ನವದೆಹಲಿ:ರಂಗಿನ ಹಬ್ಬದ ಹೋಳಿ ಆಚರಣೆ ಅಂತಿಮ ಹಂತಕ್ಕೆ ಬಂದಿದೆ. ಈ ಹಬ್ಬದ ಆಚರಣೆ ಎಲ್ಲೆಡೆ ಅದ್ಧೂರಿಯಾಗಿ ನಡೆಯುತ್ತಿದೆ. ಗುಲಾಲ್ ಬಣ್ಣವು ಹೋಳಿಯ ಮೆರಗನ್ನು ಮತ್ತಷ್ಟು ಹೆಚ್ಚಿಸಿದೆ. ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಬಣ್ಣಗಳ ಹಬ್ಬವನ್ನು ಸಂಭ್ರಮ ಆಚರಿಸುತ್ತಿದ್ದಾರೆ. ಈ ಹೋಳಿ ಹಬ್ಬಕ್ಕೆ ಜನರು ರುಚಿಕರವಾದ ಸಿಹಿ ತಿನಿಸುಗಳ ಸವಿದು ಖುಷಿಪಡುತ್ತಾರೆ. ಸಾಂಪ್ರದಾಯಿಕ ಆಹಾರ ಮತ್ತು ಪಾನೀಯಗಳಿಲ್ಲದೇ ಹೋಳಿ ಹಬ್ಬ ಮಾತ್ರ ಪೂರ್ಣವಾಗುವುದಿಲ್ಲ.
ಹಬ್ಬದ ದಿನದಂದು, ಬುತೇಕರ ಮನೆಗಳಲ್ಲಿ ರುಚಿಕರವಾದ ಸಿಹಿ ಭಕ್ಷ್ಯಗಳ ಪರಿಮಳ ಬರುತ್ತದೆ. ಇದು ಹಬ್ಬದ ಆಚರಣೆಯನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ. ಗುಜಿಯಾಗಳು, ಮಾಲ್ಪುವಾಗಳು, ದಹಿ ಭಲ್ಲಾಗಳು ಈ ಬಾಯಲ್ಲಿ ನೀರು ತರಿಸುವ ಸಾಂಪ್ರದಾಯಿಕ ರುಚಿ ಸಿಹಿ ತಿಂಡಿಗಳು ಹಬ್ಬ ಆಚರಣೆಯಲ್ಲಿ ತೊಡಗಿರುವವರಿಗೆ ತೃಪ್ತಿಪಡಿಸುತ್ತವೆ. ನೀವು ನಿಮ್ಮ ಕುಟುಂಬದ ಸದಸ್ಯರಿಗೆ ಹೋಳಿ ಹಬ್ಬದ ವಿಶೇಷ ಸಿಹಿ ತಿಂಡಿಗಳನ್ನು ಸವಿಯಲು ಯೋಜಿಸುತ್ತಿದ್ದಿರಾ? ಹಾಗಾದ್ರೆ ನೀವೇ ಕೆಲವು ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ತಯಾರಿಸಲು ಪ್ರಯತ್ನಿಸಬಹುದು...
ಮಾಲ್ಪುವಾ: ಮಾಲ್ಪುವಾ ಸಾಂಪ್ರದಾಯಿಕ ಭಾರತೀಯ ಸಿಹಿಯಾಗಿದೆ. ಇದು ಪ್ಯಾನ್‌ಕೇಕ್ ತರಹದ ಖಾದ್ಯವಾಗಿದೆ. ತುಪ್ಪದಲ್ಲಿ ಹುರಿದು ಸಕ್ಕರೆ ಪಾಕದಲ್ಲಿ ನೆನೆಸಲಾಗುತ್ತದೆ. ಇದರಲ್ಲಿ ತೆಂಗಿನಕಾಯಿ, ಹಿಟ್ಟು, ಹಾಲು ಮತ್ತು ಒಣ ಹಣ್ಣುಗಳು ಸೇರಿವೆ. ಜೊತೆಗೆ ಏಲಕ್ಕಿ ಸ್ಪರ್ಶವು ರುಚಿ ಹೆಚ್ಚು ಮಾಡುತ್ತದೆ. ಮಾಲ್ಪುವಾವು ರೇಷ್ಮೆಯಂತಹ ಸುವಾಸನೆ ಹೊಂದಿರುತ್ತದೆ. ಇದನ್ನು ಸರಳ ಪದಾರ್ಥಗಳೊಂದಿಗೆ ತಯಾರಿಸಲಾಗುತ್ತದೆ. ನೀವು ಇದನ್ನು ರಬ್ದಿಯೊಂದಿಗೆ ಪ್ರಯತ್ನಿಸಬೇಕು. ಈ ಖಾದ್ಯ ಮತ್ತಷ್ಟು ರುಚಿಯಾಗಿರುತ್ತದೆ.
ಹಲ್ವಾ:ಈ ವರ್ಣರಂಜಿತ ಹಬ್ಬವನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಲ್ವಾ ಸವಿಯುವ ಮೂಲಕ ಆಚರಿಸಬಹುದು. ಹೋಳಿ, ದೀಪಾವಳಿ ಮುಂತಾದ ಹಬ್ಬಗಳಲ್ಲಿ ಇದನ್ನು ಸಾಮಾನ್ಯವಾಗಿ ಮಾಡಲಾಗುತ್ತದೆ. 'ಸೂಜಿ ಕಾ ಹಲ್ವಾ' ತುಂಬಾ ಸರಳ ಮತ್ತು ಸುಲಭವಾಗಿ ಮಾಡಲಾಗುತ್ತದೆ. ರವೆ (ಸೂಜಿ), ಹಾಲು ಮತ್ತು ಸಕ್ಕರೆ ಪಾಕದೊಂದಿಗೆ ತಯಾರಿಸಿದ ಈ ವಿಶೇಷ ತಿಂಡಿಯನ್ನು ಆನಂದಿಸಬಹುದು. ಈ ಮಿಶ್ರಣಕ್ಕೆ ಸಕ್ಕರೆ ಮತ್ತು ಖೋಯಾ ಸೇರಿಸಿ. ನಂತರ ಕತ್ತರಿಸಿದ ಬಾದಾಮಿ ಅಥವಾ ಕತ್ತರಿಸಿದ ಪಿಸ್ತಾ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಬಿಸಿ ಮಾಡಬೇಕು.