ನವದೆಹಲಿ:ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪುರುಷರಿಗಾಗಿ ಮೊದಲ ಗರ್ಭ ನಿರೋಧಕ ಚುಚ್ಚುಮದ್ದಿನ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ರಿವರ್ಸಿಬಲ್ ಇನ್ಹೆಬಿಲೆಷನ್ ಆಫ್ ಸ್ಪರ್ಮ್ ಅಂಡರ್ ಗೈಡೆನ್ಸ್ (ಆರ್ಐಎಸ್ಯುಜಿ) ಎಂಬ ಹೆಸರಿನಲ್ಲಿ ಚುಚ್ಚುಮದ್ದಿನ ಪ್ರಯೋಗ ನಡೆಸಿದ್ದು, ಇದು ಸುರಕ್ಷಿತ ಬಳಕೆಯನ್ನು ಹೊಂದಿದೆ ಎಂದು ತಿಳಿಸಿದೆ. ಅಲ್ಲದೇ ಇದು ಗರ್ಭವನ್ನು ತಡೆಯುವಲ್ಲಿ ಶೇ 99.02ರಷ್ಟು ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲದೇ, ಇದರ ಬಳಕೆಯಿಂದ ಯಾವುದೇ ಅಡ್ಡ ಪರಿಣಾಮಗಳು ಕೂಡ ಹೊಂದಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ
ಪರಿಣಾಮಕಾರಿ ಚುಚ್ಚುಮದ್ದು: ಭಾರತೀಯ ಪ್ರಧಾನ ಔಷಧ ನಿಯಂತ್ರಣ ಮಂಡಳಿ (ಡಿಸಿಜಿಐ) ಒಪ್ಪಿಗೆಯೊಂದಿಗೆ ಐಸಿಎಂಆರ್ ಈ ಚುಚ್ಚುಮದ್ದಿನ ಮೂರನೇ ಹಂತದ ಪ್ರಯೋಗವನ್ನು ದೆಹಲಿ, ಉದಮ್ಪುರ, ಲುಧಿಯಾನ, ಜೈಪುರ್ ಮತ್ತು ಖರಗ್ಪುರದಲ್ಲಿ ನಡೆಸಿತು. 25 ರಿಂದ 40 ವರ್ಷದ ಆರೋಗ್ಯಯುತ 303 ಪುರಷರ ಮೇಲೆ ಈ ಪ್ರಯೋಗ ನಡೆಸಲಾಗಿದೆ. ಈ ಪುರಷರೆಲ್ಲಾ ಕುಟುಂಬ ಯೋಜನೆಯ ಚಿಕಿತ್ಸೆಗೆ ತಮ್ಮ ಹೆಂಡತಿಯರೊಂದಿಗೆ ಬಂದವ ಪುರುಷರು ಈ ಪ್ರಯೋಗದ ಭಾಗಿಯಾಗಲು ಒಪ್ಪಿಗೆ ನೀಡಿದರು
ಮತ್ತೆ ಗರ್ಭ ಸ್ಥಾಪಿಸಲುಬಹುದು: ಈ ಪುರುಷರನ್ನು ವೈದ್ಯಕೀಯ ಪ್ರಯೋಗದ ಭಾಗವಾಗಿಸಿದ ಐಸಿಎಂಆರ್, ಅವರಿಗೆ 60 ಮಿಲಿಗ್ರಾಂನ ಆರ್ಐಎಸ್ಯುಜಿ ಇಂಜೆಕ್ಷನ್ ಅನ್ನು ನೀಡಿದೆ. ಆರ್ಐಎಸ್ಯುಜಿ ಚುಚ್ಚುಮದ್ದು ಭಾಗಿದಾರ ಪುರಷರಲ್ಲಿ ವೀರ್ಯದ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಶೇ 97.3ರಷ್ಟು ಪರಿಣಾಮಕಾರಿ ಸಾಧನೆ ತೋರಿದೆ. ಇದೇ ವೇಳೆ ಗರ್ಭ ತಡೆಯುವಲ್ಲಿ ಶೇ 99.02ರಷ್ಟು ಪರಿಣಾಮಕಾರಿಯಾಗಿದೆ. ಈ ಆರ್ಐಎಸ್ಯುಜಿಯನ್ನು ಹಾರ್ಮೋನಲ್ ಇಂಜೆಕ್ಷನ್ ರೀತಿ ರಕ್ತ ನಾಳದಲ್ಲಿ ಚುಚ್ಚುವ ಅಗತ್ಯವಿಲ್ಲ. ಇದನ್ನು ದೇಹ ಭಾಗದಲ್ಲಿ ಚುಚ್ಚಿದರೆ ಸಾಕು ಎಂದು ಐಸಿಎಂಆರ್ ತಿಳಿಸಿದೆ. ಈ ವಿಧಾನವು ಫಲವತ್ತತೆಯನ್ನು ಪುನಃ ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ.
ಗರ್ಭ ನಿರೋಧಕ ಇತರ ಚಿಕಿತ್ಸೆಗೆ ಹೋಲಿಕೆ ಮಾಡಿದಾಗ ಆರ್ಐಎಸ್ಯುಜಿ ಹೆಚ್ಚಿನ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದೆ. ವಾಸೆಕ್ಟೊಮಿಯನ್ನು ಪರಿಣಾಮಕಾರಿ ಗರ್ಭ ನಿರೋಧಕ ಚಿಕಿತ್ಸೆಯಾಗಿದೆ. ಇದರಲ್ಲಿನ ಮಿತಿಗಳಿಂದ ಹೊಸ ಗುರಿಯ ಅಭಿವೃದ್ಧಿಗೆ ಮುಂದಾಗಿದ್ದು, ಆರ್ಐಎಸ್ಯುಜಿ ಚುಚ್ಚು ಮದ್ದು ಪರಿಣಾಮಕಾರಿಯಾಗಿದೆ. ಈ ಚುಚ್ಚು ಮದ್ದನ್ನು ಹಿಂದಿರುಗಿಸ ಬಹುದಾಗಿದ್ದು, ಪುರುಷ ಗರ್ಭನಿರೋಧಕ ವಿಧಾನವಾಗಿ ಸಾಮೂಹಿಕ ಬಳಕೆಗೆ ಆಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಐಸಿಎಂಆರ್ ತಿಳಿಸಿದೆ.
ಇದನ್ನೂ ಓದಿ: Cervical cancer: ಗರ್ಭಕಂಠ ಕ್ಯಾನ್ಸರ್ಗೆ ತುತ್ತಾದ ಮಿಸ್ ವರ್ಲ್ಡ್ ಅಭ್ಯರ್ಥಿ.. ಮಹಿಳೆಯರನ್ನು ಕಾಡುವ ಈ ಕ್ಯಾನ್ಸರ್ ಬಗ್ಗೆ ಅರಿವು ಅಗತ್ಯ