ಬೆಂಗಳೂರು: ಆಮ್ಲಾ ಅಥವಾ ನೆಲ್ಲಿಕಾಯಿ ಭಾರತೀಯ ಗೂಸ್ಬೆರಿ ಎಂದು ಪರಿಚಿತವಾಗಿದೆ. ಅನೇಕ ಆರೋಗ್ಯ ಪ್ರಯೋಜನವನ್ನು ಹೊಂದಿರುವ ಈ ನೆಲ್ಲಿಕಾಯಿಯನ್ನು ಭಾರತೀಯರು ಅನೇಕ ಪ್ರಕಾರದಲ್ಲಿ ವಿವಿಧ ಚಿಕಿತ್ಸೆಗಳಲ್ಲಿ ಬಳಕೆ ಮಾಡುತ್ತಾರೆ. ಇದು ತನ್ನ ವಿಶಿಷ್ಟ ರುಚಿಯಿಂದ ಪರಿಚಿತವಾಗಿದೆ. ಹುಳಿ, ಕಹಿ, ಸಿಹಿ ಮಿಶ್ರಣದ ಈ ನೆಲ್ಲಿಕಾಯಿಯನ್ನು ಸೌಂದರ್ಯ ವರ್ಧಕವಾಗಿಯೂ ಕೂಡ ಬಳಕೆ ಮಾಡಲಾಗುತ್ತದೆ.
ಆಯುರ್ವೇದಿಕ್ ಮೆಡಿಸಿನ್ ಮತ್ತು ಹೆಚ್ಚಿನ ಪೋಷಕಾಂಶ..ಡಾ ನರೇಶ್ ಗುಪ್ತಾ ಪ್ರಕಾರ, ಆಮ್ಲಾ ಎಂಬುದು ಸಾಂಪ್ರದಾಯಿಕ ಆಯುರ್ವೇದ ಚಿಕಿತ್ಸೆಯಲ್ಲಿ ಇದರ ಬಳಕೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಅಧಿಕ ಪೋಷಕಾಂಶ ಗುಣದ ನೆಲ್ಲಿಕಾಯಿಯನ್ನು ಸೂಪರ್ ಹಣ್ಣು ಎಂದು ಕರೆಯಲಾಗಿದೆ. ಇದು ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದ್ದು, ಪ್ರತಿರಕ್ಷಣಾ ವ್ಯವಸ್ಥೆ ಹೊಂದಿದೆ. ಜೊತೆಗೆ ಇದು ದೇಹದ ರ್ಯಾಡಿಕಲ್ ಮತ್ತು ಆಕ್ಸಿಡೆಂಟಿವ್ ಒತ್ತಡದ ವಿರುದ್ಧ ಹೋರಾಡುತ್ತದೆ. ದಿನಕ್ಕೆ ಒಂದು ನೆಲ್ಲಿಕಾಯಿಯನ್ನು ತಿನ್ನುವುದರಿಂದ ಕೆಮ್ಮು, ಜ್ವರ ಸೇರಿದಂತೆ ಅನೇಕ ಅನಾರೋಗ್ಯದ ವಿರುದ್ಧ ಹೋರಾಡಬಹುದಾಗಿದೆ.
ರೋಗ ನಿರೋಧಕ ವ್ಯವಸ್ಥೆ: ಆಮ್ಲಾ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಇದು ಸೋಂಕು ಮತ್ತು ರೋಗದ ವಿರುದ್ಧ ಹೋರಾಡುತ್ತದೆ. ಇದು ಬಿಳಿ ರಕ್ತ ಕಣಗಳ ಅಭಿವೃದ್ಧಿ ಹೆಚ್ಚಿಸುತ್ತದೆ. ದೇಹದ ರಕ್ಷಣೆಯನ್ನು ಹೆಚ್ಚಿಸುತ್ತದೆ. ನೆಲ್ಲಿಕಾಯಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ಇದು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅನೇಕ ಕಾಲೋಚಿತ ಮತ್ತು ಬ್ಯಾಕ್ಟೀರಿಯಾದ ಸೋಂಕನ್ನು ತಡೆಯುತ್ತದೆ.