ಶೀತ ಮತ್ತು ಕೆಮ್ಮಿನ ಚಿಕಿತ್ಸೆ ಅಥವಾ ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ನಾವು ಮನೆಮದ್ದುಗಳ ಬಗ್ಗೆ ಮಾತನಾಡಬೇಕಾದರೆ ಅದರಲ್ಲಿ ಜೇನು ತುಪ್ಪ ಮೊದಲ ಸ್ಥಾನದಲ್ಲಿ ಇರುತ್ತದೆ. ಇದರ ಪ್ರಯೋಜನಗಳನ್ನು ಆಯುರ್ವೇದದಲ್ಲಿ ಗುರುತಿಸಲಾಗಿದೆ ಮತ್ತು ಇದು ಪ್ರತಿ ಹಂತದಲ್ಲಿಯೂ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಅದರ ಕೆಲವು ಪ್ರಯೋಜನಗಳನ್ನು ಮತ್ತು ಇತರ ಪದಾರ್ಥಗಳೊಂದಿಗೆ ಸಂಯೋಜಿಸಿದಾಗ ಅದರ ಗುಣಲಕ್ಷಣಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಆಯುರ್ವೇದದ ಪ್ರಕಾರ ಜೇನುತುಪ್ಪವು ತನ್ನದೇ ಆದ ಶಕ್ತಿಯನ್ನು ಹೊಂದಿಲ್ಲವಂತೆ. ಆದರೆ ಅದನ್ನು ಇತರ ಪದಾರ್ಥಗಳ ಜೊತೆ ಸಂಯೋಜಿಸಿದಾಗ ಅದು ಔಷಧಿಯ ರೂಪ ಪಡೆದಯುತ್ತದೆ ಎನ್ನಲಾಗ್ತಿದೆ. ಅದಕ್ಕಾಗಿಯೇ ಜೇನುತುಪ್ಪವನ್ನು ಅನೇಕ ಆಯುರ್ವೇದ ಔಷಧಗಳು ಮತ್ತು ಗಿಡಮೂಲಿಕೆಗಳಿಗೆ ಆದರ್ಶ ಸೇರ್ಪಡೆ ಎಂದು ಪರಿಗಣಿಸಲಾಗುತ್ತದೆ. ಪರಿಣಾಮ ಜೇನುತುಪ್ಪವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಪೌಷ್ಠಿಕಾಂಶದ ಬಗ್ಗೆ ನಾವು ಮಾತನಾಡುವುದಾದರೆ ಜೇನುತುಪ್ಪವು ಫ್ರಕ್ಟೋಸ್, ನಿಯಾಸಿನ್, ಕಾರ್ಬೋಹೈಡ್ರೇಟ್ಗಳು, ರೈಬೋಫ್ಲಾವಿನ್, ವಿಟಮಿನ್ ಬಿ 6, ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಕ್ಯಾಲೋರಿಗಳು, ಸೋಡಿಯಂ, ಪೊಟ್ಯಾಸಿಯಮ್ ಮತ್ತು ಡಯೆಟರಿ ಫೈಬರ್ ಸೇರಿದಂತೆ ವಿವಿಧ ಪೋಷಕಾಂಶಗಳನ್ನು ಒಳಗೊಂಡಿದೆ. ಇದರಲ್ಲಿ ಆ್ಯಂಟಿಬಯೋಟಿಕ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳು ಹೇರಳವಾಗಿ ಕಂಡುಬರುತ್ತವೆ.
ಜೇನುತುಪ್ಪದ ಪ್ರಯೋಜನಗಳು :ಮುಂಬೈನ ಡಾ. ನಿರೋಗ್ ಆಯುರ್ವೇದಿಕ್ ಆಸ್ಪತ್ರೆಯ ಆಯುರ್ವೇದ ತಜ್ಞೆ ಮನಿಷಾ ಕಾಳೆ ಪ್ರಕಾರ, ಆಯುರ್ವೇದದಲ್ಲಿ ದೇಹದಲ್ಲಿ ಕಫ, ವಿಷ, ಬಿಕ್ಕಳಿಕೆ ಇತ್ಯಾದಿಗಳನ್ನು ತೊಡೆದುಹಾಕಲು ಜೇನುತುಪ್ಪವನ್ನು ಸೂಕ್ತವೆಂದು ಪರಿಗಣಿಸಲಾಗಿದೆ. ಜೇನುತುಪ್ಪದ ಸೇವನೆಯು ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಲವಾರು ಮನೆಮದ್ದುಗಳಲ್ಲಿ ಜೇನುತುಪ್ಪ ಇರುತ್ತದೆ. ಇದು ನಿರ್ದಿಷ್ಟ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಉದಾಹರಣೆಗೆ, ಉಗುರುಬೆಚ್ಚಗಿನ ನೀರಿನಿಂದ ಜೇನುತುಪ್ಪವನ್ನು ಸೇವಿಸುವುದು ಅಥವಾ ಹಸಿಯಾಗಿ ಸೇವಿಸುವುದು ಮಲಬದ್ಧತೆ, ನೋಯುತ್ತಿರುವ ಗಂಟಲು, ತೂಕ ನಷ್ಟ ಇತ್ಯಾದಿ ಜೀರ್ಣಕಾರಿ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.
ಇದನ್ನು ಫೇಸ್ ಮಾಸ್ಕ್ಆಗಿಯೂ ಬಳಕೆ ಮಾಡಬಹುದಾಗಿದೆ. ( ಕಡಲೆ ಹಿಟ್ಟು, ಅರಿಶಿನದೊಂದಿಗೆ ಮಿಕ್ಸ್ ಮಾಡಬೇಕು) ಈ ರೀತಿಯ ಬಳಕೆಯಿಂದ ಚರ್ಮಕ್ಕೆ ಹೊಳಪು ಬರುತ್ತದೆ. ಇದಲ್ಲದೆ, ಜೇನುತುಪ್ಪವು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು, ಗಾಯಗಳನ್ನು ಗುಣಪಡಿಸಲು, ನಿರ್ವಿಶೀಕರಣ, ಹಸಿವನ್ನು ಸುಧಾರಿಸಲು ಮತ್ತು ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ.
ಪ್ರಮುಖವಾಗಿ ಆರೋಗ್ಯ ಪ್ರಯೋಜನಗಳ ವಿಷಯದಲ್ಲಿ ಜೇನುತುಪ್ಪವು ಅನೇಕ ಇತರ ಗಿಡಮೂಲಿಕೆಗಳು ಮತ್ತು ಪದಾರ್ಥಗಳೊಂದಿಗೆ ಉತ್ತಮ ಪಾಲುದಾರ ವಸ್ತುವಾಗಿದೆ.