ಕ್ಯಾನ್ಬೆರ್ರಾ: ಅನೇಕ ಮಂದಿಯ ಮನೆಯಲ್ಲಿ ಇಂದು ಏರ್ ಕಂಡಿಷನರ್ ಇದ್ದರೂ, ಇದನ್ನು ಸಾಮರ್ಥ್ಯದಾಯಕವಾಗಿ ಬಳಕೆ ಮಾಡಿರುವ ಕುರಿತು ಅರಿವು ಹೊಂದಿರುವುದಿಲ್ಲ. ಅಲ್ಲದೇ ಇದು ಹೆಚ್ಚಿನ ಶಕ್ತಿ ಬಳಕೆ ಮಾಡುತ್ತದೆ ಎಂದು ನಂಬಿರುತ್ತಾರೆ. ಅನೇಕ ಮಂದಿ ಹಣ ಮತ್ತು ಶಕ್ತಿ ಉಳಿಸಲು ಈ ಏರ್ ಕಂಡಿಷನ್ ಅನ್ನು ಅತ್ಯಂತ ಕಡಿಮೆ ತಾಪಮಾನ ಅಂದರೆ 17ಡಿಗ್ರಿ ಸೆಲ್ಸಿಯಸ್ಗೆ ಕಡಿಮೆ ಕಾಲ ಇಟ್ಟು ಬಳಿಕ ಸ್ವಿಚ್ಡ್ ಆಫ್ ಮಾಡುತ್ತಾರೆ. ಮತ್ತೆ ಬಿಸಿಲ ಧಗೆ ಆಗುವವರೆಗೆ ಇರುವ ತಂಪು ತಾಪಮಾನದಲ್ಲಿ ಕಾಲ ಕಳೆಯುತ್ತಾರೆ. ಈ ಎಸಿಗಳು ರೂಮ್ನ ತಾಪಮಾನವನ್ನು ಅತ್ಯಂತ ಕಡಿಮೆ ಮಾಡಲು ಹೆಚ್ಚಿನ ಶಕ್ತಿ ಬಳಕೆ ಮಾಡುತ್ತದೆ.
ಕಡಿಮೆ ಕಾಲ ಮತ್ತು ಆಗ್ಗಾಗ್ಗೆ ತಂಪು ಮಾಡಿಕೊಳ್ಳಲು ಎಸಿ ಆನ್ ಮಾಡುವುದು ಮಿತವ್ಯಯ ಎಂದು ತಿಳಿದಿದ್ದರೆ ಅದು ತಪ್ಪು. ಶಕ್ತಿ ಉಳಿಸುವ ಆಯ್ಕೆ ಇದಲ್ಲ. ಈ ಹಿನ್ನೆಲೆಯಲ್ಲಿ ಮೊದಲು ಈ ಕ್ರಮವನ್ನು ಅನುಸರಿಸುವುದು ಮುಖ್ಯವಾಗುತ್ತದೆ.
- ಮೊದಲಿಗೆ ನಿಮ್ಮ ಕೋಣೆ ಅಥವಾ ಮನೆ ಸೇರುತ್ತಿರುವ ಶಾಖವನ್ನು ಕಡಿಮೆ ಮಾಡಬೇಕು
- ಶಾಖವು ಕೋಣೆ ಸೇರುವ ಮೊದಲೇ ಕಿಟಕಿ ಮತ್ತಿತ್ತರ ಮಾರ್ಗಗಳನ್ನು ಮುಚ್ಚಬೇಕು
- ಹೆಚ್ಚು ಹೆಚ್ಚು ಗಿಡಗಳನ್ನು ಬೆಳಸಿ
- ಉತ್ತರ ಮತ್ತು ಪಶ್ಚಿಮದಲ್ಲಿ ಹೆಚ್ಚುವರಿ ಶೇಡಿಂಗ್ ಅಳವಡಿಸುವ ಮೂಲಕ ಬಿಸಿಲಿನ ತಾಪ ಕಡಿಮೆ ಮಾಡಿ.
- ಮನೆಯ ಸೀಲಿಂಗ್ ಮತ್ತು ಗೋಡೆಗಳ ಸುಧಾರಿಸಬಹುದು, ಕಿಟಕಿಗಳಿಂದ ಅತಿ ಹೆಚ್ಚು ಬಿಸಿಲು ಒಳಬಾರದಂತೆ ಸೀಲಿಂಗ್ ಮತ್ತು ಗ್ಲಾಸ್ ಅಳವಡಿಕೆ ಮಾಡಬಹುದು.
- ಬಿಸಿಲಿನ ದಿನಗಳಲ್ಲಿ ಓವನ್ ಮತ್ತು ಕುಕ್ಟಾಪ್ಗಳ ಬಳಕೆಯನ್ನು ಕಡಿಮೆ ಮಾಡಿ.
ಸೋಲಾರ್ ವ್ಯವಸ್ಥೆ: ಮನೆಯ ಛಾವಣಿಯಲ್ಲಿ ಅಳವಡಿಸುವ ಸೋಲಾರ್ ವ್ಯವಸ್ಥೆಯಿಂದ ಎರಡು ರೀತಿಯ ಲಾಭವಿದೆ. ಇದು ಶಾಖವನ್ನು ಕಡಿಮೆ ಮಾಡುವ ಜೊತೆಗೆ ಶಕ್ತಿ ಬಳಕೆ ಮಾಡುತ್ತದೆ.
ಹೆಚ್ಚು ಎಸಿ ಬಳಕೆ: ಎಸಿಯಲ್ಲಿನ ಶಕ್ತಿ ಹೆಚ್ಚಿಗೆ ಮಾಡಬೇಕು ಎಂದು ಬಯಸಿದ್ದರೆ, ಅದನ್ನು ಅತಿ ಹೆಚ್ಚಿನ ಮಟ್ಟಕ್ಕೆ ಇಡುವುದು ಉತ್ತಮ. ಅಂದರೆ ಬೆಳಗಿನ ಹೊತ್ತು 26 ಸೆಲ್ಸಿಯಸ್ ಮತ್ತು ರಾತ್ರಿ 22 ಸೆಲ್ಸಿಯಸ್ಗೆ ಇಡುವುದರಿಂದ ಹೆಚ್ಚು ಆರಾಮದಾಯಕವಾಗಿರುತ್ತದೆ. ಆಧುನಿಕ ಘಟಕದಲ್ಲಿ ಅಂದರೆ ಇನ್ವರ್ಟರ್ ಟೆಕ್ನಾಲಜಿಯಲ್ಲಿ ಇದು ಒಳಾಂಗಣ ತಾಪಮಾನದ ನಿರ್ವಹಣೆಗೆ ಅನುಗುಣವಾಗಿ ಹೊಂದಿಸಿಕೊಳ್ಳುತ್ತದೆ. ಇದನ್ನು ಆಯ್ಕೆ ಮಾಡಬೇಕು ಅಷ್ಟೇ.