ಚಳಿಗಾಲದಲ್ಲಿ ಚರ್ಮ ಒಣಗುವುದು ಮತ್ತು ಜೀವಾಂಶ ಕಳೆದುಕೊಳ್ಳುವುದು ಸಾಮಾನ್ಯ. ಈ ಸಮಸ್ಯೆ ಅನೇಕರನ್ನು ಕಾಡುತ್ತದೆ. ಕೆಲವರಲ್ಲಿ ಈ ಸಮಸ್ಯೆಯಿಂದಾಗಿ ಚರ್ಮ ಕಿತ್ತು, ಒಣಗಿದಂತೆ ಆಗುವುದು ಸಾಮಾನ್ಯ. ಅನೇಕರಲ್ಲಿ ಈ ರೀತಿ ಚರ್ಮದ ಸಿಪ್ಪೆ ಸುಲಿಯುವ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಈ ರೀತಿ ಚರ್ಮ ಕಿತ್ತು ಬರುವುದು ನೋವುದಾಯಕವಾಗಿದ್ದು, ಯಾತನಾಮಯ ಎಂದರೂ ತಪ್ಪಲ್ಲ. ಚಳಿಗಾಲದಲ್ಲಿ ಕಾಡುವ ಇಂತಹ ಸಮಸ್ಯೆಗೆ ಅನೇಕ ನೈಸರ್ಗಿಕ ಮದ್ದುಗಳಿದ್ದು, ಅವುಗಳನ್ನು ಪಾಲಿಸುವುದು ಅವಶ್ಯವಾಗಿದೆ.
ಆಲೋವೆರಾ: ತ್ವಚೆಯನ್ನು ತಣ್ಣಗೆ ಮಾಡಿಸುವಲ್ಲಿ ಆಲೋವೆರಾ ಪ್ರಮುಖ ಪಾತ್ರವಹಿಸುತ್ತದೆ. ಇದು ಉರಿಯೂತದ ತುರಿಕೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ತಾಜಾತನದಿಂದ ಕೂಡಿದ ಲೋಳೆರಸವನ್ನು ಚರ್ಮದ ಸಮಸ್ಯೆ ಇದ್ದ ಕಡೆ ಹಚ್ಚುವುದರಿಂದ ನೋವು ಮತ್ತು ಉರಿ ಕಡಿಮೆ ಆಗುತ್ತದೆ. ಇದು ಫ್ರಿಡ್ಜ್ನ ರೀತಿ ತ್ವಚೆಯನ್ನು ತಣ್ಣಗೆ ಮಾಡುತ್ತದೆ.
ಐಸ್: ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ಮಾಡುವುದು ಹಿತ ಅನುಭವ ನೀಡುತ್ತದೆ. ಆದರೆ ಇದರಿಂದ ಚರ್ಮವೂ ಸಿಪ್ಪೆ ಸುಲಿದ ರೀತಿ, ಬಿರಿದ ರೀತಿ ಕಾಡುತ್ತದೆ. ಈ ಹಿನ್ನೆಲೆ ಚಳಿಗಾಲದಲ್ಲಿ ಅತಿಯಾದ ಬಿಸಿ ನೀರಿನ ಬದಲಾಗಿ ಅಲ್ಪ ಬೆಚ್ಚಗಿನ ನೀರನ್ನು ಬಳಕೆ ಮಾಡುವುದು ಅಗತ್ಯ. ಅನುಭವಿಸುತ್ತಿರುವ ಚರ್ಮದ ಪ್ರದೇಶದಲ್ಲಿ ಐಸ್ಗಳನ್ನು ಇಡುವುದರಿಂದ ಅಲ್ಲಿ ಆಗುವ ಊರಿಯುತ ಕಡಿಮೆಯಾಗುತ್ತದೆ.