ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರಿದೆ. ಈ ಸೋಂಕನ್ನು ತಡೆಯಲು ಲಸಿಕೆ ಸಹ ಕಂಡು ಹಿಡಿಯಲಾಗಿದೆ. ಈ ಕೋವಿಡ್ ವಿರುದ್ಧದ ಲಸಿಕೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಕೋವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ ಹೃದಯದ ಉರಿಯೂತ ಕಾಣಿಸಿಕೊಂಡಿದ್ದು, ಲಸಿಕೆ ಹಾಕಿಸಿಕೊಳ್ಳದಿದ್ದವರಲ್ಲಿ ಇದರ ಅಪಾಯ ಕಡಿಮೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
ಇನ್ಫ್ಲುಯೆನ್ಸ ಮತ್ತು ಸಿಡುಬುಗಳಂತಹ ಇತರ ಕಾಯಿಲೆಗಳ ವಿರುದ್ಧದ ವ್ಯಾಕ್ಸಿನೇಷನ್ ಪಡೆದ ನಂತರ ಉಂಟಾಗುವ ಮಯೋಪೆರಿಕಾರ್ಡಿಟಿಸ್ ಅಪಾಯವನ್ನು ಹೋಲಿಸಲು ಅಧ್ಯಯನ ತಂಡವು 400 ಮಿಲಿಯನ್ ವ್ಯಾಕ್ಸಿನೇಷನ್ ಡೋಸ್‌ಗಳನ್ನು ಬಳಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆ ನಡೆಸಿದೆ. ಕೋವಿಡ್ ವ್ಯಾಕ್ಸಿನೇಷನ್ ಪಡೆದ ನಂತರ ಮಯೋಪೆರಿಕಾರ್ಡಿಟಿಸ್ ಸಂಭವಿಸುವ ಅಪಾಯ ಕಡಿಮೆ. ಆದರೆ ಸಂಶೋಧಕರು ಇತರ ವ್ಯಾಕ್ಸಿನೇಷನ್‌ಗಳು ಮತ್ತು ಕೊರೊನಾ ಲಸಿಕೆ ನಡುವೆ ಹೆಚ್ಚಿನ ವ್ಯತ್ಯಾಸವನ್ನು ಕಂಡುಕೊಂಡಿಲ್ಲ. ಪ್ರತಿ ಮಿಲಿಯನ್ ಡೋಸ್‌ಗಳಲ್ಲಿ ಹೃದಯದ ಉರಿಯೂತ ಇರುವ 56 ಪ್ರಕರಣಗಳು ಪತ್ತೆಯಾಗಿವೆ.
ಇತರ ರೋಗಗಳಿಗೆ ನೀಡುವ ಲಸಿಕೆಗಳಿಗೆ ಹೋಲಿಸಿದರೆ, ಕೋವಿಡ್ ವಿರುದ್ಧ ನೀಡಲಾಗುವ ಲಸಿಕೆಗಳಲ್ಲಿ ಮಯೋಪೆರಿಕಾರ್ಡಿಟಿಸ್‌ನ ಅಪಾಯ ಭಿನ್ನವಾಗಿಲ್ಲ ಎಂದು ಸಂಶೋಧನೆ ಸೂಚಿಸುತ್ತದೆ ಎಂದು ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿ ಆಸ್ಪತ್ರೆಯ ಕೊಲ್ಲಂಗೋಡ್ ರಾಮನಾಥನ್ ಹೇಳಿದರು. ಸೋಂಕಿನಿಂದ ಉಂಟಾಗುವ ಮಯೋಪೆರಿಕಾರ್ಡಿಟಿಸ್ ಅಪಾಯವನ್ನು ಸಮತೋಲನಗೊಳಿಸಬೇಕು ಮತ್ತು ಈ ಸಂಶೋಧನೆಗಳು ಕೋವಿಡ್ ಲಸಿಕೆಗಳ ಸುರಕ್ಷತೆಯಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸಬೇಕು ಎಂದು ಅವರು ಹೇಳಿದರು.