ಕರ್ನಾಟಕ

karnataka

ಬಾಯಿ ಆರೋಗ್ಯದ ಬಗ್ಗೆ ಎಷ್ಟು ಅರಿವಿದೆ ನಿಮಗೆ? ಈ ಬಗ್ಗೆ ತಿಳುವಳಿಕೆ ಅವಶ್ಯಕ

By

Published : Mar 20, 2023, 12:50 PM IST

ನಿಯಮಿತವಾಗಿ ಹಲ್ಲು ಮತ್ತು ಬಾಯಿಯ ಸ್ವಚ್ಛತೆ ಕಾಪಾಡುವ ಮೂಲಕ ಅನೇಕ ಸಮಸ್ಯೆಗಳು ಮತ್ತು ರೋಗಗಳಿಂದ ದೂರವಿರಬಹುದು.

How much do you know about oral health
How much do you know about oral health

ದೇಹದ ಆರೋಗ್ಯ ಕಾಪಾಡುವಲ್ಲಿ ಬಾಯಿಯ ಆರೋಗ್ಯ ಪ್ರಮುಖ. ನಾವು ತಿನ್ನುವ ಆಹಾರ ದೇಹಕ್ಕೆ ತಲುವುದು ಬಾಯಿಯಿಂದ. ಹೀಗಾಗಿ ಬಾಯಲ್ಲಿ ಯಾವುದಾದರೂ ಸೋಂಕು ಅಥವಾ ರೋಗ ಬಂದರೆ ನಮ್ಮ ದೇಹಕ್ಕೆ ಸೇರುವ ಆಹಾರಗಳು ಅದರ ಪರಿಣಾಮಕ್ಕೆ ಒಳಗಾಗುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೂ ಕೂಡ ಕಾರಣವಾಗುತ್ತದೆ. ಬಾಯಿಯ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಮಾರ್ಚ್​ 20ರಂದು ವರ್ಲ್ಡ್​ ಒರಲ್​ ಹೆಲ್ತ್​ ಡೇ ಆಚರಣೆ ಮಾಡಲಾಗುತ್ತದೆ. ಈ ಮೂಲಕ ಜನರಿಗೆ ಬಾಯಿಯ ಕುರಿತು ಕಾಳಜಿ ಮೂಡಿಸಲಾಗುತ್ತಿದೆ.

2007ರಲ್ಲಿ ಈ ದಿನವನ್ನು ಮೊದಲ ಬಾರಿಗೆ ಆಚರಣೆ ಮಾಡಲಾಯಿತು. ಎಲ್ಲಾ ವಯೋಮಾನದ ಜನರಲ್ಲಿ ಬಾಯಿಯ ಆರೋಗ್ಯ ಮತ್ತು ಶುಚಿತ್ವದ ಪ್ರಾಮುಖ್ಯತೆ ಮತ್ತು ಅರಿವು ಮೂಡಿಸಲಾಯಿತು. ಆರಂಭದಲ್ಲಿ ಈ ದಿನವನ್ನು ಡಾ.ಚಾರ್ಲ್ಸ್​ ಗೊಡೊನ್​ ಸ್ಮರಣಾರ್ಥವಾಗಿ ವರ್ಲ್ಡ್​ ಡೆಂಟಲ್​ ಫೆಡರೇಷನ್​ ದಿನವನ್ನು ಸೆಪ್ಟೆಂಬರ್​ 12ರಂದು ಆಚರಿಸಲಾಯಿತು. 2013ರಲ್ಲಿ ಈ ದಿನವನ್ನು ಮಾರ್ಚ್​ 20ಕ್ಕೆ ಬದಲಾಯಿಸಲಾಯಿತು. ಆಗಿನಿಂದ ಪ್ರತೀವರ್ಷ ಜಾಗತಿಕವಾಗಿ ವಿವಿಧ ಥೀಮ್​ಗಳ ಮೂಲಕ ಈ ದಿನಾಚರಿಸಲಾಗುತ್ತಿದೆ.

2023ರಲ್ಲಿ ವಿಶ್ವ ಬಾಯಿ ಆರೋಗ್ಯ ದಿನದ ಘೋಷವಾಕ್ಯ 'ಬಿ ಪ್ರೌಡ್​ ಆಫ್​ ಯುವರ್​ ಮೌತ್​​' (ನಿಮ್ಮ ಬಾಯಿಯ ಬಗ್ಗೆ ಹೆಮ್ಮೆ ಇರಲಿ). ಈ ಘೋಷವಾಕ್ಯದ ಅಡಿಯಲ್ಲಿ ಎಲ್ಲಾ ಜನರಿಗೆ ನಗುವನ್ನು ಕಾಪಾಡಲು ಬಾಯಿ ಆರೋಗ್ಯದ ಕುರಿತು ಜಾಗೃತಿವಹಿಸುವಂತೆ ಎಲ್ಲರಿಗೂ ಕರೆ ನೀಡಲಾಗಿದೆ. ಈ ವಿಶ್ವ ಬಾಯಿ ಆರೋಗ್ಯ ದಿನದಂದು ಎಲ್ಲೆಡೆ ಡೆಂಟಲ್​ ಸಂಘಟನೆಗಳು ಉಚಿತ ಹಲ್ಲಿನ ತಪಾಸಣೆ ಕ್ಯಾಂಪ್​, ಸೆಮಿನಾರ್​, ಚರ್ಚೆ ಸೇರಿದಂತೆ ಬಾಯಿ ಆರೋಗ್ಯದ ಕುರಿತ ಇನ್ನಿತರ ಕಾರ್ಯಕ್ರಮಗಳನ್ನು ಏರ್ಪಡಿಸುತ್ತವೆ.

ಜಾಗೃತಿ ಕಾರ್ಯಕ್ರಮ: 2023ರಲ್ಲಿ ಹಲವು ಸಂಘಟನೆಗಳು, '#WorldOralHealthDay', '#WOHD23', '#MouthProudChallenge' ಅಥವಾ '#GoMouthProud' ಹ್ಯಾಷ್​ಟ್ಯಾಗ್​ ಅಡಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅರಿವು ಮೂಡಿಸುವ ಸಂದೇಶ, ವಿಡಿಯೋಗಳನ್ನು ಅಪ್​ಲೋಡ್​​​ ಮಾಡುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈ ಮೂಲಕ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವ ಅಗತ್ಯ ಅಂಶಗಳನ್ನು ಪಾಲನೆ ಮಾಡುವಂತೆ ಕರೆ ನೀಡಲಾಗಿದೆ. ಆರೋಗ್ಯಯುತ ವಸಡು, ಗಟ್ಟಿಯಾದ ಹಲ್ಲು, ಉತ್ತಮ ಉಸಿರಾಟ, ಶುಚಿಯಾದ ನಾಲಿಗೆ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಚಿಹ್ನೆಗಳಾಗಿದೆ. ಬಾಯಿ ಆರೋಗ್ಯದ ಸಮಸ್ಯೆಯಿಂದಾಗಿ ಸಾಮಾನ್ಯ ಮತ್ತು ಗಂಭೀರ ಕಾಯಿಲೆಗಳಿಗೆ ಕಾರಣವಾಗುವುದು ಸುಳ್ಳಲ್ಲ.

ಬಾಯಿಯ ಆರೋಗ್ಯದ ಕುರಿತು ಹೆಚ್ಚಿನ ಗಮನ ಹರಿಸದಿರುವುದು, ಹಲ್ಲು ಅಥವಾ ಬಾಯಿಯ ಆರೋಗ್ಯದ ಕುರಿತು ನಿರ್ಲಕ್ಷ್ಯಿತ ವಿಷಯವಾಗಿದೆ. ಇಂದಿಗೂ ಸಹ, ಹೆಚ್ಚಿನ ಸಂಖ್ಯೆಯ ಜನರು ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಹೆಚ್ಚಿನ ಮಹತ್ವ ನೀಡುವುದಿಲ್ಲ. ತಮ್ಮ ಹಲ್ಲು ಮತ್ತು ಬಾಯಿಯ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಪರಿಣಾಮ ಅವರು ಹಲವು ರೋಗಗಳಿಂದ ಬಳಲುತ್ತಿದ್ದಾರೆ.

ಬಾಯಿಯ ರೋಗದ ಅಂಕಿ ಅಂಶ: ಬಾಯಿಯ ಆರೋಗ್ಯದ ಅಂಕಿ ಅಂಶದ ಪ್ರಕಾರ, ಜಾಗತಿಕವಾಗಿ ಬಾಯಿಯ ರೋಗಗಳು 3.5 ಶತಕೋಟಿ ಜನರ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿ 90ರಷ್ಟು ಮಂದಿ ಹಲ್ಲಿನ ಸಮಸ್ಯೆ ಹೊಂದಿದ್ದಾರೆ. ಇನ್ನು 530 ಮಕ್ಕಳು ಕೂಡ ಹಾಲು ಹಲ್ಲಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಜೊತೆಗೆ ಶೇ 50ರಷ್ಟು ಜನರು ಒಸಡಿನ ಸಮಸ್ಯೆಗೆ ಒಳಗಾಗುತ್ತಿದ್ದು, ಇದರಿಂದ ಬಾಯಿಯ ಕ್ಯಾನ್ಸರ್​ಗೆ ಕಾರಣವಾಗುತ್ತದೆ. ಗಮನಾರ್ಹವಾಗಿ, ಪ್ರತೀವರ್ಷ ಅಂದಾಜು 300,000–700,000 ಹೊಸ ಬಾಯಿಯ ಕ್ಯಾನ್ಸರ್​ ಪ್ರಕರಣಗಳು ಪತ್ತೆಯಾಗುತ್ತಿದೆ. ಭಾರತದಲ್ಲಿನ ಶೇ 30ರಷ್ಟು ಜನರು ಬಾಯಿಯ ಕ್ಯಾನ್ಸರ್ಗೆ ತುತ್ತಾಗಿದ್ದಾರೆ.

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ವರದಿ ಅನುಸಾರ, ಬಾಯಿ ಆರೋಗ್ಯದ ಕುರಿತು ಕಡಿಮೆ ಜ್ಞಾನ ಹೊಂದಿದ್ದು, ಶೇ 70ರಷ್ಟು ಮಂದಿ ಐದು ವರ್ಷಗಳಲ್ಲಿ ಒಂದು ಬಾರಿ ಕೂಡ ಅವರ ಹಲ್ಲಿನ ತಪಾಸಣೆಗೆ ಒಳಗಾಗುವುದಿಲ್ಲ. ಇದೇ ರೀತಿ ಶೇ 90ರಷ್ಟು ಮಂದಿ ತಮ್ಮ ಹಲ್ಲನ್ನು ದಿನಕ್ಕೆ ಒಂದು ಬಾರಿ ಮಾತ್ರ ಶುಚಿಗೊಳಿಸುತ್ತಾರೆ. ವೈದ್ಯರು ಹೇಳುವ ಪ್ರಕಾರ ಕೆಲವು ಉತ್ತಮ ಅಭ್ಯಾಸಗಳು ಬಾಯಿಯ ಆರೋಗ್ಯ ಕಾಪಾಡಲು ಪ್ರಮುಖವಾಗಿದೆ.

  • ದಿನಕ್ಕೆ ಎರಡು ಬಾರಿ ಸಾಫ್ಟ್​ ಬ್ರಶ್​ನಲ್ಲಿ ಹಲ್ಲನ್ನು ಶುಚಿಗೊಳಿಸಬೇಕು
  • ವಸಡಿಗೆ ನಿಯಮಿತವಾಗಿ ಮಸಾಜ್​ ಮಾಡುವುದರಿಂದ ಬಾಯಿಗೆ ಉತ್ತಮ ರಕ್ತ ಪರಿಚಲನೆ ಆಗುತ್ತದೆ.
  • ತಾಜಾ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರ ಹೆಚ್ಚು ಸೇವಿಸಿ. ತಾಜಾ ಹಣ್ಣು, ಹಸಿರು ತರಕಾರಿ, ಬೇಳೆಗಳು ಉತ್ತಮವಾಗಿರುತ್ತದೆ.
  • ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರವನ್ನು ತಡೆಗಟ್ಟಿ
  • ಆಹಾರವನ್ನು ಚೆನ್ನಾಗಿ ಅಗೆಯಿರಿ. ಸರಿಯಾದ ರೀತಿ ಆಹಾರ ಅಗೆಯುವುದರಿಂದ ಅಗತ್ಯವಾದ ಎನ್ಜಿಮಾ ಹಲ್ಲಿಗೆ ಸುಗುತ್ತದೆ. ಜೊತೆಗೆ ಇದು ಆಹಾರ ಜೀರ್ಣಕ್ರಿಯೆಗೂ ಸಹಾಯಕವಾಗುತ್ತದೆ.
  • ಪಾನ್​ ಮಸಾಲ, ತಂಬಾಕು ಮತ್ತು ಗುಟ್ಕಾ, ಧೂಮಪಾನದಿಂದ ದೂರವಿರಿ
  • ವರ್ಷದಲ್ಲಿ ಒಂದು ಬಾರಿಯಾದರೂ ದಂತವೈದ್ಯರ ಭೇಟಿಯಾಗಿ. ಇದರಿಂದ ಏನಾದರೂ ಸಮಸ್ಯೆ ಇದ್ದರೆ ಇದನ್ನು ಪತ್ತೆ ಮಾಡಿ, ಚಿಕಿತ್ಸೆ ನೀಡಬಹುದು.

ಇದನ್ನೂ ಓದಿ: ಬೆಳಗಿನ ಹೊತ್ತು ಪೋಷಕಾಂಶಯುಕ್ತ ರುಚಿಕರ ತಿಂಡಿ ಆಯ್ಕೆ ಹೀಗಿರಲಿ..

ABOUT THE AUTHOR

...view details