ಚಿಯಾ ಬೀಜಗಳು ಸಮೃದ್ಧ ಪೋಷಕಾಂಶಗಳಿಂದ ಕೂಡಿದ್ದು, ಅನೇಕ ಔಷಧೀಯ ಲಾಭಗಳನ್ನು ಹೊಂದಿವೆ. ಫೈಬರ್ ಮತ್ತು ಒಮೆಗಾ-3 ಸಮೃದ್ಧವಾಗಿದ್ದು, ಹೃದಯ ಮತ್ತು ಜೀರ್ಣಕ್ರಿಯೆಗೆ ಹೆಚ್ಚು ಸಹಾಯಕ. ಇದರಲ್ಲಿ ಅಲ್ಪಾ ಲಿಪೊಇಕ್, ಒಮೆಗಾ -3 ಫ್ಯಾಟಿ ಆಸಿಡ್ ಇದೆ. ಇದು ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್ ತಡೆಯುವಲ್ಲಿಯೂ ಪ್ರಮುಖವಾಗಿದೆ. ಆ್ಯಂಟಿ ಆಕ್ಸಿಡೆಂಟ್ ಕೂಡ ಹೇರಳವಾಗಿದೆ.
ನಿಯಮಿತವಾಗಿ ಚಿಯಾ ಬೀಜಗಳನ್ನು ಸೇವಿಸುವುದರಿಂದ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿರ್ವಹಣೆಯಾಗುತ್ತದೆ. ನಾರಿನಂಶ, ಪ್ರೋಟಿನ್, ಕ್ಯಾಲ್ಸಿಯಂ ಹಾಗೂ ಆರೋಗ್ಯಕರ ಇತರೆ ಕೊಬ್ಬುಗಳನ್ನು ಈ ಬೀಜಗಳು ಹೊಂದಿವೆ. ಹೀಗಾಗಿ ಡಯಟ್ನಲ್ಲಿ ಅಳವಡಿಸಿಕೊಳ್ಳಬಹುದು. ತೂಕ ನಿರ್ವಹಣೆಗೂ ಕೂಡ ಚಿಯಾ ಬೀಜಗಳು ಉಪಯುಕ್ತ. ನಿಮಗೆ ಈ ಬೀಜಗಳನ್ನು ಯಾವ ರೀತಿ ಡಯಟ್ನಲ್ಲಿ ಬಳಕೆ ಮಾಡಬೇಕು ಎಂಬುದು ತಿಳಿಯದಿದ್ದರೆ, ಈ ಆಹಾರಗಳೊಂದಿಗೆ ಅವುಗಳನ್ನು ಬೆರೆಸಿ ಸೇವಿಸಬಹುದು. ಇದರಿಂದ ಆಹಾರ ಕೂಡ ಸ್ವಾದಿಷ್ಟವಾಗುತ್ತದೆ.
ಚಿಯಾ ಬೀಜದ ಪುಡ್ಡಿಂಗ್: ಇದು ಪುಡ್ಡಿಂಗ್ ಅನ್ನು ಮತ್ತಷ್ಟು ಗಟ್ಟಿಯಾಗಿ ಮಾಡುತ್ತದೆ. ನಿಮಗೆ ಚಿಯಾ ಬೀಜಗಳು ಬಾಯಿಗೆ ಸಿಗುತ್ತವೆ ಎಂದರೆ ಅದನ್ನು ಪುಡಿ ಮಾಡಿ ಕೂಡ ಬಳಕೆ ಮಾಡಬಹುದಾಗಿದೆ. ಇದರಿಂದ ಕ್ರೀಂ ರೀತಿಯ ಅನುಭವ ನೀಡುತ್ತದೆ.
ಚಿಯಾ ಬೀಜದ ಓಟ್ ಮೀಲ್: ಓಟ್ಸ್ ಜೊತೆಗೆ ಚಿಯಾ ಬೀಜಗಳನ್ನು ಹಾಕಿ ಅದಕ್ಕೆ ಹಾಲು ಅಥವಾ ತೆಂಗಿನ ಹಾಲು ಬಳಕೆ ಮಾಡುವುದರಿಂದಲೂ ಪೋಷಕಾಂಶಗಳು ಲಭ್ಯವಾಗುತ್ತದೆ.