ನವದೆಹಲಿ:ಚಳಿಗಾಲದ ತೀವ್ರತೆ ಹೆಚ್ಚಿದ್ದು, ಇದು ಹೃದಯಾಘಾತದಂಥ ಪ್ರಕರಣಗಳ ಹೆಚ್ಚಳಕ್ಕೂ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಅಲ್ಲದೇ ಈ ಅವಧಿಯಲ್ಲಿ ಕಣ್ಣಿನ ಆರೈಕೆಗೂ ಹೆಚ್ಚಿನ ಗಮನ ನೀಡಬೇಕು ಎಂದು ಒತ್ತಿ ಹೇಳಿದ್ದಾರೆ.
ಇತ್ತೀಚಿನ ಅಧ್ಯಯನಗಳು ಚಳಿಗಾಲದಲ್ಲಿ ಹೃದಯಾಘಾತದ ಪ್ರಕರಣ ಹೆಚ್ಚಳವಾಗುವ ಕುರಿತು ತಿಳಿಸಿವೆ. ಈ ಹಿನ್ನೆಲೆಯಲ್ಲಿ ತಜ್ಞರು, ಮೈ ಕೊರೆಯುವ ಚಳಿ ಮತ್ತು ವಿಶಿಷ್ಟ ಋತುಮಾನದ ಅಂಶಗಳು ಹೃದಯ ರಕ್ತನಾಳ ಮತ್ತು ಕಣ್ಣಿನ ಸಂಬಂಧಿ ಸಮಸ್ಯೆಗೆ ಕಾರಣವಾಗಲಿದೆ ಎಂದಿದ್ದಾರೆ. ಚಳಿ ತಾಪಮಾನ ರಕ್ತನಾಳವನ್ನು ಸಂಕುಚಿತಗೊಳಿಸುತ್ತದೆ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇವು ಹೃದಯಾಘಾತವನ್ನು ಪ್ರೇರೇಪಿಸುತ್ತದೆ. ವಿಶೇಷವಾಗಿ ಈಗಾಗಲೇ ಹೃದಯ ರಕ್ತನಾಳ ಸಮಸ್ಯೆ ಹೊಂದಿರುವವರಲ್ಲಿ ಇದು ಜಾಸ್ತಿ ಎಂದು ವೈದ್ಯರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜನರು ಚಳಿಗಾಲದ ಸಂದರ್ಭದಲ್ಲಿ ಹೃದಯದ ಆರೋಗ್ಯದ ಬಗ್ಗೆ ಜಾಗ್ರತೆಯಿಂದ ಇರಬೇಕು. ನಿಯಮಿತ ವ್ಯಾಯಾಮ ರೂಢಿಸಿಕೊಳ್ಳಬೇಕು. ಹೃದಯದ ಆರೋಗ್ಯ ಡಯಟ್ ಮತ್ತು ಬೆಚ್ಚಗಿರಬೇಕು ಎಂದು ಸಲಹೆ ನೀಡಿದ್ದಾರೆ. ಚಳಿಗಾಲದ ಅವಧಿಯಲ್ಲಿ ಹೃದಯಾಘಾತದ ಅಪಾಯ ಹೆಚ್ಚಿದ್ದು, ಇದಕ್ಕೆ ಋತುಮಾನದ ಅಂಶಗಳು ಕೊಡುಗೆ ನೀಡುತ್ತವೆ ಎಂದು ಉಜಾಲಾ ಸಿಗ್ನಸ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಹೃದಯತಜ್ಞ ಡಾ.ವಿಜಯ್ ಕುಮಾರ್ ಹೇಳುತ್ತಾರೆ.
ತಾಪಮಾನದ ಕುಸಿತ ಹೃದಯದ ಮೇಲೆ ಹೆಚ್ಚಿನ ಭಾರ ಹಾಕುತ್ತದೆ. ಇದು ಪ್ರತಿಯೊಬ್ಬರಲ್ಲೂ ಹೃದಯದ ಸಮಸ್ಯೆಗೆ ಕಾರಣವಾಗಬಹುದು. ಅದರಲ್ಲೂ ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ಚಳಿಗಾಲದ ತಾಪಮಾನ ರಕ್ತದನಾಳದ ಮೇಲೆ ಗಮನಾರ್ಹ ಅಪಾಯ ಹೊಂದಿರುತ್ತದೆ. ಇದು ಬ್ರೈನ್ ಸ್ಟ್ರೋಕ್ಗೂ ಕಾರಣವಾಗಬಹುದು ಎಂದಿದ್ದಾರೆ ಕಾನ್ಫುರ್ ರೆಗೆನ್ಸಿ ಆಸ್ಪತ್ರೆಯ ಡಾ.ಅಬಿನಿತ್ ಗುಪ್ತಾ.