ಲಕ್ನೋ: ಮೂತ್ರಪಿಂಡದಲ್ಲಿನ ದೊಡ್ಡ ಮಟ್ಟದ ಕಲ್ಲುಗಳನ್ನು ನಿರ್ಲಕ್ಷ್ಯ ಮಾಡುವುದರಿಂದ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಇದು ಕ್ಯಾನ್ಸರ್ಗೆ ಕಾರಣವಾದರೂ ಅಚ್ಚರಿ ಇಲ್ಲ ಎಂದು ಪ್ರಕರಣವೊಂದು ತಿಳಿಸಿದೆ.
ಲಕ್ನೋನ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿ ವೈದ್ಯರಿಗೆ ಈ ರೀತಿ ಪ್ರಕರಣವೊಂದು ಎದುರಾಗಿದೆ. ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರ ಮೂತ್ರಪಿಂಡದಲ್ಲಿ ಕಲ್ಲಿನಿಂದಾಗಿ ಕ್ಯಾನ್ಸರ್ ಅಭಿವೃದ್ಧಿಗೊಂಡಿದೆ. 5-10 ವರ್ಷದಲ್ಲಿ ಈ ರೀತಿಯ ಪ್ರಕರಣ ಕಾಣಿಸಿಕೊಳ್ಳುತ್ತದೆ. ಇದು ರೋಗಿಯ ಜೀವಕ್ಕೆ ಅಪಾಯ ತಂದೊಡ್ಡುತ್ತದೆ ಎಂದಿದ್ದಾರೆ.
ನಿರ್ಲಕ್ಷ್ಯದ ಪರಿಣಾಮ ಕ್ಯಾನ್ಸರ್: ಇದನ್ನು ಬಿಲಟೆರಲ್ ಸ್ಟಗ್ಹೊರ್ನ್ (ಕಿಡ್ನಿ) ಕಲ್ಲುಗಳು ಸಾಮಾನ್ಯವಾಗಿ ದೊಡ್ಡದಾಗಿರುತ್ತದೆ. ಸದ್ಯ ಪತ್ತೆಯಾಗಿರುವ ಪ್ರಕರಣದಲ್ಲಿ ಬ್ಯಕ್ತಿಯ ಮೂತ್ರಪಿಂಡದಲ್ಲಿ ಈ ಕಲ್ಲುಗಳು 6-7 ಸೆಂ. ಮೀ ದೊಡ್ಡದಾಗಿದೆ. ಇವರು ತಕ್ಷಣ ಚಿಕಿತ್ಸೆ ಪಡೆಯದೇ ಹಲವು ವರ್ಷಗಳ ಕಾಲ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಅವರಲ್ಲಿ ಇದು ಕ್ಯಾನ್ಸರ್ಗೆ ಕಾರಣವಾಗಿದೆ ಎಂದು ನೆಫ್ರಾಲೊಜಿ ವಿಭಾಗದ ಮುಖ್ಯಸ್ಥರಾದ ವಿಶ್ವಜೀತ್ ಸಿಂಗ್ ತಿಳಿಸಿದ್ದಾರೆ.
ಹಲವು ಕಾಲಗಳಿಂದ ಈ ಕಲ್ಲುಗಳು ಕರಗದೇ, ಚಿಕಿತ್ಸೆ ನಿರ್ಲಕ್ಷ್ಯಿಸುವುದರಿಂದ ಕಿಡ್ನಿಯ ಗೋಡೆಗಳಿಗೆ ಹಾನಿಯಾಗುತ್ತದೆ. ಇದು ದೀರ್ಘಕಾಲ ಮುಂದುವರೆದರೆ ಅದು ಕ್ಯಾನ್ಸರ್ ಕಾರಣವಾಗುತ್ತದೆ. ಸ್ವಾಮೊಸ್ ಸೆಲ್ ಕ್ಯಾರ್ಸಿನಿಮಾದಿಂದಾಗಿ ಕಿಡ್ನಿಯಲ್ಲಿ ಕಲ್ಲು ರೂಪುಗೊಳ್ಳುತ್ತದೆ. ಇಂತಹ ಪ್ರಕರಣಗಳನ್ನು ನಾವು 5 ಅಥವಾ 10 ವರ್ಷದಲ್ಲಿ ಕಾಣಬಹುದು. ಈ ಕಿಡ್ನಿಯಿಂದ ಉಂಟಾಗಿರುವ ಕ್ಯಾನ್ಸರ್ ಇತರ ಅಂಗಗಳಿಗೂ ಹರಡಿರುವ ಕಾರಣ ವ್ಯಕ್ತಿ ಈಗ ಆಂಕೊಲಾಜಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.