ಬೆಂಗಳೂರು: ಸಂಬಂಧಗಳ ನಡುವೆ ಒಂದು ರೀತಿಯ ಮಧುರ, ನಂಬಿಕೆ, ವಿಶ್ವಾಸ, ಪ್ರೀತಿ, ಸ್ನೇಹಿ ವಾತಾವರಣ ಇರಬೇಕು. ಆಗಾಲೇ ಯಾವುದೇ ಸಂಬಂಧಗಳು ದೀರ್ಘಕಾಲ ಉಳಿಯಲು ಸಾಧ್ಯ. ಈ ಎಲ್ಲ ಅಂಶಗಳು ಮಾಯಾವಾದ ಸಂಬಂಧದಲ್ಲಿ ಉಳಿಯುವುದು ಉಸಿರುಗಟ್ಟಿಸುವ ವಾತಾವರಣ ಇದನ್ನೇ ವಿಷ ಪೂರಿತ ವಾತಾವರಣ ಎನ್ನುವುದು. ಇಂತಹ ಸಂಬಂಧಗಳಲ್ಲಿ ವ್ಯಕ್ತಿಯ ಜೀವನಕ್ಕೆ ಅಗಾಧ ನಷ್ಟ ತಂದೊಡ್ಡಬಹುದು. ಈ ಕಾರಣದಿಂದ ಇಂತಹ ವಾತಾವರಣ ಕಂಡು ಬಂದಾಕ್ಷಣ ಅದರಿಂದ ಹೊರ ಬರುವುದು ಉತ್ತಮ. ಅನೇಕ ವೇಳೆ ಸಂಬಂಧಗಳ ಕಟ್ಟುಪಾಡಿಗೆ ಬಿದ್ದು, ಇಂತಹ ವಿಷ ಪೂರಿತ ಸಂಬಂಧಗಳಲ್ಲೇ ಮುಂದುವರೆಯುತ್ತೇವೆ. ಇದರಿಂದ ಹೊರ ಬರಬೇಕು ಎಂದರೂ ಸಾಧ್ಯವಾಗದೇ ಅದರಲ್ಲೇ ಬದುಕುವುದು ಪ್ರತಿಯೊಬ್ಬರ ವೈಯಕ್ತಿಕ ಜೊತೆ ಅವರ ಸುತ್ತಲಿನ ಜನರ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇಂತಹ ಲಕ್ಷಣಗಳು ಯಾವುದು, ಯಾವ ಸಂದರ್ಭದಲ್ಲಿ ಇಂತಹ ಲಕ್ಷಣಗಳು ಕಂಡು ಬಂದರೆ, ಹೊರ ಬರಬೇಕು ಎಂಬ ಮಾಹಿತಿ ಇಲ್ಲಿದೆ.
ನಿರಂತರ ಒತ್ತಡ: ಜೀವನದಲ್ಲಿ ಒತ್ತಡಗಳು ಸಹಜ. ಹಾಗೇಂದ ಮಾತ್ರಕ್ಕೆ ಒತ್ತಡವೇ ಜೀವನವಾಗಬಾರದು. ಯಾವುದೇ ಒತ್ತಡಗಳಿದ್ದರೂ ಸಂಗಾತಿಗಳ ಆಸರೆ ಅದನ್ನು ನಿವಾರಿಸುತ್ತದೆ. ಆದರೆ ಸಂಗಾತಿಯೇ ಒತ್ತಡಕ್ಕೆ ಕಾರಣವಾಗುತ್ತಿದ್ದರೆ, ಅಲ್ಲಿ ನೆಮ್ಮದಿ ಕಾಣಲು ಅಸಾಧ್ಯವಾಗುತ್ತದೆ. ಇದು ಜೀವನದ ದೊಡ್ಡ ಸಂಕಷ್ಟವಾಗುತ್ತದೆ. ಈ ರೀತಿ ಸಂಗಾತಿಯಿಂದ ನಿವಾರಣೆ ಮಾಡಲಾಗದಂತಹ ಒತ್ತಡ ನೀವು ಅನುಭವಿಸುತ್ತಿದ್ದರೆ, ಅದರಿಂದ ದೂರಾಗುವುದು ಉತ್ತಮ ಪರಿಹಾರ.
ಸಂಪರ್ಕವೇ ಮುಳುವಾದಾಗ:ಸಂಗಾತಿಗಳ ನಡುವೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗದ ಸಮಸ್ಯೆ ಇದ್ದರೆ, ಅಥವಾ ಅದನ್ನು ಮುಕ್ತವಾಗಿ ಚರ್ಚಿಲು ಸಾಧ್ಯವಾಗದೇ ಇದ್ದರೆ ಇವು ನಿಮ್ಮನ್ನು ಭಾವಾನಾತ್ಮಕವಾಗಿ ಒತ್ತಡಕ್ಕೆ ದೂಡುತ್ತದೆ. ಪ್ರತಿ ಮಾತಿಗೂ ಕೋಪ, ಚರ್ಚೆ, ನಿರ್ಲಕ್ಷ್ಯ ಮಾಡುವುದು ಯಾವುದೇ ಸಂಬಂಧಗಳ ದೀರ್ಘಾಯಸ್ಸಿಗೆ ಒಳ್ಳೆಯದಲ್ಲ.