ಬೇಸಿಗೆಯಲ್ಲಿ ಹೊಟ್ಟೆ ನೋವು ಅಥವಾ ಇತರ ಸಂಬಂಧಿತ ಸಮಸ್ಯೆಗಳ ಎದುರಾಗುತ್ತದೆ. ಶಿಲೀಂದ್ರಗಳ ಸೋಂಕು ಮತ್ತು ಮೂತ್ರನಾಳದ ಸೋಂಕು ಕಾಣಿಸಿಕೊಳ್ಳುವುದು ಸಾಮಾನ್ಯ. ಹೀಗಾಗಿ ಇಂತಹ ಸಮಸ್ಯೆ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಶಿಲೀಂದ್ರಗಳ ಸೋಂಕು (Fungal infection):ಬೇಸಿಗೆ ಕಾಲದಲ್ಲಿ ನಮ್ಮ ದೇಹವನ್ನು ತಂಪಾಗಿರಿಸಲು ನಮ್ಮ ಬೆವರು ಗ್ರಂಥಿಗಳು ಹೆಚ್ಚು ಕ್ರಿಯಾಶೀಲವಾಗುತ್ತವೆ. ಇದರಿಂದಾಗಿ ನಾವು ಹೆಚ್ಚು ಬೆವರುತ್ತೇವೆ. ಈ ಸಮಯದಲ್ಲಿ ನಮ್ಮ ಕೈಗಳು, ಪಾದಗಳು, ಮೊಣಕಾಲುಗಳು ಹಾಗೂ ಇತ್ಯಾದಿಗಳ ಒಳಗಿನ ಕೀಲುಗಳು ಸೇರಿದಂತೆ ದೇಹದ ಭಾಗಗಳು ನೇರ ಗಾಳಿಗೆ ಒಡ್ಡಿಕೊಳ್ಳದ ಕಾರಣ ಶಿಲೀಂಧ್ರಗಳ ಸೋಂಕಿಗೆ ಒಳಗಾಗುತ್ತವೆ. ಆದ್ದರಿಂದ, ಶುಚಿತ್ವ ಮತ್ತು ನೈರ್ಮಲ್ಯವನ್ನು ಕಾಳಜಿ ವಹಿಸುವುದು ಬಹಳ ಮುಖ್ಯ ಎನ್ನುತ್ತಾರೆ ಡಾ.ಮನೋಜ್. ಇದಕ್ಕಾಗಿ ಈ ಕೆಳಗಿನ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು..
- ನಿತ್ಯ ಸ್ನಾನ ಮಾಡಬೇಕು ಮತ್ತು ದೇಹದ ಭಾಗಗಳನ್ನು ಸೋಪಿನಿಂದ ಸರಿಯಾಗಿ ಸ್ವಚ್ಛಗೊಳಿಸಬೇಕು
- ಸ್ನಾನದ ನಂತರ ನಿಮ್ಮ ದೇಹವನ್ನು ಸ್ವಚ್ಛವಾದ ಟವೆಲ್ ಅಥವಾ ಹತ್ತಿ ಬಟ್ಟೆಯಿಂದ ಒರೆಸಿಕೊಳ್ಳಬೇಕು
- ಅತಿಯಾದ ದೈಹಿಕ ಶ್ರಮದಿಂದ ಹೆಚ್ಚು ಬೆವರುವ ಜನರು ಅಥವಾ ಕಲುಷಿತ ಪ್ರದೇಶಗಳಲ್ಲಿ ವಾಸಿಸುವವರು ಬೇಸಿಗೆಯಲ್ಲಿ ದಿನಕ್ಕೆ ಎರಡು ಬಾರಿ ಸ್ನಾನ ಮಾಡಿದರೆ ಉತ್ತಮ
- ಕೆಲವು ವೈದ್ಯಕೀಯ ಕಾರಣಗಳಿಂದ ಹೆಚ್ಚು ಬೆವರು ಸಾಧ್ಯತೆ ಇರುತ್ತದೆ. ವೈದ್ಯರ ಸಲಹೆಯ ಮೇರೆಗೆ ಆಂಟಿಫಂಗಲ್ ಪೌಡರ್, ಕ್ರೀಮ್ ಮತ್ತು ಇತರ ಔಷಧಗಳನ್ನು ಬಳಸಬಹುದು
- ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ, ಇದರಿಂದ ಬೆವರು ಸುಲಭವಾಗಿ ಒಣಗುತ್ತದೆ.
ಮೂತ್ರನಾಳದ ಸೋಂಕುಗಳು (UTI-Urinary Tract Infections)