ಹೈದರಾಬಾದ್ :ರೋಗನಿರೋಧಕ ಪ್ರತಿಕ್ರಿಯೆಯನ್ನು ಒಳಗೊಂಡ ಎಲ್ಲಾ ಕಾಯಿಲೆಗಳಿಗೆ ನೀಡುವ ಚಿಕಿತ್ಸೆಯಂತೆ ಹೋಮಿಯೋಪತಿ ಕೋವಿಡ್-19 ಚಿಕಿತ್ಸೆಯಲ್ಲಿಯೂ ಅದ್ಭುತ ವ್ಯಾಪ್ತಿಯನ್ನು ಹೊಂದಿದೆ. ಯಾವುದೇ ರೋಗದಿಂದ ರೋಗಿಯ ಆರೋಗ್ಯಕ್ಕೆ ಹಾನಿಯ ವ್ಯಾಪ್ತಿಯು ಆತನ ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಅವಲಂಬಿಸಿರುತ್ತದೆ. ಹೋಮಿಯೋಪತಿ ಒಟ್ಟಾರೆ ಗುಣಪಡಿಸುವಿಕೆಯ ಪ್ರತಿಕ್ರಿಯೆಯನ್ನು ಮಾಡ್ಯೂಲ್ ಮಾಡುವ ಗುರಿಯನ್ನು ಹೊಂದಿದ್ದು, ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಸಹಾಯ ಮಾಡಲಿದೆ.
ಹೋಮಿಯೋಪತಿ ಔಷಧಿಗಳು ನ್ಯಾನೊ-ಪ್ರಮಾಣದ ಔಷಧಿಗಳಾಗಿವೆ. ಆದರೆ, ರೋಗಿ ದುರ್ಬಲಗೊಳ್ಳುವುದನ್ನು ತಪ್ಪಿಸುತ್ತದೆ ಎಂದು ಪುರಾವೆಗಳು ಸೂಚಿಸುತ್ತವೆ. ಪ್ರತಿ ಪೋಸ್ಟ್ ಕೊವಿಡ್-19 ರೋಗಲಕ್ಷಣಕ್ಕೆ ಮೌಲ್ಯಮಾಪನ ಅಗತ್ಯವಿದೆ. ಈ ಲಕ್ಷಣಗಳು ಕೋವಿಡ್-19 ಸೋಂಕಿಗೆ ಒಳಗಾದ ನಾಲ್ಕು ವಾರಗಳಿಗಿಂತ ಹೆಚ್ಚು ಕಾಲ ಎದುರಾದರೆ ಚಿಕಿತ್ಸೆಯ ಅಗತ್ಯವಿದೆ.
ಕೋವಿಡ್-19 ನಂತರದ ಲಕ್ಷಣಗಳು :
- ದಣಿವು : ಯಾವುದೇ ಪರಿಶ್ರಮ ಕೈಗೊಳ್ಳಲು ಸಾಧ್ಯವಿಲ್ಲ
- ದೀರ್ಘಕಾಲದ ಕಾಯಿಲೆಗಳ ಉಲ್ಬಣ
- ಆಲೋಚನೆ ಅಥವಾ ಏಕಾಗ್ರತೆ ತೊಂದರೆ
- ತಲೆನೋವು
- ವಾಸನೆ ಅಥವಾ ರುಚಿಯ ನಷ್ಟ
- ನಿಂತ ಮೇಲೆ ತಲೆತಿರುಗುವಿಕೆ
- ಎದೆ ನೋವು
- ಖಿನ್ನತೆ ಅಥವಾ ಆತಂಕ
- ಕೆಲವೊಮ್ಮೆ ಜ್ವರ
- ಸ್ವಯಂ-ಪ್ರತಿರಕ್ಷಣಾ ಪರಿಸ್ಥಿತಿಗಳ ಉಲ್ಬಣ
- ಮಧುಮೇಹ
- ಅಧಿಕ ರಕ್ತದೊತ್ತಡ
- ಅಲರ್ಜಿ
ಕೋವಿಡ್ ನಂತರದ ಸಮಸ್ಯೆಗಳು:
- ಮ್ಯೂಕೋರ್ಮೈಕೋಸಿಸ್
- ಆಳವಾದ ರಕ್ತನಾಳದ ಥ್ರಂಬೋಸಿಸ್
- ಮಯೋಕಾರ್ಡಿಯಲ್ ಇನ್ಫಾರ್ಕ್ಟ್
- ಸಿಎನ್ಎಸ್ ಸ್ಟ್ರೋಕ್
- ಶ್ವಾಸಕೋಶದ ಎಂಬಾಲಿಸಮ್