ಲಂಡನ್: ನಿದ್ರಾಹೀನತೆ ಅನೇಕರನ್ನು ಕಾಡುವ ಸಮಸ್ಯೆ. ಈ ನಿದ್ದೆಯ ಕೊರತೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ಈಗಾಗಲೇ ಅನೇಕ ಅಧ್ಯಯನಗಳು ತಿಳಿಸಿವೆ. ಇದೀಗ ಬಂದಿರುವ ಹೊಸ ಅಧ್ಯಯನ ಅನುಸಾರ, ಒಂದು ರಾತ್ರಿ ನಿದ್ದೆ ಮಾಡದಿರುವುದರಿಂದ ನಿಮ್ಮ ಮಿದುಳು ವಯಸ್ಸು ಕಡಿಮೆ ಆಗಲಿದೆ ಎಂದು ಅಧ್ಯಯನ ತಿಳಿಸಿದೆ.
ಮಿದುಳಿನ ವಯಸ್ಸಾಗುವಿಕೆ ಮೇಲೆ ಪರಿಣಾಮ: ಒಂದು ರಾತ್ರಿಯಿಡೀ ನಿದ್ದೆ ಮಾಡದೇ ಕಳೆದರೆ, ನಿಮ್ಮ ಮಿದುಳು ಎರಡು ಮತ್ತು ಮೂರು ವರ್ಷ ವಯಸ್ಸಾದಂತೆ ಅಥವಾ ಹೆಚ್ಚಿಗೆ ವಯಸ್ಸಾದಂತೆ ಕಾಣುತ್ತದೆ ಎಂದು ಜರ್ನಲ್ ಆಫ್ ನ್ಯೂರೋ ಸೈನ್ಸ್ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ. ಇನ್ನು ರಾತ್ರಿ ಉತ್ತಮ ನಿದ್ದರೆ ಮಾಡಿದ್ದರೆ, ಇದರ ವಿರುದ್ಧ ಫಲಿತಾಂಶವನ್ನು ಕಾಣಲು ಸಾಧ್ಯವಾಗಿಲ್ಲ ಎಂದು ಜರ್ಮನಿಯ ಆರ್ಡಬ್ಲ್ಯೂಟಿಎಚ್ ಅಕೆನ್ ಯುನಿವರ್ಸಿಟಿ ಒಳಗೊಂಡ ಅಂತಾರಾಷ್ಟ್ರೀಯ ಸಂಶೋಧನಾ ತಂಡ ತಿಳಿಸಿದೆ. ಇದರ ಜೊತೆಗೆ ಮಿದುಳಿನ ಆಯಸ್ಸಿನ ಮೇಲೆ ಭಾಗಶಃ ನಿದ್ರಾ ಹೀನತೆ ಕೂಡ ಗಮನಾರ್ಹ ಪರಿಣಾಮ ಬೀರಲಿದೆ ಎಂದು ಅಧ್ಯಯನ ಒತ್ತಿ ಹೇಳಿದೆ.
ಯುವ ಜನರ ತಂಡದ ಮೇಲೆ ಅಧ್ಯಯನ: ರಾತ್ರಿ ಸಂಪೂರ್ಣ ನಿದ್ದೆಗೆಡುವುದರಿಂದ ಮಿದುಳಿನ ರೂಪ ವಿಜ್ಞಾನದಲ್ಲಿ ಆಯಸ್ಸಿನ ಬದಲಾವಣೆ ಕಾಣಬಹುದಾಗಿದೆ. ಈ ಸಂಬಂಧ ಯುವ ಜನರ ತಂಡದ ಮೇಲೆ ಸಂಶೋಧನೆ ನಡೆಸಲಾಗಿದೆ. ಈ ಬದಲಾವಣೆಗೆ ನಿದ್ದೆ ಮಾಡುವ ಮೂಲಕ ಹಿಂದಿರುಗಿಸಬಹುದು ಎಂದು ಎವಾ - ಮರಿಯಾ ಎಲ್ಮೈ ಹೊರ್ಸ್ಟ್ ತಿಳಿಸಿದ್ದಾರೆ. ನಿದ್ದೆಯಿಂದ ಮಿದುಳಿನ ವ್ಯಾಪ್ತಿ ಪರಿಣಾಮವೂ ವಯಸ್ಸಾಗುವಿಕೆಯ ರೀತಿಯ ನಿದರ್ಶನ ಹೊಂದಿದೆ ಎಂಬುದರ ಸಂಬಂಧ ನಮ್ಮ ಅಧ್ಯಯನ ಹೊಸ ಪೂರವೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.