ಕರ್ನಾಟಕ

karnataka

ETV Bharat / sukhibhava

ಬೆನ್ನುನೋವು ಕಾಡ್ತಿದೆಯಾ? ಕಾರಣ ಇಲ್ಲಿವೆ ನೋಡಿ.. - ಬೆನ್ನುನೋವು ಆಯುರ್ವೇದ ಚಿಕಿತ್ಸೆ

ಕೆಲವೊಮ್ಮೆ, ಒಂದೇ ಸ್ಥಳದಲ್ಲಿ ತಪ್ಪು ಭಂಗಿಯಲ್ಲಿ ದೀರ್ಘಕಾಲ ಕುಳಿತುಕೊಂಡಾಗ, ತಪ್ಪಾದ ಭಂಗಿಯಲ್ಲಿ ನಿದ್ರಿಸಿದಾಗ, ಅತಿಯಾದ ಕ್ರೀಡೆ ಅಥವಾ ವ್ಯಾಯಾಮದಿಂದ, ಭಾರವಾದ ವಸ್ತುಗಳನ್ನು ಎತ್ತುವುದು ಅಥವಾ ಗಾಯ ಮತ್ತು ಇತರ ಕಾರಣಗಳಿಂದ ಬೆನ್ನುಹುರಿಯ ಮೇಲೆ ಪರಿಣಾಮವಾಗಬಹುದು ಅಥವಾ ಬೆನ್ನು ಮೂಳೆಯ ಗಾಯಗಳಿಗೆ ಕಾರಣವಾಗಬಹುದು. ಇದು ಅದರೊಂದಿಗೆ ಜೋಡಿಸಲಾದ ಸ್ನಾಯುಗಳಲ್ಲಿ ಒತ್ತಡವನ್ನು ಉಂಟು ಮಾಡುತ್ತದೆ.

Here is why you may be having a back pain!
Here is why you may be having a back pain!

By

Published : Jul 23, 2022, 7:07 PM IST

ಇತ್ತೀಚಿನ ಸಮಯದಲ್ಲಿ ಬೆನ್ನುನೋವು ಬಹಳಷ್ಟು ಜನರಿಗೆ ಕಾಡುವ ಸಾಮಾನ್ಯ ಕಾಯಿಲೆಯಾಗಿ ಬಿಟ್ಟಿದೆ. ವಯೋವೃದ್ಧರು ಮಾತ್ರವಲ್ಲದೇ ಯುವಸಮುದಾಯವೂ ಈ ಸಮಸ್ಯೆಯಿಂದ ಹೊರತಾಗಿಲ್ಲ. ಪ್ರತಿ ಮೂವರು ವಯಸ್ಕರಲ್ಲಿ ಒಬ್ಬರಿಗೆ ಈ ಸಮಸ್ಯೆ ಬಾಧಿಸುತ್ತಿದೆ. ಹಿಂದಿನ ಕಾಲದಲ್ಲಿ ವಯಸ್ಸು ಹೆಚ್ಚಾದಂತೆ, ನಿಶಕ್ತಿ ಆವರಿಸಿದಂತೆ ಬೆನ್ನುನೋವು ಕಾಣಿಸಿಕೊಳ್ಳುತ್ತಿತ್ತು.

ಆದರೆ, ಪ್ರಸ್ತುತ ಸಮಯದಲ್ಲಿನ ಜೀವನ ಶೈಲಿಯ ಬದಲಾವಣೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ತಪ್ಪಾದ ಶರೀರದ ಭಂಗಿಗಳನ್ನು ಅನುಸರಿಸುವುದು, ಆಲಸ್ಯದ ಜೀವನ, ಅನಾರೋಗ್ಯಕರ ಆಹಾರ ಸೇವನೆ ಮತ್ತು ಪೌಷ್ಟಿಕಾಂಶಗಳ ಕೊರತೆ ಇವೇ ಮುಂತಾದ ಕಾರಣಗಳಿಂದ ಬೆನ್ನುನೋವಿನ ಸಮಸ್ಯೆ ಕಾಣಿಸುತ್ತಿದೆ ಎಂಬುದು ತಿಳಿದು ಬಂದಿದೆ.

ಹೀಗಾಗಿ ಆರೋಗ್ಯಕರ ಜೀವನಶೈಲಿ ಇದ್ದರೆ ಸಾಕಷ್ಟು ಪ್ರಮಾಣದಲ್ಲಿ ಬೆನ್ನುನೋವು ಬರದಂತೆ ತಡೆಗಟ್ಟಬಹುದು ಎನ್ನುತ್ತಾರೆ ವೈದ್ಯರು. ಆದಾಗ್ಯೂ ಸಮಸ್ಯೆ ಮುಂದುವರಿದಲ್ಲಿ ಫಿಸಿಯೋಥೆರಪಿ ಬೇಕಾಗಬಹುದು. ಹಲವಾರು ಆಯುರ್ವೇದಿಕ್ ಚಿಕಿತ್ಸೆಗಳೂ ಸಹಾಯಕವಾಗಬಹುದು. ಬೆನ್ನುನೋವಿಗೆ ಕಾರಣಗಳೇನು ಎಂಬ ಬಗ್ಗೆ ದೆಹಲಿ ಮೂಲದ ಫಿಸಿಯೋಥೆರಪಿಸ್ಟ್​ ಮತ್ತು ಯೋಗ ಸಲಹೆಗಾರ್ತಿ ಡಾ. ಸುಶ್ಮಿತಾ ಗುಪ್ತಾ ಮುಖರ್ಜಿ ಒಂದಿಷ್ಟು ಅಮೂಲ್ಯ ಮಾಹಿತಿಗಳನ್ನು ನೀಡಿದ್ದಾರೆ.. ನೀವೂ ತಿಳಿದುಕೊಳ್ಳಿ.

ಬೆನ್ನು ನೋವಿಗೆ ಕಾರಣವೇನು?:ಕಳೆದ ಕೆಲವು ವರ್ಷಗಳಿಂದ ಹೈಸ್ಕೂಲ್‌ನಲ್ಲಿ ಓದುತ್ತಿರುವ ಮಕ್ಕಳು ಸೇರಿದಂತೆ ಬೆನ್ನುನೋವಿನ ಸಮಸ್ಯೆಗಳಿಂದ ಬಳಲುತ್ತಿರುವ ಜನರ ಸಂಖ್ಯೆ ಹಠಾತ್ ಹೆಚ್ಚುತ್ತಿದೆ ಎಂದು ಡಾ. ಸುಶ್ಮಿತಾ ಹೇಳಿದ್ದಾರೆ. ನಮ್ಮ ದೇಹದಲ್ಲಿನ ಎಲ್ಲ ಮೂಳೆಗಳು ಅಂಗಾಂಶಗಳು ಮತ್ತು ಸ್ನಾಯುಗಳ ಸಹಾಯದಿಂದ ಪರಸ್ಪರ ಸಂಪರ್ಕ ಹೊಂದಿವೆ. ಅಂಗಾಂಶಗಳು ಮತ್ತು ಸ್ನಾಯುಗಳು ಮೂಳೆಗಳನ್ನು ಒಟ್ಟಿಗೆ ಒಂದೇ ಸ್ಥಳದಲ್ಲಿ ಇಡುವುದಲ್ಲದೆ, ಅದರ ಚಲನೆಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತವೆ.

ಆದಾಗ್ಯೂ, ಕೆಲವು ಕಾರಣಗಳಿಂದ ಮೂಳೆಗಳ ಸ್ಥಾನದಲ್ಲಿ ಸ್ವಲ್ಪ ಬದಲಾವಣೆಯಾದರೆ, ಸ್ನಾಯುಗಳು ಅಥವಾ ಅಂಗಾಂಶಗಳು ದುರ್ಬಲಗೊಂಡರೆ ಅದು ಬೆನ್ನುಹುರಿಯ ಮೇಲೆ ಪರಿಣಾಮ ಬೀರುತ್ತದೆ. ಬೆನ್ನುಹುರಿ ನಮ್ಮ ದೇಹದ ಮೂಳೆಯ ರಚನೆಯ ಪ್ರಮುಖ ಆಧಾರವಾಗಿರುವುದರಿಂದ ಕುತ್ತಿಗೆ, ಬೆನ್ನು ಮತ್ತು ಕೆಳ ಬೆನ್ನಿನಲ್ಲಿ ನೋವು ಉಂಟು ಮಾಡಬಹುದು.

ಕೆಲವೊಮ್ಮೆ, ಒಂದೇ ಸ್ಥಳದಲ್ಲಿ ತಪ್ಪು ಭಂಗಿಯಲ್ಲಿ ದೀರ್ಘಕಾಲ ಕುಳಿತುಕೊಂಡಾಗ, ತಪ್ಪಾದ ಭಂಗಿಯಲ್ಲಿ ನಿದ್ರಿಸಿದಾಗ, ಅತಿಯಾದ ಕ್ರೀಡೆ ಅಥವಾ ವ್ಯಾಯಾಮದಿಂದ, ಭಾರವಾದ ವಸ್ತುಗಳನ್ನು ಎತ್ತುವುದು ಅಥವಾ ಗಾಯ ಮತ್ತು ಇತರ ಕಾರಣಗಳಿಂದ ಬೆನ್ನುಹುರಿಯ ಮೇಲೆ ಪರಿಣಾಮವಾಗಬಹುದು ಅಥವಾ ಬೆನ್ನುಮೂಳೆಯ ಗಾಯಗಳಿಗೆ ಕಾರಣವಾಗಬಹುದು. ಹೀಗಾದಾಗ ಬೆನ್ನುಮೂಳೆಯೊಂದಿಗೆ ಜೋಡಿಸಲಾದ ಸ್ನಾಯುಗಳಲ್ಲಿ ಒತ್ತಡ ಉಂಟಾಗಬಹುದು.

ಕುಳಿತುಕೊಳ್ಳುವ ಭಂಗಿಯ ಬಗ್ಗೆ ನಿರ್ದಿಷ್ಟವಾಗಿ ಹೇಳುವುದಾದರೆ, ಬೆನ್ನು ನೆಟ್ಟಗೆ ಇರದೆ ಮತ್ತು ಭುಜಗಳನ್ನು ಇಳಿಬಿಟ್ಟು ಕುಳಿತಾಗ ಅಥವಾ ನಿಂತಾಗ ಕೆಳ ಬೆನ್ನಿನ ಸ್ನಾಯುಗಳ ಮೇಲೆ ಒತ್ತಡ ಹೆಚ್ಚಾಗಬಹುದು ಹಾಗೂ ಇದು ನಂತರ ಬೆನ್ನುನೋವಿಗೆ ಕಾರಣವಾಗಬಹುದು. ದೈಹಿಕ ಚಟುವಟಿಕೆ ಅಥವಾ ವ್ಯಾಯಾಮದ ಕೊರತೆಯು ಸ್ನಾಯುಗಳಲ್ಲಿ ಮತ್ತಷ್ಟು ಸೆಳೆತ ಉಂಟುಮಾಡಬಹುದು.

ಕೆಲವೊಮ್ಮೆ ಬೆನ್ನುನೋವಿನ ಸಮಸ್ಯೆಯು ಮೂಳೆಗಳಲ್ಲಿನ ದೌರ್ಬಲ್ಯ ಅಥವಾ ಕೆಲವು ಕಾಯಿಲೆಗಳಿಂದ ಕೂಡ ಕಾಣಿಸಿಕೊಳ್ಳಬಹುದು. ದೇಹದಲ್ಲಿ ಪೌಷ್ಟಿಕಾಂಶ ಮತ್ತು ನೀರಿನ ಕೊರತೆ, ಒತ್ತಡ ಮತ್ತು ಖಿನ್ನತೆಯ ಕಾರಣಗಳಿಂದ ಪರಿಸ್ಥಿತಿಯು ಮತ್ತಷ್ಟು ಹದಗೆಡಬಹುದು.

ಆರೋಗ್ಯಕರ ಜೀವನಶೈಲಿ ನಿಮ್ಮದಾಗಿಸಿ;ಮೂಳೆ ಮತ್ತು ಮಾಂಸಖಂಡಗಳು ಆರೋಗ್ಯವಾಗಿರಲು ಪೌಷ್ಟಿಕ ಆಹಾರ ಸೇವಿಸಬೇಕು ಮತ್ತು ಪ್ರತಿನಿತ್ಯ ವ್ಯಾಯಾಮ. ಯಾವುದೇ ಆಟ ಆಡುವಾಗ, ಸರಕು ಎತ್ತುವಾಗ ಹಾಗೂ ಇತರ ಕೆಲಸಗಳನ್ನು ಮಾಡುವಾಗ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಡಾ. ಸುಶ್ಮಿತಾ. ನಮ್ಮ ದೇಹವು ಆರೋಗ್ಯಕರ ಮತ್ತು ಸದೃಢವಾಗಿದ್ದರೆ ಬೆನ್ನು ನೋವು ಮಾತ್ರವಲ್ಲದೇ ಇನ್ನೂ ಅನೇಕ ರೋಗಗಳು ಬರದಂತೆ ತಡೆಯಬಹುದು ಎಂದು ಅವರು ಹೇಳುತ್ತಾರೆ.

ಫಿಸಿಯೋಥೆರಪಿಯ ಪ್ರಯೋಜನಗಳು:ನಿಯಮಿತ ಯೋಗಾಭ್ಯಾಸ ಮತ್ತು ಇತರ ವ್ಯಾಯಾಮಗಳ ಮೂಲಕ ಬೆನ್ನು ನೋವನ್ನು ನಿಯಂತ್ರಣದಲ್ಲಿ ಇರಿಸಬಹುದು ಎಂದು ತಜ್ಞರು ಉಲ್ಲೇಖಿಸಿದ್ದಾರೆ. ಆದಾಗ್ಯೂ, ಒಬ್ಬರು ಬೆನ್ನುನೋವಿನಿಂದ ಬಳಲುತ್ತಿದ್ದರೆ, ಅದರ ಹಿಂದಿನ ಕಾರಣವನ್ನು ತಿಳಿದುಕೊಳ್ಳುವುದು ಮತ್ತು ಚಿಕಿತ್ಸೆ ನೀಡುವುದು ಮುಖ್ಯವಾಗಿದೆ. ಬೆನ್ನುನೋವಿಗೆ ಫಿಸಿಯೋಥೆರಪಿ ಚಿಕಿತ್ಸಾ ವಿಧಾನವು ತುಂಬಾ ಪರಿಣಾಮಕಾರಿಯಾಗಿದೆ.

ಫಿಸಿಯೋಥೆರಪಿಯು ಸ್ನಾಯುವಿನ ಒತ್ತಡ, ಬೆನ್ನುಹುರಿ ಸಮಸ್ಯೆಗಳನ್ನು ಕಡಿಮೆ ಮಾಡುವ, ನೋವು ನಿವಾರಿಸುವ ವ್ಯಾಯಾಮಗಳನ್ನು ಒಳಗೊಂಡಿರುತ್ತದೆ. ಇದಲ್ಲದೇ ಮೂಳೆ, ಸ್ನಾಯು ಅಥವಾ ಅಸ್ಥಿರಜ್ಜು ಗಾಯದ ಪರಿಸ್ಥಿತಿಗಳಲ್ಲಿ ಫಿಸಿಯೋಥೆರಪಿ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಬೆನ್ನುನೋವಿಗೆ ಉತ್ತಮ ಪರಿಹಾರ ಎಂದು ಹೇಳಿಕೊಳ್ಳುವ ವಿವಿಧ ರೀತಿಯ ಚಿಕಿತ್ಸೆಗಳು ಇಂದು ಲಭ್ಯವಿವೆ. ಆದರೆ ಇಂಥ ಯಾವುದೇ ಚಿಕಿತ್ಸೆಗಳನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಬಹಳ ಮುಖ್ಯ ಎನ್ನುತ್ತಾರೆ ಡಾ. ಸುಶ್ಮಿತಾ.

ಆಯುರ್ವೇದ ಚಿಕಿತ್ಸೆ ಲಾಭಗಳು:ಬೆನ್ನುನೋವಿಗೆ ಆಯುರ್ವೇದ ಚಿಕಿತ್ಸೆಯೂ ತುಂಬಾ ಪ್ರಯೋಜನಕಾರಿ ಎಂದು ಮುಂಬೈ ಮೂಲದ ಆಯುರ್ವೇದ ವೈದ್ಯ ಡಾ. ಮನೀಶಾ ಕಾಳೆ ಹೇಳುತ್ತಾರೆ. ಪಂಚಕರ್ಮ ಮತ್ತು ಅದಕ್ಕೆ ಸಂಬಂಧಿಸಿದ ಇತರ ಚಿಕಿತ್ಸೆಗಳ ಅಡಿ ಆಯುರ್ವೇದದಲ್ಲಿ ಉಲ್ಲೇಖಿಸಲಾದ ಔಷಧೀಯ ತೈಲಗಳೊಂದಿಗೆ ಮಸಾಜ್ ಮಾಡುವುದು, ಗಿಡಮೂಲಿಕೆಗಳ ನೀರಿನ ಬಿಸಿ ನೀಡುವುದು ಮತ್ತು ಇತರ ಕಾರ್ಯವಿಧಾನಗಳನ್ನು ಶಿಫಾರಸು ಮಾಡಲಾಗುತ್ತದೆ. ಆದಾಗ್ಯೂ, ಅಂಥ ಚಿಕಿತ್ಸೆಯನ್ನು ತಜ್ಞರ ಮೇಲ್ವಿಚಾರಣೆಯಲ್ಲಿ ಮತ್ತು ಪ್ರಮಾಣೀಕೃತ ವೈದ್ಯರಿಂದ ಪಡೆದುಕೊಳ್ಳುವುದು ಬಹಳ ಮುಖ್ಯವಾಗಿದೆ.

ಇದನ್ನು ಓದಿ:ಮಧುಮೇಹಿಗಳು ಡಾರ್ಕ್ ಚಾಕೊಲೇಟ್ ತಿನ್ನಬಹುದಾ? ಸಂಶೋಧನೆಗಳು ಏನನ್ನುತ್ತವೆ?

ABOUT THE AUTHOR

...view details