ವಾಷಿಂಗ್ಟನ್: ಸ್ಮಾರ್ಟ್ವಾಚ್ನಂತಹ ಧರಿಸಬಹುದಾದ ಸಾಧನಗಳಿಂದ ಹೃದಯ ವೈಫಲ್ಯ ಮತ್ತು ಅನಿಯಮಿತ ಹೃದಯ ಬಡಿತದ ಅಭಿವೃದ್ಧಿ ಅಪಾಯವನ್ನು ನಂತರದ ಜೀವನದಲ್ಲಿ ಪತ್ತೆ ಮಾಡಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ. ಯುರೋಪಿಯನ್ ಹಾರ್ಟ್ ಜರ್ನಲ್ನಲ್ಲಿ ಈ ಕುರಿತ ಅಧ್ಯಯನ ಪ್ರಕಟವಾಗಿದೆ. ಈ ಸಂಬಂಧ 83 ಸಾವಿರ ಜನರ ಡಿಜಿಟಲ್ ಹೆಲ್ತ್ ಪರೀಕ್ಷೆ ನಡೆಸಲಾಗಿದೆ. 15 ನಿಮಿಷದ ಇಸಿಜಿ ಪರೀಕ್ಷೆಗೆ ಒಳಗಾದ ಭಾಗಿದಾರರ ಸ್ಮಾರ್ಟ್ಫೋನ್ ಮತ್ತು ಮೊಬೈಲ್ ಸಾಧನಗಳಿಗೆ ಹೋಲಿಕೆ ಮಾಡಿ ಅಧ್ಯಯನ ನಡೆಸಲಾಗಿದೆ.
ಇಸಿಜಿ ದಾಖಲೆಯಲ್ಲಿ ಹೆಚ್ಚುವರಿ ಹೃದಯ ಬಡಿತವನ್ನು ಸಂಶೋಧಕರು ಪತ್ತೆ ಮಾಡಿದ್ದು, ಇದು ಹೃದಯ ವೈಪಲ್ಯ ಮತ್ತು ಅನಿಯಮಿತ ಹೃದಯ ಬಡಿತದೊಂದಿಗೆ ಸಂಬಂಧ ಹೊಂದಿದೆ. ಹೆಚ್ಚಿನ ಹೃದಯ ಬಡಿತ ಹೊಂದಿರುವವರ ಕಿರು ದಾಖಲಾತಿಯು ಮುಂದಿನ 10 ವರ್ಷದಲ್ಲಿ ಅವರಲ್ಲಿ ಹೃದಯ ವೈಫಲ್ಯ ಅಥವಾ ಅನಿಯಮಿತ ಹೃದಯ ಬಡಿತ ಸಮಸ್ಯೆ ಹೊಂದುವ ಸಾಧ್ಯತೆ ಬಗ್ಗೆ ತಿಳಿಸುತ್ತದೆ. 50 ರಿಂದ 70 ವರ್ಷದವರ ಇಸಿಜಿ ದಾಖಲಾಗಿ ವಿಶ್ಲೇಷಿಸಿ ಈ ಅಧ್ಯಯನ ನಡೆಸಲಾಗಿದೆ. ಈ ವೇಳೆ ಅವರಿಗೆ ಯಾವುದೇ ಹೃದಯ ಸಂಬಂಧಿ ಸಮಸ್ಯೆ ಕಂಡುಬಂದಿಲ್ಲ.
ಹೃದಯ ವೈಫಲ್ಯ: ಹೃದಯಕ್ಕೆ ಸರಿಯಾಗಿ ಪಂಪ್ ಮಾಡದಿದ್ದಾಗ ಹೃದಯ ವೈಫಲ್ಯಗೊಳ್ಳುತ್ತದೆ. ಇದಕ್ಕೆ ಪದೇ ಪದೇ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಈ ಹೃದಯ ಬಡಿತ ಹೆಚ್ಚಾದಾಗ ತಲೆ ಸುತ್ತುವಿಕೆ, ಉಸಿರಾಟ ಸಮಸ್ಯೆ, ಆಯಾಸಗಳು ಕಾಣಿಸಿಕೊಳ್ಳುವುದರ ಜೊತೆಗೆ ಇದು ಪಾರ್ಶ್ವವಾಯುವಿನ ಅಪಾಯ ಕೂಡ ಹೊಂದಿದೆ.
ಈ ಸಂಬಂಧ ತಿಳಿಸಿರುವ ಪ್ರಮುಖ ಲೇಖಕರಾದ ಡಾ.ಮೆಷೆಲ್ ಒರಿನಿ, ಇಸಿಜಿಯಿಂದ ಗ್ರಾಹಕ ದರ್ಜೆಯ ಧರಿಸಬಹುದಾದ ಸಾಧನಗಳು ಹೃದಯ ವೈಫಲ್ಯ ಸಮಸ್ಯೆಯನ್ನು ಪತ್ತೆ ಮಾಡಿ, ತಡೆಗಟ್ಟಲು ಸಹಾಯ ಮಾಡುತ್ತದೆ. ಮುಂದಿನ ಹಂತದಲ್ಲಿ ಧರಿಸಬಹುದಾದ ಸಾಧನಗಳ ಜನರನ್ಉನು ಹೇಗೆ ಪರೀಕ್ಷೆಗೆ ಒಳಪಡಿಸುವುದು ಉತ್ತಮ ಎಂಬುದಾಗಿದೆ ಎಂದಿದ್ದಾರೆ.
ತಂತ್ರಜ್ಞಾನದ ಬಳಕೆ: ಈ ರೀತಿಯ ಪರೀಕ್ಷೆಗಳನ್ನು ಕೃತಕ ಬುದ್ಧಿಮತ್ತೆ ಮತ್ತು ಇತರೆ ಕಂಪ್ಯೂಟರ್ ಸಾಧನಗಳ ಸಾಮರ್ಥ್ಯ ಬಳಕೆ ಮಾಡುವ ಮೂಲಕ ತಕ್ಷಣಕ್ಕೆ ಪತ್ತೆ ಮಾಡಬಹುದಾಗಿದೆ. ಇಸಿಜಿ ಹೆಚ್ಚಿನ ಅಪಾಯ ತೋರಿಸುವಂತೆ, ಇವುಗಳ ಬಳಕೆ ಮಾಡಬಹುದು. ಈ ವಿಶ್ಲೇಷಣೆಯನ್ನು ಹೆಚ್ಚು ನಿಖರವಾಗಿ ಬಳಕೆ ಮಾಡುವ ಮೂಲಕ ಜನರ ಅಪಾಯ ಊಹಿಸಬಹುದು. ಈ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದಿದ್ದಾರೆ.