ಮಿದುಳು, ನರಗಳ ವ್ಯವಸ್ಥೆ ಅಭಿವೃದ್ಧಿ ಜೊತೆಗೆ ಚಯಾಪಚಯ ವ್ಯವಸ್ಥಿತಗೊಳಿಸಲು ದೇಹಕ್ಕೆ ವಿಟಮಿನ್ ಬಿ 12 ಅತ್ಯವಶ್ಯಕ. ಇದರ ಕೊರತೆ ಕಾಡಿದರೆ, ಆಲಸ್ಯ ಮತ್ತು ದೌರ್ಬಲ್ಯ ಹೆಚ್ಚಾಗುತ್ತದೆ. ನಮ್ಮ ದೇಹ ಸ್ವಯಂ ಆಗಿ ಬಿ 12 ವಿಟಮಿನ್ ಅನ್ನು ಉತ್ಪಾದಿಸುವುದಿಲ್ಲ. ಈ ಹಿನ್ನೆಲೆ ಆಹಾರದ ಮೂಲಕ ಈ ವಿಟಮಿನ್ ಅನ್ನು ಪಡೆಯಬಹುದಾಗಿದೆ. ವಿಟಮಿನ್ ಬಿ 12 ಹೆಚ್ಚಾಗಿ ಮೊಟ್ಟೆ ಮತ್ತು ಮಾಂಸದ ಉತ್ಪನ್ನಗಳಲ್ಲಿ ಸಿಗುತ್ತದೆ. ಇದರಿಂದಾಗಿ ಬಹುತೇಕ ಸಸ್ಯಾಹಾರಿಗಳಲ್ಲಿ ಈ ವಿಟಮಿನ್ 12 ಕೊರತೆ ಹೆಚ್ಚಾಗಿ ಕಾಣಬಹುದು. ಮಾಂಸ ಮತ್ತು ಮೊಟ್ಟೆ ಹೊರತಾಗಿ ಇನ್ನಿತರ ಸಸ್ಯ ಮತ್ತು ಹಣ್ಣು, ತರಕಾರಿಗಳಲ್ಲಿ ಮೂಲಕವೂ ಈ ವಿಟಮಿನ್ ಬಿ 12 ಅನ್ನು ಪಡೆಯಬಹುದು. ಸಸ್ಯಾಹಾರಿ ಆಹಾರದಲ್ಲಿ ಹೆಚ್ಚಾಗಿರುವ ಬಿ 12 ವಿಟಮಿನ್ ಸಮೃದ್ಧವಾಗಿರುವ ಆಹಾರಗಳಿವು
ಲೆಟ್ಯೂಸ್:ಲೆಟ್ಯೂಸ್ನಲ್ಲಿ ಬಿ 12 ಹೆಚ್ಚಿದೆ. ಈ ಲೆಟ್ಯೂಸ್ ಅನ್ನು ಕರಿ, ದಾಲ್ ಅಥವಾ ಸ್ಮೂಥಿ ಮುಂತಾದವುಗಳಲ್ಲಿ ಬಳಕೆ ಮಾಡಬಹುದು. ಅದರಲ್ಲೂ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಲ್ಲಿ ಉಂಟಾಗುವ ರಕ್ತ ಹೀನತೆ ಸೇರಿದಂತೆ ಇನ್ನಿತರ ಸಮಸ್ಯೆ ತಡೆಯಲು ಇದು ಸಹಾಯ ಮಾಡುತ್ತದೆ. ಇದರ ಜೊತೆಗೆ ಪಾಲಕ್ ಸೊಪ್ಪಿನಲ್ಲೂ ಕೂಡ ವಿಟಮಿನ್ ಬಿ 12 ಅನ್ನು ಪಡೆಯಬಹುದಾಗಿದೆ.
ಬೀಟ್ರೂಟ್: ಇದರಲ್ಲಿ ಕಬ್ಬಿಣ, ಫೈಬರ್, ಪೊಟಾಶಿಯಂ, ಮತ್ತು ವಿಟಮಿನ್ ಬಿ12 ಇದೆ. ದೈನಂದಿನ ಡಯಟ್ನಲ್ಲಿ ಇದನ್ನು ಸೇರಿಸುವುದರಿಂದ ಕೂದಲಿನ ಆರೋಗ್ಯಕರ ಬೆಳವಣಿಗೆಗೆ ಸಹಾಯಕವಾಗುತ್ತದೆ. ಅಲ್ಲದೇ, ಚರ್ಮ ಕೂಡ ಮೃದುವಾಗುತ್ತದೆ. ರಕ್ತದ ಸಂಚಾರ ಅಭಿವೃದ್ಧಿಯಾಗಿ ದೇಹವನ್ನು ಬಲಗೊಳಿಸುತ್ತದೆ.
ಡೈರಿ ಉತ್ಪನ್ನ: ನಿತ್ಯ ದಿನಕ್ಕೆ ಎರಡು ಕಪ್ ಹಾಲು ಕುಡಿಯುವುದರಿಂದ ಅಗತ್ಯವಾದ ಕ್ಯಾಲ್ಸಿಯಂ, ಪ್ರೊಟೀನ್, ಪಾಸ್ಪರಸ್, ಪೊಟಾಶಿಯಂ ಮತ್ತು ವಿಟಮಿನ್ ಬಿ 12 ಇರುತ್ತದೆ. ಚೀಸ್ ಮತ್ತು ಯೋಗರ್ಟ್ನಲ್ಲೂ ಕೂಡ ಹೆಚ್ಚಿನ ಪ್ರೊಟೀನ್ ಮತ್ತು ವಿಟಮಿನ್ ಬಿ12 ಇರುತ್ತದೆ. ಇದನ್ನು ಸ್ನಾಕ್ಸ್ ರೂಪದಲ್ಲಿ ಕೂಡ ಸೇವಿಸಬಹುದು.