ಬೆನ್ನುನೋವು ವಿಶೇಷವಾಗಿ ದೈನಂದಿನ ಚಟುವಟಿಕೆಗಳು ಮತ್ತು ಔದ್ಯೋಗಿಕ ಸ್ಥಳಗಳಲ್ಲಿ ನಿಜವಾಗಿಯೂ ಕಿರಿಕಿರಿಯನ್ನುಂಟು ಮಾಡುತ್ತದೆ. ಅದು ನಮ್ಮ ಜೀವನಶೈಲಿಯನ್ನು ಬದಲಿಸುವ ಮಟ್ಟಕ್ಕೆ ಸಂಕಷ್ಟ ತಂದೊಡ್ಡುತ್ತದೆ. ಈ ನೋವಿನಿಂದ ಬಳಲುತ್ತಿರುವವರು ಬೆನ್ನಿನ ಸಮಸ್ಯೆಗಳನ್ನು ತಡೆಗಟ್ಟಲು ಬೆನ್ನಿನ ಜೋಡಣೆ ನಿರ್ಣಾಯಕ ವಿಷಯವಾಗಿದೆ. ಈ ಸ್ಥಿತಿಯ ಬಗ್ಗೆ ಮತ್ತು ಅದರ ನಿರ್ವಹಣೆಯ ಬಗ್ಗೆ ಫಿಸಿಯೋಥೆರಪಿಸ್ಟ್, ಪರ್ಯಾಯ ಔಷಧಿ ವೈದ್ಯೆ ಮತ್ತು ಯೋಗ ಶಿಕ್ಷಕಿ ಡಾ. ಜಾನ್ವಿ ಕಥಾನಿ ಅವರು ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.
ಮನುಷ್ಯನ ಬೆನ್ನಿನ ರಚನೆ ತೀರಾ ಸಂಕೀರ್ಣವಾದುದು. ಎಲುಬು ಸ್ನಾಯು, ನರತಂತು ಇವುಗಳು ಸೇರಿ ದೇಹಕ್ಕೆ ಆಧಾರ ನೀಡಿ ಚಲನೆಗೆ ಅನುಕೂಲ ಮಾಡಿಕೊಡುತ್ತವೆ. ಈ ರಚನೆಗಳಲ್ಲಿನ ಯಾವುದೇ ತಪ್ಪಾದ ಜೋಡಣೆ ಬೆನ್ನಿನ ಸುತ್ತಲೂ ನೋವನ್ನು ಉಂಟುಮಾಡಬಹುದು. ಅದು ನಾವು ನಡೆದಾಡುವ ಸಮಯದಲ್ಲಿ ಅಥವಾ ಉಳಿದ ಸಮಯದಲ್ಲಿ ಕೂಡ ಬೆನ್ನುನೋವಿಗೆ ಕಾರಣವಾಗಬಹುದು.
ಬೆನ್ನು ನೋವು ಬರಲು ಕಾರಣ?
- ಬೆನ್ನು ನೋವಿಗೆ ಕಾಣಿಸಿಕೊಳ್ಳಲು ನಮ್ಮ ಜೀವನಶೈಲಿ ಮೊದಲ ಕಾರಣ. ಅತಿಯಾದ ದೈಹಿಕ ಚಟುವಟಿಕೆಗಳು, ಬಲಹೀನತೆ ಅಥವಾ ಜಡ ಜೀವನ ಶೈಲಿಯಿಂದಾಗಿ ಬೆನ್ನಿನ ಆಂತರಿಕ ಅಂಗಗಳ ರಚನೆ ಮತ್ತು ವ್ಯಕ್ತಿಯ ಫಿಟ್‌ನೆಸ್ ಮೇಲೆ ನೇರವಾಗಿ ಪರಿಣಾಮ ಬೀರಬಹುದು.
- ಭಾರ ಎತ್ತುವ ಸಮಯದಲ್ಲಿ ಸ್ನಾಯುಗಳಿಗೆ ಪೆಟ್ಟು ಬೀಳಬಹುದು ಅಥವಾ ಬೆನ್ನಿನ ಅಸ್ಥಿರಜ್ಜುಗಳಿಗೆ ಹಾನಿಯಾಗಬಹುದು. ದೈಹಿಕ ದೌರ್ಬಲ್ಯ ಇದ್ದರೆ ಅದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.
- ಬೆನ್ನಿನ ಸ್ನಾಯುಗಳ ದೌರ್ಬಲ್ಯ ಅಥವಾ ಯಾವುದೇ ಪೌಷ್ಟಿಕಾಂಶದ ಕೊರತೆಯು ಬೆನ್ನು ಸಮಸ್ಯೆ ಉಂಟಾಗಲು ಕಾರಣವಾಗುತ್ತದೆ.
- ಅಲ್ಲದೆ, ಕಡಿಮೆ ನೀರಿನ ಸೇವನೆಯು ಕೂಡ ಬೆನ್ನುನೋವಿಗೆ ಕಾರಣವಾಗಬಹುದು.
- ಭಾವನಾತ್ಮಕ ಒತ್ತಡ ಅಥವಾ ಮಾನಸಿಕ ಖಿನ್ನತೆಯು ಬೆನ್ನಿನ ಸ್ನಾಯುವಿನ ಆಯಾಸವನ್ನು ಹೆಚ್ಚಿಸುತ್ತದೆ
- ಆತಂಕ(Anxiety)ವು ಕುತ್ತಿಗೆ ಮತ್ತು ಬೆನ್ನಿನ ನಡುವಿನ ಸಂಪರ್ಕದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಬೆನ್ನನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಹೇಗೆ?
ಬೆನ್ನಿನ ಸ್ನಾಯುಗಳು ಸಾಕಷ್ಟು ಬಲವಾಗಿರಬೇಕು:ಸರಿಯಾದ ಭಂಗಿಗಳಲ್ಲಿ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.ಅವು ದೇಹದ ಸ್ನಾಯುವಿನ ಚೌಕಟ್ಟಿನ ಪ್ರಮುಖ ಭಾಗವಾಗಿದ್ದು ಅದು ದೇಹದ ಭಂಗಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಸ್ನಾಯುಗಳಲ್ಲಿನ ಯಾವುದೇ ದೌರ್ಬಲ್ಯವು ಗಾಯ ಅಥವಾ ಒತ್ತಡ, ಶಕ್ತಿಯ ಕೊರತೆಯಿಂದಲೂ ಬೆನ್ನಿಗೆ ಹಾನಿಯಾಗುವ ಸಂಭವ ಹೆಚ್ಚಿರುತ್ತದೆ.