ಮುಖದಲ್ಲಿ ಮೂಡುವ ಚಿಕ್ಕದೊಂದು 'ಗುಳ್ಳೆ' ಸೌಂದರ್ಯಕ್ಕೆ ಕಪ್ಪು ಚುಕ್ಕಿಯಾಗಿ ಕಾಣಿಸುತ್ತದೆ. ಹದಿಹರೆಯದ ಹೆಣ್ಣುಮಕ್ಕಳಂತೂ ತಮ್ಮ ಮೊಡವೆಗಳನ್ನು ಶತ್ರುಗಳಂತೆ ಪರಿಗಣಿಸುತ್ತಾರೆ. ಅದನ್ನು ಮರೆಮಾಚಲು ಎಲ್ಲ ಕ್ರೀಮ್ಗಳನ್ನು ಹಚ್ಚುತ್ತಾರೆ. ಆದರೆ ತಮ್ಮ ಮನೆಯಲ್ಲಿರುವ ಟೊಮೇಟೊ ಇದಕ್ಕೆ ಪರಿಹಾರ ಎಂಬುದು ಅವರಿಗಿನ್ನೂ ತಿಳಿದಿಲ್ಲ. ಅಡುಗೆಮನೆಯಲ್ಲಿ ಯಾವಾಗಲೂ ಕಾಣಿಸಿಕೊಳ್ಳುವ ಟೊಮೆಟೊ ನಿಮ್ಮ ಮೊಡವೆಗಳನ್ನು ದೂರ ಮಾಡುತ್ತವೆ. ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಮೊಡವೆಗಳಿಗೆ ಮನೆಮದ್ದು..
ಕೆಲವರ ಮುಖದಲ್ಲಿ ಮೊಡವೆಗಳು ಸ್ವಲ್ಪ ದೊಡ್ಡದಾಗಿ ಕಾಣುತ್ತವೆ. ತೆರೆದ ರಂಧ್ರಗಳು ಎಂದು ಹೇಳಲಾಗುವ ಈ ಸಮಸ್ಯೆಗೆ ಟೊಮೆಟೊ ಉತ್ತಮ ಪರಿಹಾರವಾಗಿದೆ. ಎರಡು ಚಮಚ ಟೊಮೆಟೊ ರಸಕ್ಕೆ ಎರಡು ಹನಿ ನಿಂಬೆ ರಸ ಮತ್ತು ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಹದಿನೈದು ನಿಮಿಷಗಳ ನಂತರ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಇದನ್ನೂ ಓದಿ:ಋತುಚಕ್ರ ಸಮಯದಲ್ಲಿ ಅಗತ್ಯವಾಗಿ ಬೇಕಾಗಿರುವ ಸೌಲಭ್ಯಗಳಿಂದ ಮಹಿಳೆಯರು ವಂಚಿತ: ಋತುಚಕ್ರ ಬಡತನ ಎಂದರೇನು?
ಅಥವಾ ಟೊಮೆಟೊವನ್ನು ಸ್ಮ್ಯಾಶ್ ಮಾಡಿ ಮತ್ತು ಅದರಲ್ಲಿ ಎರಡು ಚಮಚ ಕೀರಾ ರಸವನ್ನು ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿ ಇಪ್ಪತ್ತು ನಿಮಿಷಗಳ ನಂತರ ತೊಳೆಯಿರಿ. ತಕ್ಷಣವೇ ಮಾಯಿಶ್ಚರೈಸರ್ ಕ್ರೀಮ್ ಹಚ್ಚಿ. ಪ್ರತಿದಿನ ಹೀಗೆ ಮಾಡುವುದರಿಂದ ಮೊಡವೆಗಳು ಕಡಿಮೆಯಾಗುತ್ತವೆ. ಟೊಮೇಟೊದಲ್ಲಿ ತಂಪಾಗಿಸುವ ಮತ್ತು ಸಂಕೋಚಕ ಗುಣಗಳು ಇರುವುದರಿಂದ ಚರ್ಮವನ್ನು ಶಮನಗೊಳಿಸುತ್ತದೆ ಮತ್ತು ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಆ ಮೂಲಕ ಮೊಡವೆಗಳು ಕಡಿಮೆಯಾಗುತ್ತವೆ.
ಬಿಸಿಲಿನಿಂದ ಚರ್ಮ ಸುಟ್ಟು ಹೋಗಿದೆಯೇ..?: ಕೆಲವೊಬ್ಬರಿಗೆ ಹೆಚ್ಚು ಬಿಸಿಲು ಆಗುವುದಿಲ್ಲ. ಚರ್ಮವೆಲ್ಲಾ ಸುಟ್ಟು ಹೋದಂತೆ ಕಾಣಿಸುತ್ತದೆ. ಅದಕ್ಕಾಗಿ ಎರಡು ಚಮಚ ಟೊಮೇಟೊ ರಸಕ್ಕೆ ನಾಲ್ಕು ಚಮಚ ಮಜ್ಜಿಗೆ, ಒಂದು ಚಮಚ ಹರಳೆ ಕಾಯಿ ಹುಡಿ, ಸ್ವಲ್ಪ ಜೇನುತುಪ್ಪ ಬೆರೆಸಿ. ಇದನ್ನು ಮುಖಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ. ಸಂಪೂರ್ಣವಾಗಿ ಒಣಗಿದ ನಂತರ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡಿದರೆ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ನೇರಳಾತೀತ ಕಿರಣಗಳ ಪರಿಣಾಮವು ಚರ್ಮದ ಮೇಲೆ ಬೀರುವುದಿಲ್ಲ.
ಮುಖ ನಿರ್ಜೀವವಾಗಿದೆಯೇ..?: ನಿಮ್ಮ ಮುಖ ನಿರ್ಜೀವಾದಂತೆ ಕಾಣುತ್ತಿದ್ದರೆ, ಎರಡು ಚಮಚ ಮೊಸರಿಗೆ ಅರ್ಧ ಟೊಮೇಟೊ ರಸ ಮತ್ತು ಒಂದು ಚಮಚ ಬಾದಾಮಿ ಪೇಸ್ಟ್ ಬೆರೆಸಬೇಕು. ಇಪ್ಪತ್ತು ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಮೊಸರಿನಲ್ಲಿರುವ ಪೋಷಕಾಂಶಗಳು ಚರ್ಮವನ್ನು ಬಿಗಿಗೊಳಿಸುತ್ತದೆ ಮತ್ತು ಹೊಳಪು ನೀಡುತ್ತದೆ. ಟೊಮೊಟೊ ಶಮನಗೊಳಿಸುತ್ತದೆ ಮತ್ತು ತಾಜಾವಾಗಿ ಕಾಣುವಂತೆ ಮಾಡುತ್ತದೆ. ಬಾದಾಮಿ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ.
ಮೊಡವೆ ಕಾಣಿಸಿಕೊಳ್ಳಲು ಕಾರಣಗಳೇನು?: ಮುಖದಲ್ಲಿ ಮೊಡವೆ ಕಾಣಿಸಿಕೊಳ್ಳಲು ಹಲವಾರು ಕಾರಣಗಳಿವೆ. ಹೆಣ್ಣುಮಕ್ಕಳಿಗೆ ಋತುಸ್ರಾವದ ಸಮಯದಲ್ಲಿ ಮೊಡವೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಕೆಲವರಿಗೆ 45 ವರ್ಷದಲ್ಲೂ ಮುಖದಲ್ಲಿ ಮೊಡವೆಗಳು ಏಳುತ್ತವೆ. ಹೆಚ್ಚು ಮೇಕಪ್ ಮಾಡುವುದರಿಂದ, ಹೊರಗಡೆ ಧೂಳಿನಲ್ಲಿ ಹೆಚ್ಚು ಓಡಾಡುವುದರಿಂದ, ಮಾನಸಿಕ ಒತ್ತಡ ಹೀಗೆ ಹಲವಾರು ಕಾರಣಗಳಿಗಾಗಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ.
ಇದನ್ನೂ ಓದಿ:ಆಲಸ್ಯದ ಜೀವನಶೈಲಿ ಧೂಮಪಾನದಷ್ಟೇ ಕೆಟ್ಟದ್ದು.. ಹೃದಯದ ಆರೋಗ್ಯಕ್ಕೆ ಬೇಕು ಉತ್ತಮ ಜೀವನಾಭ್ಯಾಸ: ಡಾ ರಾಜೇಶ್ ಟಿ ಆರ್