ನವದೆಹಲಿ:ಬೊಜ್ಜು ರೋಗವಲ್ಲ. ಸರಿಯಾದ ಜೀವನ ಶೈಲಿ ರೂಢಿಸಿಕೊಳ್ಳದರ ಪರಿಣಾಮ. ನಾವು ತಿನ್ನುವ ಆಹಾರದ ಆಯ್ಕೆ ಮತ್ತು ವ್ಯಾಯಾಮದ ಮಟ್ಟ ಇದಕ್ಕೆ ಪ್ರಮುಖ ಕಾರಣ ಆಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಬೊಜ್ಜು ಅನೇಕರಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಮತ್ತೊಂದು ಆತಂಕಕಾರಿ ವಿಷಯ ಎಂದರೆ, ಈ ಬೊಜ್ಜಿನ ಸಮಸ್ಯೆ ಅನೇಕರನ್ನು ಕಾಡುತ್ತಿದೆ. 50 ವರ್ಷಗಳ ಹಿಂದೆ, ಬೊಜ್ಜಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಇರಲಿಲ್ಲ. ಕಾರಣ, ಈ ಹಿಂದೆ ಅನೇಕ ಚಟುವಟಿಕೆಯಲ್ಲಿ ಜನರು ತೊಡಗುತ್ತಿದ್ದರಿಂದ, ಹೆಚ್ಚಿನ ಕ್ಯಾಲೋರಿ ಶೇಖರಣೆಗೊಳ್ಳುತ್ತಿರಲಿಲ್ಲ. ಆದರೆ, ಇದೀಗ ಸಂಸ್ಕರಿಸಿದ ಆಹಾರಗಳ ಸೇವನೆ, ದೈಹಿಕ ಚಟುವಟಿಕೆಯಲ್ಲಿ ಇಳಿಕೆ ಈ ಸಮಸ್ಯೆ ಹೆಚ್ಚಾಗುತ್ತಿದೆ.
ಬೊಜ್ಜಿಗೆ ಪ್ರಾಥಮಿಕ ಕಾರಣಗಳು: ಈಗಿನ ಪೀಳಿಗೆಯ ಜನರಲ್ಲಿ ಬೊಜ್ಜಿನ ಸಮಸ್ಯೆಗೆ ಪ್ರಮುಖ ಕಾರಣ ಎಂದರೆ, ದೈನಂದಿನ ಕಾರ್ಯದಲ್ಲಿನ ದೈಹಿಕ ಚಟುವಟಿಕೆ. ಪ್ರತಿಯೊಬ್ಬರಲ್ಲೂ ಆಲಸ್ಯ ಹೆಚ್ಚಾಗಿದೆ. ಜೊತೆಗೆ ಮತ್ತೊಂದು ಪ್ರಮುಖ ಕಾರಣ ಎಂದರೆ ಆಹಾರ ಶೈಲಿ. ನಾವು ತಿನ್ನುವ ಆಹಾರದಲ್ಲಿ ಪೋಷಕಾಂಶದ ಕುರಿತು ಹೆಚ್ಚಿನ ಅರಿವಿನ ಕೊರತೆ. ಅಲ್ಲದೇ, ನಾವು ತಿನ್ನುವ ಆಹಾರದಿಂದಾಗಿ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಆಲೋಚಿಸದಿರುವುದು.
ಇಂದು ಪ್ರತಿಯೊಬ್ಬರು ದೇಹ ಬೇಡುವುದಕ್ಕಿಂತಲೂ ಹೆಚ್ಚಿನ ಕ್ಯಾಲೋರಿ ಆಹಾರವನ್ನು ನಾವು ಸೇವಿಸುತ್ತಿದ್ದೇವೆ. ಇದರ ಪರಿಣಾಮ ತೂಕ ಹೆಚ್ಚಳವಾಗುತ್ತಿದ್ದು, ಅದು ಬೊಜ್ಜಿನ ಸಮಸ್ಯೆಗೆ ಕಾರಣವಾಗುತ್ತದೆ. ಆದಾಗ್ಯೂ, ಪ್ರಸ್ತುತ ಜೀವನಶೈಲಿಗಳು ಮತ್ತು ಬೊಜ್ಜಿನ ಸಮಸ್ಯೆ ಹಾಗೂ ಆರೋಗ್ಯಕ್ಕೆ ಸವಾಲನ್ನು ಒಡ್ಡುತ್ತಿದೆ. ಇದರಿಂದ ಹೊರ ಬರಬೇಕು ಎಂದರೆ, ದೈನಂದಿನ ಜೀವನ ಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ.
ಕ್ಯಾಲೋರಿ ಸೇವನೆ ಬಗ್ಗೆ ಪರಿಶೀಲಿಸಿ: ಬೊಜ್ಜಿನ ವಿಚಾರದಲ್ಲಿ ಕ್ಯಾಲೋರಿ ಸೇವನೆ ಜೊತೆಗೆ ದೈಹಿಕ ಚಟುವಟಿಕೆಗಳು ಪ್ರಮುಖವಾಗುತ್ತದೆ. ಈ ಹಿನ್ನೆಲೆ ಹೆಚ್ಚಿನ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಪೋಷಕಾಂಶಯುತ್ತ, ಆರೋಗ್ಯಯುತ ಆಹಾರದ ಬಗ್ಗೆ ಕೂಡ ಗಮನಹರಿಸಬೇಕಿದೆ. ಆರೋಗ್ಯಯುತ ಜೀವನಶೈಲಿ ರೂಪುಗೊಳ್ಳುವುದು ಉತ್ತಮ ಪೋಷಕಾಂಶ ಮತ್ತು ನಿಯಮಿತ ವ್ಯಾಯಾಮದಿಂದ ಮಾತ್ರ. ಈ ಎರಡನ್ನೂ ಕೈ ಬಿಟ್ಟರೆ, ಆರೋಗ್ಯದ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರುತ್ತದೆ
ನೈಸರ್ಗಿಕವಾಗಿ ತೂಕ ಕಳೆದುಕೊಳ್ಳುವ ಗುರಿ: ಬೊಜ್ಜು ಸಮಸ್ಯೆ ಅನುಭವಿಸುವ ವೇಳೆ ವೇಗವಾಗಿ ತೂಕ ಕಳೆದುಕೊಳ್ಳಲು ನೈಸರ್ಗಿಕ ವಿಧಾನ ಆಯ್ಕೆ ಮಾಡಬೇಕು ಹೊರತು, ಲಿಪೊಸುಕ್ಷನ್ನಂತಹ ಕಾಸ್ಮೆಟಿಕ್ ಸರ್ಜರಿಯನ್ನು ಆರಿಸಿಕೊಳ್ಳಬಹುದು. ಈ ಸರ್ಜರಿಗಳು ತಾತ್ಕಲಿಕ ಫಲಿತಾಂಶವನ್ನು ನೀಡುತ್ತದೆ. ದೀರ್ಘಕಾಲದ ಫಲಿತಾಂಶವನ್ನು ಕಾಣಬೇಕು ಎಂದರೆ, ನೈಸರ್ಗಿಕವಾಗಿ ತೂಕ ಕಳೆದುಕೊಳ್ಳುವ ತಂತ್ರಗಳು ಸುಸ್ಥಿರವಾಗಿದ್ದು, ಆರೋಗ್ಯಕರವಾಗಿರುತ್ತದೆ.
ಅದ್ಭುತಗಳನ್ನು ಸೃಷ್ಟಿಸುವ ಫಿಟ್ನೆಸ್ ಕೋಚ್ಗಳು:ನೈಸರ್ಗಿಕವಾಗಿ ತೂಕ ಇಳಿಸುವ ಮಾರ್ಗ ಕಾಣುತ್ತಿಲ್ಲ ಎಂದಾಗ ಇದಕ್ಕೆ ಪರ್ಯಾಯವಾಗಿ ಫಿಟ್ನೆಸ್ ಕೋಚ್ಗಳ ಆಯ್ಕೆಯನ್ನು ಮಾಡಬಹುದಾಗಿದೆ. ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಿ ಜ್ಞಾನ ಮತ್ತು ಅನುಭವ ಹೊಂದಿರುವ ಕೋಚ್ಗಳು ಇದಕ್ಕೆ ಸಹಾಯ ಮಾಡಬಲ್ಲರು. ಈ ಹಿನ್ನೆಲೆ ಟ್ರೈನರ್ ಮತ್ತು ಟೀಚರ್ ಮಧ್ಯೆ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳುವುದು ಅವಶ್ಯವಾಗಿದೆ. ನಾಯಿಕೊಡೆಗಳಂತೆ ಇದೀಗ ಎಲ್ಲೆಡೆ ಫಿಟ್ನೆಸ್ ಕೋಚ್ಗಳನ್ನು ಕಾಣಬಹುದು. ಆದರೆ, ಇವರಲ್ಲಿ ಅಗತ್ಯವಾದ ಅರ್ಹತೆ ಮತ್ತು ಅನುಭವ ಇರುವುದಿಲ್ಲ. ಈ ಹಿನ್ನೆಲೆ ಸರಿಯಾದ ದಾರಿಯಲ್ಲಿ ಸಾಗಲು ಅನುವು ಮಾಡಿಕೊಳ್ಳಲು ಅಗತ್ಯವಾದ ಕೋಚ್ಗಳನ್ನು ಆಯ್ಕೆ ಮಾಡಿಕೊಳ್ಳುವುದು ಅವಶ್ಯವಾಗಿದೆ.
ಜೀವನದಲ್ಲಿ ಸುಸ್ಥಿರ ಜೀವನಶೈಲಿ ರೂಢಿಸಿಕೊಳ್ಳಿ: ಬೊಜ್ಜಿನ ಸಮಸ್ಯೆ ವಿರುದ್ಧ ಹೋರಾಡಲು ಪ್ರಮುಖವಾದ ವಿಧಾನ ಎಂದರೆ ಆರೋಗ್ಯಕರ ಜೀವನ ಶೈಲಿ. ಪೋಷಕಾಂಶಯುಕ್ತ ಆಹಾರಗಳನ ಸೇವನೆ ಮತ್ತು ನಮ್ಮ ದೇಹದ ಆರೋಗ್ಯಕ್ಕೆ ಅನುಗುಣವಾದ ಆಹಾರ ಆಯ್ಕೆ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ.
ಜೀವನಶೈಲಿಯಲ್ಲಿ ಸಣ್ಣ, ಸಮರ್ಥನೀಯ ಬದಲಾವಣೆಗಳನ್ನು ಮಾಡುವುದರಿಂದ ಬದಲಾವಣೆ ಕಾಣಬಹುದು. ಈ ಹಿನ್ನೆಲೆ ನಮ್ಮ ಡಯಟ್ನಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳಲು ಆರಂಭಿಸಬೇಕು. ಹೆಚ್ಚಿನ ಕ್ಯಾಲೋರಿ ಸೇವನೆಯನ್ನು ಕಡಿತ ಮಾಡುವುದು, ಸಂಸ್ಕರಿಸಿದ ಆಹಾರದ ಬದಲಾಗಿ ಹಣ್ಣು ಮತ್ತು ತರಕಾರಿ ಸೇವನೆಗೆ ಆದ್ಯತೆ ನೀಡಿ. ಜೊತೆಗೆ ದೈಹಿಕ ಚಟುವಟಿಕೆ, ವಾಕಿಂಗ್ ಅಥವಾ ಸೈಕಲಿಂಗ್ನಂತ ದೈನಂದಿನ ಅಭ್ಯಾಸವಾಗಿ ರೂಢಿಸಿಕೊಳ್ಳಬೇಕು. ಜೀವನಶೈಲಿ ಮತ್ತು ಆರೋಗ್ಯಕರ ಆಯ್ಕೆ ಮಾಡಿಕೊಳ್ಳುವುದರಿಂದ ಬೊಜ್ಜು ಕಡಿಮೆ ಮಾಡುವುದರ ಜೊತೆಗೆ ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ:ಮರೆವಿನ ಕಾಯಿಲೆಗೆ D-Vitamin ಮದ್ದು