ಬೇಸಿಗೆಯ ಬಿಸಿ ಹೆಚ್ಚುತ್ತಿದೆ. ವಾತಾವರಣದಲ್ಲಿ ತೇವಾಂಶ ಕಡಿಮೆಯಾಗುತ್ತಿದೆ. ಇಂತಹ ಸಮಯದಲ್ಲಿ ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಮೊದಲ ಸಮಸ್ಯೆ ಎಂದರೆ ನಿರ್ಜಲೀಕರಣ. ಇದು ಸಣ್ಣ ವಿಷಯವೆಂದು ತೋರಿದರೂ ಮುಖದ ಹೊಳಪಿನ ಕೊರತೆಯಿಂದ ಹಿಡಿದು ಆಲಸ್ಯದವರೆಗೆ ಮತ್ತು ಮಲಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನೀವು ಈ ರೋಗಲಕ್ಷಣಗಳನ್ನು ಗುರುತಿಸಿದರೆ. ಅದರಿಂದ ಬೇಗನೆ ಹೊರಬರಬಹುದು
ಕೆಲವೊಮ್ಮೆ ನಮ್ಮ ದೇಹ ಮತ್ತು ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿರುತ್ತದೆ. ದೇಹದಲ್ಲಿ ಕಂಡು ಬರುವ ಇಂತಹ ಸೂಚನೆಗಳು ಪ್ರಮುಖ ಕಾಯಿಲೆಗಳಿಗೆ ಕಾರಣವಾಗಬಹುದು. ದೇಹದಲ್ಲಿ ನೀರಿನ ಕೊರತೆ ಇದ್ದರೆ ಈ ರೀತಿ ಸಮಸ್ಯೆಗಳು ನಮ್ಮ ದೇಹದಲ್ಲಿ ಉಲ್ಬಣಿಸುತ್ತವೆ. ನೀವು ಆಗಾಗ್ಗೆ ಈ ಸಮಸ್ಯೆಯಿಂದ ಬಳಲುತ್ತಿದ್ದರೆ, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಅಗತ್ಯ.
ತಲೆನೋವು ಕೂಡ ಒಂದು ಸೂಚನೆ:ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಗುರುತಿಸಲು ತಲೆನೋವು ಕೂಡ ಒಂದು ಸೂಚನೆಯಾಗಿದೆ. ಈ ಸಮಯದಲ್ಲಿ ನಿಮಗೆ ತಲೆನೋವು ಬಂದರೆ, ಒಂದು ಲೋಟ ಅಥವಾ ಎರಡು ಲೋಟ ನೀರು ಕುಡಿಯುವುದರ ಮೂಲಕ ತಲೆನೋವು ನಿಯಂತ್ರಿಸಬಹುದು. ಮತ್ತು ಮೂತ್ರ ವಿಸರ್ಜನೆ ವೇಳೆ ಮೂತ್ರದಲ್ಲಿ ಬಣ್ಣ ಕಂಡುಬಂದರೆ ತಕ್ಷಣ ಎರಡು ಗಂಟೆಗೊಮ್ಮೆ ಬಾರ್ಲಿ ನೀರನ್ನು ನಾಲ್ಕೈದು ಬಾರಿ ಕುಡಿಯುವು ಒಳ್ಳೆಯದು. ಇದರಿಂದ ಅಂತಹ ಸಮಸ್ಯೆ ಕೂಡಲೇ ಕಡಿಮೆಯಾಗುತ್ತದೆ. ನೀವು ಆಯಾಸ ಅಥವಾ ಆಲಸ್ಯದಂತಹ ಲಕ್ಷಣಗಳನ್ನು ಹೊಂದಿದ್ದರೆ ಎಳನೀರನ್ನು ಕುಡಿಯುವುದು ಉತ್ತಮ. ಇದರಲ್ಲಿರುವ ಎಲೆಕ್ಟ್ರೋಲೈಟ್‌ಗಳು ನಿಮ್ಮ ಆಲಸ್ಯವನ್ನು ಕಡಿಮೆ ಮಾಡುತ್ತದೆ. ಈ ನೀರು ದೇಹದಲ್ಲಿನ ನಿರ್ಜಲೀಕರಣದ ಸಮಸ್ಯೆಯನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಚರ್ಮವನ್ನು ಆರೋಗ್ಯಕರವಾಗಿ ಇರುವಂತೆ ಮಾಡುತ್ತದೆ.