ಹೈದರಾಬಾದ್: ಕೊರೊನಾ ವೈರಸ್ ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ, ಮಕ್ಕಳು ಮಾರಕ ವೈರಸ್ ಸೋಂಕಿಗೆ ಒಳಗಾಗುವ ಅನೇಕ ಪ್ರಕರಣಗಳು ವರದಿಯಾಗಿವೆ. ಇದು ಮಕ್ಕಳಲ್ಲಿ ಸೌಮ್ಯ ರೋಗಲಕ್ಷಣಗಳೊಂದಿಗೆ ಪ್ರಾರಂಭವಾಗುತ್ತದೆ. ಆದರೆ, ಅದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಅದು ತೀವ್ರಗೊಳ್ಳುತ್ತದೆ. ಆದ್ದರಿಂದ, ಪೋಷಕರು ರೋಗಲಕ್ಷಣಗಳ ಬಗ್ಗೆ ಜಾಗೃತರಾಗಿರಬೇಕು ಮತ್ತು ತಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯುವುದು ಅತ್ಯಗತ್ಯ.
ನೋಯ್ಡಾದ ಮಾತೃತ್ವ ಆಸ್ಪತ್ರೆಯ ಕನ್ಸಲ್ಟೆಂಟ್ ನಿಯೋನಾಟಾಲಜಿಸ್ಟ್ ನಿಶಾಂತ್ ಬನ್ಸಾಲ್ ಮಕ್ಕಳಲ್ಲಿ ಕೋವಿಡ್-19ನ ಕೆಲವು ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಪಟ್ಟಿಮಾಡಿದ್ದಾರೆ:
ಮಕ್ಕಳಲ್ಲಿ ಕೋವಿಡ್-19 ರೋಗಲಕ್ಷಣಗಳು:
- ಜ್ವರ
- ಕೆಮ್ಮು
- ಉಸಿರಾಟ ತೊಂದರೆ
- ನೋಯುತ್ತಿರುವ ಗಂಟಲು
- ಶೀತ
- ಸ್ನಾಯು ನೋವು
- ತಲೆನೋವು
- 8 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಲ್ಲಿ ರುಚಿ ಅಥವಾ ವಾಸನೆಯ ನಷ್ಟ
- ವಾಕರಿಕೆ ಅಥವಾ ವಾಂತಿ
- ಅತಿಸಾರ
- ದಣಿವು
ವೈರಸ್ ಸೋಂಕಿಗೆ ಒಳಗಾದ ಹಲವಾರು ವಾರಗಳ ನಂತರವೂ ದೇಹದಾದ್ಯಂತ ಉರಿಯೂತ ಇರುತ್ತಿದ್ದು, ಇದು ಒಂದು ಪ್ರಮುಖ ಕಾಳಜಿಯಾಗಿದೆ. ಇದನ್ನು ಮಕ್ಕಳಲ್ಲಿ ಮಲ್ಟಿಸಿಸ್ಟಮ್ ಇನ್ಫ್ಲಮೇಟರಿ ಸಿಂಡ್ರೋಮ್ (ಎಂಐಎಸ್-ಸಿ) ಎಂದು ಕರೆಯಲಾಗುತ್ತದೆ. ಈ ಲಕ್ಷಣಗಳು ಕೊರೊನಾ ವೈರಸ್ ಸಾಂಕ್ರಾಮಿಕಕ್ಕೆ ಹೇಗೆ ಸಂಬಂಧಿಸಿವೆ ಎಂಬುದನ್ನು ಕಂಡುಹಿಡಿಯಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ.
ಎಂಐಎಸ್-ಸಿಯ ರೋಗಲಕ್ಷಣಗಳು:
- ಜ್ವರ
- ಹೊಟ್ಟೆ ನೋವು
- ವಾಂತಿ ಅಥವಾ ಅತಿಸಾರ
- ದದ್ದು
- ಕುತ್ತಿಗೆ ನೋವು
- ಕೆಂಪಾಗುವ ಕಣ್ಣುಗಳು
- ತುಂಬಾ ದಣಿವು
- ಕೆಂಪು, ಬಿರುಕು ಬಿಟ್ಟ ತುಟಿಗಳು
- ಊದಿಕೊಂಡ ಕೈ ಅಥವಾ ಕಾಲುಗಳು