ಅನೇಕ ಬಾರಿ ಆಹಾರಗಳನ್ನು ಅವುಗಳ ಕಂಟೈನರ್ಗಳಸಮೇತ ಮೈಕ್ರೋವೇವ್ನಲ್ಲಿಟ್ಟು ಬಿಸಿ ಮಾಡುತ್ತೇವೆ. ಇದು ಸುರಕ್ಷಿತವೇ ಎಂದು ಯೋಚಿಸುವುದಿಲ್ಲ. ಇನ್ನುಮುಂದೆ, ಇದೇ ರೀತಿ ಮಕ್ಕಳ ಆಹಾರದ ಕಂಟೈನರ್ ಅನ್ನು ಮೈಕ್ರೋವೇವ್ನಲ್ಲಿ ಬಿಸಿ ಮಾಡುವ ಮುನ್ನ ಒಮ್ಮೆ ಯೋಚಿಸಿ. ಇದು ಅಪಾಯಕಾರಿಯಾಗಬಹುದು ಎಂದು ಹೊಸ ಅಧ್ಯಯನವೊಂದು ಎಚ್ಚರಿಕೆ ನೀಡಿದೆ.
ನೆಬ್ರಸ್ಕಾ-ಲಿನ್ಕೊನ್ ಯೂನಿವರ್ಸಿಯ ಸಂಶೋಧಕರು ಪ್ರಯೋಗ ನಡೆಸಿದ್ದಾರೆ. ಪ್ಲಾಸ್ಟಿಕ್ನಲ್ಲಿರುವ ಮಕ್ಕಳ ಆಹಾರ ಪದಾರ್ಥಗಳು ಮೈಕ್ರೋವೇವ್ನಲ್ಲಿ ಬಿಸಿ ಮಾಡಿದಾಗ ಅದು ಪ್ಲಾಸ್ಟಿಕ್ ಪಾರ್ಟಿಕಲ್ಸ್ ಬಿಡುಗಡೆ ಮಾಡುವುದು ಕಂಡುಬಂದಿದೆ. ಕೆಲವು ಪ್ರಕರಣದಲ್ಲಿ ಪ್ಲಾಸ್ಟಿಕ್ ಕಂಟೈನರ್ನ ಪ್ರತಿ ಚೌಕದಲ್ಲಿ 2 ಬಿಲಿಯನ್ ನ್ಯಾನೋಪ್ಲಾಸ್ಟಿಕ್ಸ್ ಮತ್ತು 4 ಮಿಲಿಯನ್ ಮೈಕ್ರೋಪ್ಲಾಸ್ಟಿಕ್ಸ್ ಬಿಡುಗಡೆಯಾಗಿದೆ. ಮೈಕ್ರೋ ಮತ್ತು ನ್ಯಾನಾ ಪ್ಲಾಸ್ಟಿಕ್ಸ್ ಸೇವನೆ ಆರೋಗ್ಯದ ಮೇಲೆ ಯಾವೆಲ್ಲ ಪರಿಣಾಮ ಬೀರುತ್ತವೆ ಎಂಬುದು ಸದ್ಯಕ್ಕೆ ಅಸ್ಪಷ್ಟವಾಗಿದೆ.
ಜೀವಕೋಶಗಳಿಗೆ ಹಾನಿ: ಈ ಕಣಗಳಿಂದಾಗಿ ಎರಡು ದಿನಗಳ ನಂತರ ಮುಕ್ಕಾಲು ಭಾಗದಷ್ಟು ಕಲ್ಚರ್ಡ್ ಎಂಬ್ರೋನಿಕ್ ಮೂತ್ರ ಪಿಂಡದ ಜೀವಕೋಶಗಳು ಸತ್ತಿವೆ ಎಂದು ಸಂಶೋಧನೆ ತಿಳಿಸಿದೆ. 2022ರ ವರದಿಯಲ್ಲಿ ವಿಶ್ವ ಆರೋಗ್ಯ ಸಂಘಟನೆ ಈ ರೀತಿ ಕಣಗಳಿಗೆ ಒಡ್ಡಿಗೊಳ್ಳುವುದನ್ನು ಸೀಮಿತಗೊಳಿಸಲು ಶಿಫಾರಸು ಮಾಡಿದೆ. ನಾವು ಎಷ್ಟು ಪ್ರಮಾಣದ ಮೈಕ್ರೋ ಮತ್ತು ನ್ಯಾನೋಪ್ಲಾಸ್ಟಿಕ್ಸ್ ಅನ್ನು ತೆಗೆದುಕೊಳ್ಳಬೇಕು ಎಂಬುದು ಕೂಡ ಪ್ರಮುಖವಾಗುತ್ತದೆ ಎಂದು ಲೇಖಕ ಕಾಜಿ ಆಲ್ಬಾಬ್ ಹುಸೇನ್ ತಿಳಿಸಿದ್ದಾರೆ. ಕೆಲವು ನಿರ್ದಿಷ್ಟ ಆಹಾರ ಸೇವಿಸಿದಾಗ ಕ್ಯಾಲೋರಿ, ಸಕ್ಕರೆ ಮಟ್ಟ ಮತ್ತು ಇತರೆ ಪೋಷಕಾಂಶಗಳ ಬಗ್ಗೆ ನಾವು ಸಾಮಾನ್ಯ ಜ್ಞಾನ ಹೊಂದಿರುತ್ತೇವೆ. ಅದೇ ರೀತಿ ಆಹಾರದಲ್ಲಿನ ಪ್ಲಾಸ್ಟಿಕ್ ಕಣಗಳ ಬಗ್ಗೆಯೂ ಕೂಡ ಅರಿವು ಹೊಂದಿರಲೇಬೇಕಿದೆ.