ನವದೆಹಲಿ:ಇತ್ತೀಚಿನ ದಿನಗಳಲ್ಲಿ ನಾವು ಗೇಮಿಂಗ್ ಮತ್ತು ವ್ಯಾಯಾಮಗಳನ್ನು ಸಂಯೋಜಿಸಬಹುದು. ದೈಹಿಕವಾಗಿ ವಿಆರ್ ಗೇಮಿಂಗ್ ಆಡುವುದು ಬೇಡಿಕೆ ಇದೆ. ಇದರಲ್ಲಿ ಹೆಚ್ಚು ವಿನೋದಯಮಯವಾಗಿದ್ದು, ವ್ಯಾಯಮವನ್ನು ಮರೆತು ಬಿಡಬಹುದು.
ಫಿಟ್ನೆಸ್ ಆಧಾರಿತ ವರ್ಚುಯಲ್ ಆಯ್ಕೆಯಲ್ಲಿರಲಿ ಎಚ್ಚರ: ಬಹುತೇಕ ವರ್ಚುಯಲ್ ಗೇಮ್ನಲ್ಲಿ ಕೇವಲ ಕೈಗೆ ಮಾತ್ರ ಕೆಲಸ ಇರುತ್ತದೆ. ಆದರೆ, ಹೊರತಾಗಿ ಫಿಟ್ನೆಸ್ ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದರೆ ಸಾಕು. ನೀವು ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು. ಆದರೆ ಸರಿಯಾದ ಸ್ನಾಯುಗಳಿಗೆ ವರ್ಕ್ಔಟ್ ಸಿಗುವುದಿಲ್ಲ.
ಈ ರೀತಿಯ ಆಟಗಳನ್ನು ಆಡುವುದರಿಂದ ನಿಮ್ಮ ಅಥ್ಲೆಟಿಕ್ ಗುಣಮಟ್ಟವನ್ನು ಹೆಚ್ಚಿಸುವುದಿಲ್ಲ. ನಿಜವಾದ ವ್ಯಾಯಾಮವು ಹೃದಯ ಬಡಿತ, ಧೀರ್ಘ ಉಸಿರಾಟ ಮತ್ತು ಬೆವರುವಿಕೆಗೆ ಕಾರಣವಾಗುತ್ತದೆ. ನಿಜವಾದ ದೈಹಿಕ ತರಬೇತಿಯನ್ನು ಅನುಕರಿಸುವ VIRO MOVE ನಲ್ಲಿ ಹಲವಾರು ಕುಶಲತೆಯನ್ನು ಬೇಡುತ್ತದೆ.
ನಿಮ್ಮ ಅಭಿವೃದ್ಧಿ ಅನುಸರಿಸಿ: ಪ್ರತಿದಿನ ನಿಮ್ಮ ಹೋಮ್ ಸ್ಕೇಲ್ ಅನ್ನು ಬಳಸಿ, ರೆಕಾರ್ಡ್ ಮಾಡಿ. ಈ ಮೂಲಕ ನಿಮ್ಮ ಅನುಕೂಲಗಳು ಮತ್ತು ಸುಧಾರಣೆ ಬಗ್ಗೆ ಜಾಗೃತರಾಗುತ್ತಿರ. ನಿಮ್ಮ ಅಭಿವೃದ್ಧಿಯನ್ನು ಮೇಲ್ವಿಚಾರಣೆ ಮಾಡುವುದು ನಿರ್ಣಾಯಕ ಮತ್ತು ಸ್ಪೂರ್ತಿದಾಯಕವಾಗಿದೆ. ಆದರೆ, ಇದು ಮಿತಿಮೀರಿ ಹೋಗದಂತೆ ಹೆಚ್ಚಿಸುವುದು ಪ್ರಮುಖವಾಗಿದೆ. ನೀವು ಕಾಲಾನಂತರದಲ್ಲಿ ತರಬೇತಿ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವುದು ಅವಶ್ಯವಾಗಿದೆ.