ನವದೆಹಲಿ: ದೀರ್ಘ ಜೀವಿತಾವಧಿ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಹೃದಯದ ಆರೋಗ್ಯ ನಿರ್ಣಾಯಕ ಪಾತ್ರ ಹೊಂದಿದೆ. ಹೃದಯದ ಆರೋಗ್ಯದ ಮೇಲೆ ವಂಶವಾಹಿನಿ, ಎಣ್ಣೆ ಆಯ್ಕೆ, ಉಪ್ಪಿನ ಸೇವನೆ, ವ್ಯಾಯಾಮ ಸೇರಿದಂತೆ ಅಂಶಗಳು ಹೃದಯ ಆರೋಗ್ಯ ಕಾಪಾಡುವಲ್ಲಿ ಮತ್ತು ನಿರ್ವಣೆ ಮಾಡುವಲ್ಲಿ ಗಮನಾರ್ಹ ಕೊಡುಗೆಯನ್ನು ನೀಡುತ್ತದೆ. ಆದಾಗ್ಯೂ, ಆರೋಗ್ಯಯುತ ಹೃದಯದ ಆರೋಗ್ಯ ಕಾಪಾಡುವ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿಗೆ ಒಳಗಾಗುತ್ತಾರೆ. ಉದಾಹರಣೆ ಎಣ್ಣೆಗಳ ಆಯ್ಕೆಯಲ್ಲಿ ರಿಫೈಡ್ ಎಣ್ಣೆ, ತುಪ್ಪ ಅಥವಾ ಬೆಣ್ಣೆ ಉತ್ತಮವಾ? ಯಾವ ವ್ಯಾಯಾಮ ಹೃದಯದ ಆರೋಗ್ಯಕ್ಕೆ ನಿಜಕ್ಕೂ ಪ್ರಯೋಜನ ನೀಡಲಿದೆ? ಹೀಗೆ ಯೋಚನೆ ನಡೆಸುತ್ತಾರೆ.
ಎಣ್ಣೆ ವಿಚಾರಕ್ಕೆ ಬಂದಾಗ ಸಂಸ್ಕರಿದ ಎಣ್ಣೆಗಳ ಪ್ರಯೋಜನ ಕುರಿತು ಅನೇಕ ಮಂದಿ ಪ್ರಸ್ತಾಪ ನಡೆಸಿದ್ದಾರೆ. ಆದಾಗ್ಯೂ, ಸಂಶೋಧನೆ ಸಲಹೆ ನೀಡುವಂತೆ, ಸಂಪ್ರಾದಾಯಿಕ ಪದ್ದತಿಯ ತುಪ್ಪ ಮತ್ತು ಬೆಣ್ಣೆಯ ಬಳಕೆ ಹಾನಿಕಾರಕ ಎಂದು ನಂಬಲಾಗಿದೆ. ಇದು ನೈಸರ್ಗಿಕ ಕೊಬ್ಬನ್ನು ಹೊಂದಿದ್ದು, ಸಾಧಾರಿತ ಪ್ರಮಾಣದ ಸೇವನೆಯಿಂದ ಹೃದಯದ ಆರೋಗ್ಯಕ್ಕೆ ಬೇಕಾಗುವ ಪ್ರಮುಖ ಪೋಷಕಾಂಶವನ್ನು ನೀಡುತ್ತದೆ ಎಂದು ಡಾ ಹರೇಶ್ ಜಿ ಮೆಹ್ತಾ ತಿಳಿಸಿದ್ದಾರೆ.
ಸಂಸ್ಕರಿಸಿದ ಎಣ್ಣೆಗಳು ಉತ್ತಮವಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ಈ ಎಣ್ಣೆಗಳ ಆಯ್ಕೆ ಮಾಡಿದಾಗ ಅದರಲ್ಲಿ ಸಮೃದ್ದ ಎಂಯುಎಫ್ಎ ಮತ್ತು ಒಮೆಗಾ-3 ಫ್ಯಾಟಿ ಆಸಿಡ್ ಇದೆಯಾ ಎಂಬುದು ಗಮನಿಸುವುದು ಮುಖ್ಯ. ರೈಸ್ ಬ್ರಾನ್ ಎಣ್ಣೆ, ಕ್ಯಾನೊಲ್ ಎಣ್ಣೆ ಮತ್ತು ಆಲಿವ್ ಎಣ್ಣೆಯಲ್ಲಿ ಇವು ಇದೆ. ಇದಕ್ಕಿಂತ ಹೆಚ್ಚಾಗಿ ಹೃದಯದ ಆರೋಗ್ಯ ಕಾಪಾಡಲು ಜನರು ಸಂಕೀರ್ಣ ಕಾರ್ಬ್ಸ್, ಆರೋಗ್ಯಯುತ ಪ್ರೋಟಿನ್ ಮತ್ತು ಫ್ಯಾಟ್ನಂತಹ ಹೃದಯಸ್ನೇಹಿ ಆರೋಗ್ಯ ಸೇವನೆ ಆಹಾರವನ್ನು ಆಯ್ಕೆ ಮಾಡಬೇಕು. ಅವುಗಳೆಂದರೆ, ಮಿಲ್ಲೆಟ್, ಓಟ್ಸ್, ಕೆಂಪು ಅಕ್ಕಿ, ಪಾಲಕ್, ಮೊಟ್ಟೆ, ಕೋಳಿ, ಮೀನು, ಒಣಹಣ್ಣುಗಳು, ಒಮೆಗಾ 3 ಫ್ಯಾಟಿ ಆಸಿಡ್ ಬೀಜಗಳನ್ನು ಸೇವಿಸಬೇಕಾಗುತ್ತದೆ.