ಕರ್ನಾಟಕ

karnataka

ETV Bharat / sukhibhava

ಸಕ್ಕರೆ ಸೇವನೆಯ ಕಡು ಬಯಕೆ ನಿವಾರಣೆಗೆ ಇಲ್ಲಿದೆ ಪರಿಹಾರ!

ಪದೇ ಪದೆ ಸಿಹಿ ತಿನಿಸು ತಿನ್ನುವಂತೆ ಅನೇಕ ವೇಳೆ ಅನ್ನಿಸದೇ ಇರಲಾರದು. ಇದಕ್ಕೆ ಕಾರಣ ಏನು, ಪರಿಹಾರ ಏನು ಎಂಬ ಮಾಹಿತಿ ಇಲ್ಲಿದೆ.

Here is the solution to get rid of the craving for sugar
Here is the solution to get rid of the craving for sugar

By

Published : May 4, 2023, 4:23 PM IST

ನವದೆಹಲಿ: ಅನೇಕರಲ್ಲಿ ಸಿಹಿ ತಿನ್ನುವ ಚಟ ಇರುವುದು ಸಾಮಾನ್ಯ. ಇದನ್ನು ತಡೆಯುವುದು ಕಷ್ಟ. ಸಿಹಿ ತಿನ್ನಲು ಮನಸು ಬಯಸಿದರೂ ಅದರಿಂದ ತೂಕ ಹೆಚ್ಚಳ, ಸ್ಥೂಲಕಾಯತೆ ಮತ್ತು ಇತರೆ ಆರೋಗ್ಯ ಸಮಸ್ಯೆಗಳು ಕಾಡಾದೇ ಇರಲಾರದು. ಈ ಸಿಹಿ ತಿನ್ನುವ ಚಟಕ್ಕೆ ಪರಿಹಾರ ಹುಡುಕುವ ಮುನ್ನ ಈ ರೀತಿ ಅನುಭವ ಮೂಡಲು ಕಾರಣ ಏನು ಎಂಬುದು ಅರಿಯಬೇಕಾಗುತ್ತದೆ. ನಾವು ಸಕ್ಕರೆಯನ್ನು ಸೇವಿಸಿದಾಗ ನಮ್ಮ ಮಿದುಳಿನಲ್ಲಿ ಡೊಪಾಮೈನ್​ ಬಿಡುಗಡೆಯಾಗುತ್ತದೆ. ಇದು ಸಿಹಿಯ ತಿನ್ನುವ ಅನುಭೂತಿಯನ್ನು ಆಹ್ವಾದಿಸುವಂತೆ ಮಾಡುವ ಉತ್ತಮ ಅನುಭವ ಮೂಡಿಸುತ್ತದೆ. ಇದೇ ಕಾರಣಕ್ಕೆ ಒತ್ತಡದಲ್ಲಿದ್ದಾಗ, ಬಳಲಿದಾಗ ಅಥವಾ ಬೇಸರಗೊಂಡಾಗ ಸಿಹಿ ತಿನ್ನಬೇಕು ಎಂಬ ಬಯಕೆ ಮೂಡುತ್ತದೆ.

ಈ ಸಿಹಿ ತಿನ್ನುವ ಬಯಕೆಯನ್ನು ಸರಳವಾಗಿ ನಿವಾರಣೆ ಮಾಡಬಹುದರ ಜೊತೆಗೆ ಆರೋಗ್ಯಕರ ಮತ್ತು ಫಿಟ್ನೆಸ್​ ಗುರಿಗಳಲ್ಲಿ ಸಾಗಬಹುದು. ಇನ್ನು ಈ ಸಕ್ಕರೆ ತಿನ್ನುವ ಬಯಕೆ ನಿವಾರಣೆ ಮಾಡುವ ಮೊದಲ ಹಂತ ಎಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡುವುದು. ಇದಕ್ಕಾಗಿ ಕಡಿಮೆ ಗ್ಲೆಸೆಮಿಕ್​ ಸೂಚ್ಯಂಕದ ಆಹಾರವನ್ನು ಸೇವನೆ ಮಾಡಬೇಕು. ಆಹಾರವೂ ಎಷ್ಟು ಬೇಗ ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತೆ ಎಂಬುದನ್ನು ಈ ಗ್ಲೈಸೆಮಿಕ್​ ಸೂಚ್ಯಂಕ ಮಾದರಿ ತೋರಿಸುತ್ತದೆ. ಆಹಾರದ ಹೆಚ್ಚಿನ ಗ್ಲೈಸೆಮಿಕ್​ ಸೂಚ್ಯಂಕವೂ ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಸಕ್ಕರೆ ತಿನ್ನುವ ಬಯಕೆಯನ್ನು ಮೂಡಿಸುತ್ತದೆ.

ಆ್ಯಪಲ್​ ಸಿಂಡರ್​ ವಿನಿಗರ್​: ಇದನ್ನು ತಪ್ಪಿಸಲು ನಿಮ್ಮ ಆಹಾರದಲ್ಲಿ ಆ್ಯಪಲ್​ ಸಿಂಡರ್​ ವಿನಿಗರ್​ ಅನ್ನು ಸೇರಿಸುವುದು ಉತ್ತಮ ಮಾರ್ಗ. ಈ ಆ್ಯಪಲ್​ ಸಿಂಡರ್ ವಿನಿಗರ್​​ ಇನ್ಸೂಲಿನ್​ ಸೂಕ್ಷ್ಮತೆ ಮತ್ತು ರಕ್ತದಲ್ಲಿ ಕಡಿಮೆ ಸಕ್ಕರೆ ಮಟ್ಟವನ್ನು ಸುಧಾರಿಸುತ್ತದೆ. ಸಲಾಡ್​, ಮ್ಯಾರಿನೇಟ್ಸ್​​ ಅಥವಾ ಇನ್ನಿತರ ಅಹಾರಗಳಿಗೆ ಇದನ್ನು ಮಿಶ್ರಣ ಮಾಡಿ, ಕುಡಿಯಬೇಕು. ಅಧ್ಯಯನದ ಭಾಗಿದಾರರಿಗೂ ಸಮೃದ್ಧ ಆಹಾರ ಸೇವನೆಗೆ ಮುನ್ನ ಆ್ಯಪಲ್​ ಸಿಂಡರ್​ ವಿನಿಗರ್​​ ನೀಡುವಂತೆ ನೋಡಿಕೊಳ್ಳಲಾಗಿದೆ.

ತರಕಾರಿ ಸೇವನೆ: ಈ ಸಕ್ಕರೆ ಕಡು ಬಯಕೆ ತಡೆಯಲು ಇರುವ ಮತ್ತೊಂದು ಮಾರ್ಗ ಎಂದರೆ ಹೆಚ್ಚು ತರಕಾರಿ ಸೇವನೆ. ತರಕಾರಿಗಳಲ್ಲಿ ಕಡಿಮೆ ಮಟ್ಟದ ಗ್ಲೈಸಮಿಕ್​ ಸೂಚ್ಯಂಕ ಇದ್ದು, ಇದರಲ್ಲಿ ಹೆಚ್ಚಿನ ಫೈಬರ್​ ಅಂಶವಿದೆ. ಇದು ರಕ್ತದಲ್ಲಿ ಸಕ್ಕರೆ ಅಂಶ ಬೇಗ ಹೀರಿಕೊಳ್ಳುವುದನ್ನು ನಿಧಾನ ಮಾಡುತ್ತದೆ. ಪ್ರತಿ ದಿನ ಹಲವು ಬಣ್ಣದ ತರಕಾರಿಗಳನ್ನು ಸೇವಿಸುವ ಗುರಿ ರೂಢಿಸಿಕೊಳ್ಳುವುದು ಉತ್ತಮ.

ಪ್ರೋಟಿನ್​ ಆಹಾರ: ಸಮೃದ್ಧ ಪ್ರೊಟೀನ್​ ಸಮತೋಲಿತ ಆಹಾರಗಳು ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದರ ಜೊತೆಗೆ ಸಿಹಿ ತಿನ್ನುವ ಆಸೆಗೆ ತಡೆ ನೀಡುತ್ತದೆ. ಪ್ರೋಟಿನ್​ ನಿಧಾನವಾಗಿ ಜೀರ್ಣವಾದರೂ ಇದು ದೀರ್ಘಕಾಲ ಹಸಿವಾಗದಂತೆ ನಿಮ್ಮನ್ನು ಕಾಪಾಡುವುದರ ಜೊತೆಗೆ ಸಕ್ಕರೆ ಬಯಕೆ ಮೂಡಿಸುವುದಿಲ್ಲ. ಪ್ರತಿ ಊಟ ಮತ್ತು ಸ್ನಾಕ್​ನಲ್ಲಿ ಚಿಕನ್​​, ಮೊಟ್ಟೆ, ಯೋಗರ್ಟ್​ ಅಥವಾ ಪ್ರೋಟಿನ್​ ಶೇಕ್​ನಂತಹ ಆಹಾರ ​ ಇರುವಂತೆ ನೋಡಿಕೊಳ್ಳುಬಹುದು.

ಇಎಫ್​ಆರ್​ ನ್ಯೂಟ್ರಿಷಿಯನ್​ ಪ್ಲಾನ್ಸ್​ನಲ್ಲಿ, ಸಕ್ಕರೆಯ ಬಯಕೆ ಜೊತೆಗೆ ಇನ್ಸುಲಿನ್​ ಮಟ್ಟ ನಿಯಂತ್ರಣಕ್ಕೆ ಕಾರ್ಬೋಹೈಡ್ರೇಟ್​ಗೆ ಮುಂಚೆ ತರಕಾರಿ ಮತ್ತು ಪ್ರೋಟಿನ್​ ಇರುವಂತೆ ನೋಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. ದಿನವಿಡಿ ಹೆಚ್ಚಿಗೆ ನೀರು ಕುಡಿಯುವ ಮೂಲಕ ಈ ಸಕ್ಕರೆ ತಿನ್ನುವ ಬಯಕೆಯನ್ನು ಕಡಿಮೆ ಮಾಡಬಹುದು. ಈ ಸಕ್ಕರೆ ಸೇವನೆ ಪ್ರಮಾಣವನ್ನು ಕಡಿಮೆ ಮಾಡುವುದರ ಜೊತೆಗೆ ಹೈಡ್ರೇಟ್​ ಆಗಿರಲು ಹರ್ಬಲ್​ ಚಹಾಮ ಏಳನೀರು ಮತ್ತಿತ್ತರ ಕಡಿಮೆ ಸಕ್ಕರೆ ಪಾನೀಯ ಸೇವನೆ ಮಾಡಬಹುದು.

ಇದನ್ನೂ ಓದಿ:ಕಡಿಮೆ ಕಾರ್ಬೋಹೈಡ್ರೇಟ್​ ಇರುವ ಆಹಾರಗಳಿಂದ ಪ್ರಾಣಾಪಾಯ: ಅಧ್ಯಯನ

ABOUT THE AUTHOR

...view details