ಕರ್ನಾಟಕ

karnataka

ETV Bharat / sukhibhava

ಕಾಮಕಸ್ತೂರಿ ಬೀಜದ ಆರೋಗ್ಯ ಪ್ರಯೋಜನಗಳು ಹಲವು: ಇಲ್ಲಿದೆ ಚಿಯಾ ಉಪಯುಕ್ತ ಮಾಹಿತಿ

ನಿಮ್ಮ ಆಹಾರದಲ್ಲಿ ಪೌಷ್ಟಿಕಾಂಶ ಭರಿತವಾದ ಸೂಪರ್‌ ಸೀಡ್ಸ್ಅನ್ನು ಹೇಗೆ ಬಳಸಬೇಕು ಎಂಬ ಮಾಹಿತಿ ಇಲ್ಲಿದೆ. ಇವು ನಿಮ್ಮ ಆರೋಗ್ಯಕ್ಕೆ ಹಲವು ರೀತಿ ಪ್ರಯೋಜನವನ್ನು ನೀಡುತ್ತದೆ.

Health benefits of chia seeds, how to add it in your diet
ಕಾಮಕಸ್ತೂರಿ ಬೀಜದ ಆರೋಗ್ಯ ಪ್ರಯೋಜನಗಳೇನು ಗೊತ್ತಾ

By

Published : Mar 28, 2023, 8:15 PM IST

Updated : Mar 28, 2023, 8:22 PM IST

ಹೈದರಾಬಾದ್: ಚಿಯಾ ಬೀಜಗಳು (ಕಾಮಕಸ್ತೂರಿ ಬೀಜ, ಆಳವಿ ಬೀಜ) ಪೌಷ್ಟಿಕಾಂಶ ಮತ್ತು ಔಷಧೀಯ ಪ್ರಯೋಜನಗಳಿಂದ ನಮ್ಮ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿವೆ. ಚಿಯಾ ಬೀಜಗಳು ಫೈಬರ್ ಮತ್ತು ಒಮೆಗಾ -3 ಗಳ ಅಂಶಗಳನ್ನು ಹೊಂದಿದೆ. ಇದು ಹೃದಯ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಜೊತೆಗೆ ಇವು ಆಲ್ಫಾ ಲಿಪೊಯಿಕ್ ಆಮ್ಲ ಅಥವಾ ಎಎಲ್ಎ, ಒಮೆಗಾ -3 ಕೊಬ್ಬಿನಾಮ್ಲದಿಂದ ಸಮೃದ್ಧವಾಗಿವೆ, ಇದು ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲ, ಈ ಸೂಪರ್ ಸೀಡ್ಸ್​ನಲ್ಲಿ ಆ್ಯಂಟಿಆಕ್ಸಿಡೆಂಟ್(ಉತ್ಕರ್ಷಣ ನಿರೋಧಕಗಳು) ಸಹ ಅಧಿಕವಾಗಿವೆ.

ಚಿಯಾ ಬೀಜಗಳು ಮತ್ತು ನಿಂಬೆ ಪಾನಕ

ಆದ್ದರಿಂದ, ಚಿಯಾ ಬೀಜಗಳ ನಿಯಮಿತ ಸೇವನೆಯು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಆಕ್ಸಿಡೇಟಿವ್ ಒತ್ತಡವನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ. ಈ ಬೀಜಗಳು ವಿವಿಧ ರೀತಿಯ ಪೋಷಕಾಂಶಗಳನ್ನು ಹೊಂದಿದ್ದು, ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಈ ಸೂಪರ್ ಬೀಜಗಳನ್ನು ಹೇಗೆ ಬಳಸಬೇಕು ಎಂದು ನಿಮಗೆ ತಿಳಿದಿಲ್ಲದಿದ್ದರೆ, ಈ ವಿಧಾನಗಳನ್ನು ನೋಡಿ

ಚಿಯಾ ಬೀಜಗಳು ಮತ್ತು ಸ್ಮೂಥಿಗಳು

ಇದನ್ನೂ ಓದಿ:ಪ್ರತಿನಿತ್ಯ ಮುಡಿಯಷ್ಟು ಒಣ ಹಣ್ಣು ಸೇವಿಸಿ; ಹೃದಯದ ಸಮಸ್ಯೆ ಕಡಿಮೆಯಾಗುತ್ತೆ

ಚಿಯಾ ಬೀಜಗಳು ಮತ್ತು ಫುಡ್ಡಿಂಗ್​:ಚಿಯಾ ಬೀಜಗಳನ್ನು ಸೇರಿಸುವ ಮೂಲಕ ಪುಡಿಂಗ್‌ನಂತಹ ನಿಮ್ಮ ಸಿಹಿತಿಂಡಿಗಳನ್ನು ಆರೋಗ್ಯಕರವಾಗಿಸಬಹುದು. ಇದು ನಿಮ್ಮ ಫುಡ್ಡಿಂಗ್‌ಗೆ ದಪ್ಪವಾದ ವಿನ್ಯಾಸವನ್ನು ನೀಡುತ್ತದೆ. ನೀವು ಬೀಜಗಳನ್ನು ಇಷ್ಟಪಡದಿದ್ದರೆ, ಇತರ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿ ಬ್ಲೆಂಡ್ ಮಾಡಬಹುದು.

ಚಿಯಾ ಬೀಜಗಳು ಮತ್ತು ಪ್ಯಾನ್ ಕೇಕ್

ಚಿಯಾ ಬೀಜಗಳು ಮತ್ತು ಓಟ್ ಮೀಲ್: ಪೌಷ್ಟಿಕ ಉಪಹಾರಕ್ಕಾಗಿ ಹಾಲು ಅಥವಾ ತೆಂಗಿನ ಹಾಲಿನೊಂದಿಗೆ ಓಟ್ಸ್ ಹಾಕಿ ಅದಕ್ಕೆ ಸ್ವಲ್ಪ ಚಿಯಾ ಬೀಜಗಳನ್ನು ಸೇರಿಸಬಹುದು.

ಚಿಯಾ ಬೀಜಗಳು ಮತ್ತು ಮೊಸರು:ಚಿಯಾ ಬೀಜಗಳು ಉತ್ತಮ ಪೌಷ್ಟಿಕಾಂಶದ ಗುಣದ ಜೊತೆ ಇತರೆ ಪ್ರಯೋಜಗಳನ್ನು ಹೊಂದಿದೆ. ನಿಮ್ಮ ಮೊಸರಿನ ಜೊತೆಗೆ ಎರಡು ಟೀ ಚಮಚ ನೆನೆಸಿದ ಚಿಯಾ ಬೀಜಗಳನ್ನು ಸೇರಿಸಿ ಸ್ವಲ್ಪ ಸಮಯ ಬಿಟ್ಟರೆ ಅದು ಪರಿಮಳವನ್ನು ನೀಡುತ್ತದೆ.

ಚಿಯಾ ಬೀಜಗಳು ಮತ್ತು ಮೊಸರು

ಇದನ್ನೂ ಓದಿ:ಖರ್ಜೂರ ಪ್ರೋಟಿನ್​ಗಳ ಆಗರ.. ತಿಂದ್ರೆ ಆರೋಗ್ಯಕ್ಕೆ ಹಲವು ಲಾಭ..

ಚಿಯಾ ಬೀಜಗಳು ಮತ್ತು ನಿಂಬೆ ಪಾನಕ:ನಿಂಬೆ ಪಾನಕಕ್ಕೆ ಉತ್ತಮವಾದ ವಿನ್ಯಾಸವನ್ನು ನೀಡಲು ಈ ಸೂಪರ್‌ ಸೀಡ್ಸ್ಅನ್ನು ಬಳಸಬಹುದು. ನೆನೆಸಿದ ಬೀಜಗಳನ್ನು ನಿಂಬೆ ಪಾನಕಕ್ಕೆ ಸೇರಿಸಬಹುದು.

ಚಿಯಾ ಬೀಜಗಳು ಮತ್ತು ಓಟ್ ಮೀಲ್

ಚಿಯಾ ಬೀಜಗಳು ಮತ್ತು ಪ್ಯಾನ್ ಕೇಕ್: ಪ್ಯಾನ್ ಕೇಕ್ ಮಿಶ್ರಣವನ್ನು ಹೆಚ್ಚು ಪೌಷ್ಟಿಕಾಂಶಭರಿತವಾಗಿ ಮತ್ತು ಮೃದುವಾಗಿಸಲು ನೀವು ಚಿಯಾ ಬೀಜಗಳನ್ನು ಸೇರಿಸಬಹುದು.

ಚಿಯಾ ಬೀಜಗಳು ಮತ್ತು ಫುಡ್ಡಿಂಗ್​

ಚಿಯಾ ಬೀಜಗಳು ಮತ್ತು ಸ್ಮೂಥಿಗಳು:ಪೌಷ್ಟಿಕಾಂಶವನ್ನು ಹೆಚ್ಚಿಸಲು ಚಿಯಾ ಬೀಜಗಳನ್ನು ಸ್ಮೂಥಿಗಳಿಗೆ ಸೇರಿಸಬಹುದು. ಸೇಬು, ಬಾಳೆಹಣ್ಣು ಅಥವಾ ಮಾವಿನ ಸ್ಮೂಥಿ ಯಾವುದೇ ಸ್ಮೂಥಿಗೆ ನೀವು ಒಂದು ಚಮಚ ಚಿಯಾ ಬೀಜಗಳನ್ನು ಸೇರಿಸಬಹುದು.

ಇದನ್ನೂ ಓದಿ:ಬೇಸಿಗೆಯ ದಾಹ ತಣಿಸುತ್ತವೆ ಈ ಸ್ಮೂಥಿಗಳು: ಒಮ್ಮೆ ಟ್ರೈ ಮಾಡಿ

Last Updated : Mar 28, 2023, 8:22 PM IST

ABOUT THE AUTHOR

...view details