ್ತದೆ.
ಪ್ಲೇಟ್‌ಲೆಟ್ ರಿಚ್ ಪ್ಲಾಸ್ಮ (ಪಿಆರ್ಪಿ): ಕ್ರೀಡಾ ಗಾಯಗಳು ಮತ್ತು ಕೀಲು ನೋವು ಸಮಸ್ಯೆಗಳಿಗೆ ಅತಿ ಹೆಚ್ಚು ಪ್ರಖ್ಯಾತಿ ಪಡೆದ ಚಿಕಿತ್ಸಾ ವಿಧಾನ ಇದಾಗಿದೆ. ಗಾಯವಾದ ಜಾಗದಲ್ಲಿ ಪ್ಲೇಟ್‌ಲೆಟ್ ರಿಚ್ ಪ್ಲಾಸ್ಮಾವನ್ನು ಚುಚ್ಚಲು ರೋಗಿಯ ರಕ್ತವನ್ನು ಬಳಸಲಾಗುತ್ತದೆ. ಪ್ಲೇಟ್‌ಲೆಟ್‌ಗಳು ಎಂದು ಕರೆಯಲ್ಪಡುವ ರಕ್ತದ ಕಣಗಳು ಹೆಪ್ಪುಗಟ್ಟುವಿಕೆ ಮತ್ತು ಗುಣಪಡಿಸುವಿಕೆಯನ್ನು ಉತ್ತೇಜಿಸಲು ಕಾರಣವಾಗಿವೆ. ಇದು ದೇಹದ ನೈಸರ್ಗಿಕ ಚಿಕಿತ್ಸೆ ಪ್ರಕ್ರಿಯೆಗಳನ್ನು ತಮ್ಮ ಮ್ಯಾಜಿಕ್ ರೀತಿ ಕೆಲಸ ಮಾಡಲು ಮತ್ತು ನೋವನ್ನು ಗುಣಪಡಿಸಲು ಬಳಸಲಾಗುತ್ತದೆ.
ಬ್ರೇಸಿಂಗ್: ಮೊಣಕಾಲಿನ ಸ್ನಾಯುಗಳನ್ನು ಬಲಪಡಿಸಲು, ಕೀಲನ್ನು ಸ್ಥಿರಗೊಳಿಸಲು ಮತ್ತು ಅಸ್ವಸ್ಥತೆ ಮತ್ತು ಉರಿಯೂತವನ್ನು ನಿವಾರಿಸಲು ಪಟ್ಟಿಗಳನ್ನು ತಯಾರಿಸಲಾಗುತ್ತದೆ. ಈ ಪಟ್ಟಿಗಳು ಮೂಳೆ ಮೇಲ್ಮೈಗಳ ನಡುವಿನ ಘರ್ಷಣೆಯನ್ನು ಕಡಿಮೆ ಮಾಡುತ್ತದೆ, ನೋವನ್ನು ಕಡಿಮೆ ಮಾಡುತ್ತದೆ