ನವದೆಹಲಿ: ಔಷಧಗಳ ದಕ್ಷತೆಗೆ ಧಕ್ಕೆಯಾಗದಂತೆ ಅದರಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡಲು ರಕ್ಷಣಾತ್ಮಕ ಪ್ರತಿವಿಷದೊಂದಿಗೆ (ಪ್ರೊಟೆಕ್ಷಿಟ್ ಆ್ಯಟಿಡೊಟೆ) ಆ್ಯಂಟಿಬಯೋಟಿಕ್ ಸಂಯೋಜಿಸುವ ಹೊಸ ವಿಧಾನವನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ನೇಚರ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನವು 144 ವಿವಿಧ ಆ್ಯಂಟಿಬಯೋಟೆಕ್ ಪರಿಣಾಮಗಳನ್ನು ಸಾಮಾನ್ಯ ಕರುಳಿನ ಬ್ಯಾಕ್ಟೀರಿಯಾದ ಬಗ್ಗೆ ಹೇರಳವಾಗಿ ವಿಶ್ಲೇಷಿಸಿದೆ.
ಡೆನ್ಮಾರ್ಕ್ನಲ್ಲಿ ಏಪ್ರಿಲ್ 15-18ರವರೆಗೆ ನಡೆಯುವ ಕೂಪನ್ ಹೇಗನ್ನ ಯುರೋಪಿಯನ್ ಕಾಂಗ್ರೆಸ್ ಆಫ್ ಕ್ಲಿನಿಕಲ್ ಮೈಕ್ರೋಬಯೋಲಾಜಿ ಮತ್ತು ಇನ್ಫೆಕ್ಷಸ್ ಡಿಸೀಸ್ ಈ ಕುರಿತು ಅಧ್ಯಯನ ಪ್ರಸ್ತುಪಡಿಸಿದೆ. ಆ್ಯಂಟಿ ಬಯೋಟಿಕ್ ಚಿಕಿತ್ಸೆಗಳಿಂದ ಕರಳಿನ ಬ್ಯಾಕ್ಟೀರಿಯಾದ ಮೇಲೆ ಉಂಟಾಗುವ ಅಡ್ಡ ಪರಿಣಾಮವನ್ನು ಇದು ಕಡಿಮೆ ಮಾಡುತ್ತದೆ. ರಕ್ಷಣಾತ್ಮಕ ಪ್ರತಿ ವಿಷದೊಂದಿಗೆ ಸಂಯೋಜಿತ ಆ್ಯಂಟಿಬಯೋಟಿಕ್ ಕರುಳಿನ ಸೂಕ್ಷ್ಮ ಜೀವಿಗಳಿಗೆ ಯಾವುದೇ ರೀತಿ ಹಾನಿಕಾರಕ ಪರಿಣಾಮ ಬೀರುವುದಿಲ್ಲ ಎಂದು ಉಕ್ರಿಕೆ ಲೊಬರ್ ತಿಳಿಸಿದ್ದಾರೆ.
ಈ ಫಲಿತಾಂಶದ ಹೊರತಾಗಿ, ಹೆಚ್ಚಿನ ಅಧ್ಯಯನದ ಮೂಲಕ ಅತ್ಯುತ್ತಮ ಮತ್ತು ಸಂಯೋಜಿತ ಆ್ಯಟಿಡೊಟಿಯೊಂದಿಗಿನ ಔಷಧಗಳ ಅವಶ್ಯಕತೆ ಮತ್ತು ಕರುಳಿನ ಸೂಕ್ಷ್ಮ ಜೀವಿಗಳ ಮೇಲೆ ದೀರ್ಘಕಾಲಿಕ ಪರಿಣಾಮ ಹೊಂದಿದೆ ಎಂಬುದರ ಕುರಿತು ಪತ್ತೆ ನಡೆಸಲಾಗಿದೆ ಎಂದು ಲೊಬರ್ ತಿಳಿಸಿದ್ದಾರೆ.
ಆ್ಯಂಟಿಬಯೋಟಿಕ್ಗಳು ಸೂಕ್ಷ್ಮಾಣುಗಳ ಸಮುದಾಯವನ್ನು ನಾಶ ಮಾಡುತ್ತದೆ. ಇದು ಅಸಮತೋಲನಕ್ಕೆ ಕಾರಣವಾಗುತ್ತದೆ. ಇದು ಕ್ಲೋಸ್ಟ್ರಿಡಾಯ್ಡ್ಸ್ ಡಿಫಿಸಿಲ್ ಸೋಂಕುಗಳು ಮತ್ತು ಸ್ಥೂಲಕಾಯತೆ, ಅಲರ್ಜಿಗಳು, ಆಸ್ತಮಾ ಮತ್ತು ಇತರ ರೋಗ ನಿರೋಧಕ ಅಥವಾ ಉರಿಯೂತದ ಕಾಯಿಲೆಗಳಂತಹ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಂದ ಉಂಟಾದ ಪುನರಾವರ್ತಿತ ಜಠರಗರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.