ಕರ್ನಾಟಕ

karnataka

ETV Bharat / sukhibhava

ಗರ್ಭಾವಸ್ಥೆಯಲ್ಲಿ ಕಾಡುವ ಖಿನ್ನತೆಯಿಂದ ಹೆರಿಗೆ ಬಳಿಕ ಹೃದಯ ಸಮಸ್ಯೆ - ಖಿನ್ನತೆ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ

ಪ್ರಸವ ಪೂರ್ವ ಖಿನ್ನತೆ ಹೊಂದಿರುವ ಮಂದಿ ಹೆರಿಗೆದ ಬಳಿಕ ಶೇ 60ರಷ್ಟು ಹೃದಯ ಸ್ತಂಭನದ ಅಪಾಯವನ್ನು ಹೊಂದಿರುತ್ತಾರೆ.

ಗರ್ಭಾವಸ್ಥೆಯಲ್ಲಿ ಕಾಡುವ ಖಿನ್ನತೆಯಿಂದ ಹೆರಿಗೆ ಬಳಿಕ ಹೃದಯ ಸಮಸ್ಯೆ
Heart problem after delivery due to depression during pregnancy

By

Published : Apr 21, 2023, 10:40 AM IST

ನ್ಯೂಯಾರ್ಕ್​:ಗರ್ಭಾವಸ್ಥೆಯಲ್ಲಿ ಕಾಡುವ ಅನೇಕ ಸಮಸ್ಯೆಗಳಲ್ಲಿ ಖಿನ್ನತೆಯೂ ಒಂದು. ಹಾರ್ಮೋನ್​ಗಳ ವ್ಯತ್ಯಾಸ ಇನ್ನಿತರೆ ಕಾರಣಗಳಿಂದ ಕಾಡುವ ಖಿನ್ನತೆ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ, ಗರ್ಭಿಣಿಯರಲ್ಲಿ ಕಾಡುವ ಖಿನ್ನತೆ ಸಮಸ್ಯೆ ಹೆರಿಗೆಯಾದ ಎರಡು ವರ್ಷದ ಬಳಿಕ ಹೃದಯ ಸಮಸ್ಯೆಗೆ ಕಾರಣವಾಗಹುದು ಎಂದು ಅಧ್ಯಯನ ತಿಳಿಸಿದೆ. ಈ ಸಂಬಂಧ ಅಮೆರಿಕದ ಒಂದು ಲಕ್ಷ ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ ಅಧ್ಯಯನದಲ್ಲಿ ಖಿನ್ನತೆ ಮತ್ತು ರಕ್ತ ಕೊರತೆ ಹೃದಯ ಸಂಬಂಧಿ ಸಮಸ್ಯೆಯೊಂದಿಗೆ ಸಾಮಾನ್ಯತೆ ಹೊಂದಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಖಿನ್ನತೆ ಹೊಂದಿರುವ ಶೇ 83ರಷ್ಟು ಜನರು ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಹೃದಯ ಸ್ತಂಭನದ ಅಪಾಯ: ಪ್ರಸವ ಪೂರ್ವ ಖಿನ್ನತೆ ಹೊಂದಿರುವ ಮಂದಿ ಹೆರಿಗೆದ ಬಳಿಕ ಶೇ 60ರಷ್ಟು ಹೃದಯ ಸ್ತಂಭನದ ಅಪಾಯವನ್ನು ಹೊಂದಿರುತ್ತಾರೆ. ಅಲ್ಲದೇಮ 32 ರಷ್ಟು ಹೊಸ ಅಧಿಕ ರಕ್ತ ದೊತ್ತಡ ಅಪಾಯವನ್ನು ಹೊಂದಿರುತ್ತಾರೆ. ಗರ್ಭಾವಸ್ಥೆಯಲ್ಲಿ ರಕ್ತ ದೊತ್ತಡ ಹೊಂದಿಲ್ಲದ ಅನೇಕ ಮಂದಿಯ ಕೂಡ ಬಳಿಕ ಇದನ್ನು ಹೊಂದುವ ಸಾಧ್ಯತೆ ಇದೆ ಎಂದು ಜರ್ನಲ್​ ಆಫ್​ ದಿ ಅಮೆರಿಕನ್​ ಹಾರ್ಟ್​ ಅಸೋಸಿಯೇಷನ್​ ತಿಳಿಸಿದೆ.

ಗರ್ಭಾವಸ್ಥೆಯಲ್ಲಿ ಅಧಿಕ ರಕ್ತ ದೊತ್ತಡ ಹೊಂದಿಲ್ಲದಿದ್ದರೂ ಖಿನ್ನತೆ ಹೊಂದಿರುವವರು ಬಳಿಕ ಶೇ 85ರಷ್ಟು ಮಂದು ಹೃದಯಘಾತದ ಅಪಾಯವನ್ನು ಹೊಂದಿರುತ್ತಾರೆ. ಖಿನ್ನತೆ ಹೃಯದ ಸಮಸ್ಯೆ ಶೇ 84ರಷ್ಟು, ಪಾರ್ಶ್ವವಾಯು ಶೇ 42ರಷ್ಟಯ, ಕಾರ್ಡಿಯೊಮಿಯೊಪತಿ ಶೇ 53ರಷ್ಟು ಮತ್ತು ಹೊಸ ಅಧಿಕ ರಕ್ತದೊತ್ತಡ ಶೇ 43ರಷ್ಟು ಹೊಂದಿರುತ್ತಾರೆ.

1 ಲಕ್ಷ ಮಂದಿ ಮೇಲೆ ಅಧ್ಯಯನ: ಈ ಅಧ್ಯಯನದಲ್ಲಿ ಶೇ 20ರಷ್ಟು ಮಂದಿ ಗರ್ಭಾವಸ್ಥೆಯಲ್ಲಿ ಖಿನ್ನತೆ ಅನುಭವಿಸಿದ್ದಾರೆ. ಈ ಖಿನ್ನತೆ ಹೃದಯ ಸಮಸ್ಯೆ ಕಾಯಿಲೆ ಮೇಲೆ ಪ್ರಭಾವ ಬೀರಲಿದೆ ಎಂದು ಅಧ್ಯಯನದಿಂದ ತಿಳಿಯಲಾಗಿದೆ ಎಂದು ಲೇಖಕಿ ಕ್ರಿಸ್ಟಿನಾ ಎಂ ಅರ್ಕಮನ್​- ಬ್ಯಾಂಕ್ಸ್​ ತಿಳಿಸಿದ್ದಾರೆ. ಈ ಅಧ್ಯಯನ ಸಂಬಂದ 2007ರಿಂದ 2019ರ ನಡುವೆ ಅಮರಿಕದಲ್ಲಿ ಹೆರಿಗೆಯಾದ 1ಲಕ್ಷ ಜನರ ದತ್ತಾಂಶವನ್ನು ತಂಡ ವಿಶ್ಲೇಷಿಸಿದೆ. ಈ ವೇಳೆ ಹೃದಯ ಸಮಸ್ಯೆ ಬೆಳವಣಿಗೆಯಲ್ಲಿ ಗರ್ಭದಾರಣೆ ಸಂಬಂಧಿತ ಅಂಶಗಳು ಪ್ರಭಾವ ಬೀರಿದೆ ಎಂಬುದು ತಂಡಕ್ಕೆ ತಿಳಿದು ಬಂದಿದೆ.

ಪ್ರಸವ ಪೂರ್ವ ಖಿನ್ನತೆ ದೀರ್ಘಾವಧಿ ಸಮಸ್ಯೆಗೆ ಕಾರಣವಾಗುತ್ತದೆ. ಇನ್ನು ಹೃದಯ ಸಂಬಂಧಿ ಸಮಸ್ಯೆ ತಡೆಗಟ್ಟುವ ತಂತ್ರಗಳನ್ನು ಕಾರ್ಯಗತಗೊಳಿಸಲು ವೈದ್ಯರನ್ನು ಸಂಪರ್ಕಿಸಬೇಕು ಎಂದು ತಂಡ ಸಲಹೆ ನೀಡಿದೆ. ಇದೇ ವೇಳೆ ಇದರ ಜೊತೆಗೆ ಟೈಪ್​ 2 ಡಯಾಬಿಟಿಸ್​ ಮತ್ತು ಅಧಿಕ ಕೊಲೆಸ್ಟ್ರಾಲ್​ ಅನ್ನು ಕೂಡ ಗಮನಿಸಬೇಕು ಎಂದಿದೆ. ಇವುಗಳ ತಡೆಗೆ ಆರೋಗ್ಯಕರ ಆಹಾರ, ವ್ಯಾಯಮ ಅಭ್ಯಾಸದ ಜೊತೆಗೆ ಧೂಮಪಾನ ತ್ಯಜಿಸಲು ಅಧ್ಯಯನ ತಂಡ ತಿಳಿಸಿದೆ.

ಇದನ್ನೂ ಓದಿ: 0.5 ಮಿ.ಮೀಟರ್ ಗಾತ್ರದ ಚಿಕ್ಕ ಹೃದಯ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು: ಉದ್ದೇಶವೇನು ಗೊತ್ತೇ?

ABOUT THE AUTHOR

...view details