ಕರ್ನಾಟಕ

karnataka

ETV Bharat / sukhibhava

Cancer: ಭಾರತದಲ್ಲಿ ಹೆಡ್​ &​ ನೆಕ್​ ಕ್ಯಾನ್ಸರ್​ ಪ್ರಕರಣ ಹೆಚ್ಚಳ: ಕಾರಣ ಇಲ್ಲಿದೆ! - ತಾಂಬಾಕು ಮತ್ತು ಆಲ್ಕೋಹಾಲ್​ ಬಳಕೆ

Head and Neck Cancers in India: ಭಾರತದಲ್ಲಿ ವಾರ್ಷಿಕವಾಗಿ ಶೇ 30ರಷ್ಟು ಹೆಡ್​ ಆ್ಯಂಡ್​ ನೆಕ್​ ಕ್ಯಾನ್ಸರ್ ಪ್ರಕರಣಗಳು​ ವರದಿಯಾಗುತ್ತಿವೆ.

head and neck cancers Increasing in India due to Tobacco alcohol consumption
head and neck cancers Increasing in India due to Tobacco alcohol consumption

By

Published : Jul 28, 2023, 10:50 AM IST

ನವದೆಹಲಿ: ಭಾರತದಲ್ಲಿ ಹೆಡ್​ ಆ್ಯಂಡ್​ ನೆಕ್​ ಕ್ಯಾನ್ಸರ್​ ಉಲ್ಬಣಕ್ಕೆ ಪ್ರಮುಖ ಕಾರಣ ತಂಬಾಕು ಮತ್ತು ಆಲ್ಕೋಹಾಲ್​ ಬಳಕೆ. ಪ್ರತಿ ವರ್ಷ ವರ್ಲ್ಡ್​ ಹೆಡ್​ ಆ್ಯಂಡ್​ ನೆಕ್​ ಕ್ಯಾನ್ಸರ್​ ಡೇ ಹಿನ್ನೆಲೆಯಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಸಾರ್ವಜನಿಕರಲ್ಲಿ ಇಂಥ ಕ್ಯಾನ್ಸರ್​ ಕುರಿತು ಅರಿವು ಮೂಡಿಸುವ ಅಗತ್ಯವೂ ಇದೆ. ಇದು ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ರೂಪುಗೊಂಡಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತಕ್ಕೆ 3ನೇ ಸ್ಥಾನ: ಜಾಗತಿಕ ಕ್ಯಾನ್ಸರ್​ ಅವಲೋಕನ ಸಂಸ್ಥೆ ಅಂದಾಜಿಸಿದಂತೆ, 2020ರಲ್ಲಿ ಜಗತ್ತಿನಾದ್ಯಂತ 19.3 ಮಿಲಿಯನ್​ ಕ್ಯಾನ್ಸರ್​ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಭಾರತ 3ನೇ ಸ್ಥಾನದಲ್ಲಿದ್ದು, ಚೀನಾ ಮತ್ತು ಅಮೆರಿಕ ಮೊದಲೆರಡು ಸ್ಥಾನದಲ್ಲಿವೆ. ಒಟ್ಟಾರೆ ಜಾಗತಿಕವಾಗಿ ದಾಖಲಾಗಿರುವ ಹೆಡ್ ಆ್ಯಂಡ್​ ನೆಕ್​​ ಕ್ಯಾನ್ಸರ್​ನ ಶೇ 67.5ರಷ್ಟು ಪ್ರಕರಣಗಳ ಪೈಕಿ ಏಷ್ಯಾದಲ್ಲೇ ಹೆಚ್ಚು ವರದಿಯಾಗಿದ್ದು, ಭಾರತದಲ್ಲಿ ಶೇ 30 ಪ್ರಕರಣಗಳು ಕಂಡುಬಂದಿವೆ. ವಾರ್ಷಿಕವಾಗಿ, ಭಾರತದಲ್ಲಿ ಸರಿಸುಮಾರು 5,00,000 ಕ್ಯಾನ್ಸರ್​ ಪ್ರಕರಣಗಳು ದಾಖಲಾಗುತ್ತಿದ್ದು, 1,25,000 ಜನರು ಸಾವನ್ನಪ್ಪುತ್ತಿದ್ದಾರೆ.

ವೈದ್ಯರು ಹೇಳುವುದೇನು?: ಹೆಡ್​ ಆ್ಯಂಡ್​ ನೆಕ್​ ಕ್ಯಾನ್ಸರ್​ ಎಂಬುದು ಸಾಮಾನ್ಯವಾಗಿ ನಾಲಿಗೆ, ಬಾಯಿ ಮತ್ತು ಗಂಟಲಿನ ಭಾಗದಲ್ಲಿ ಪತ್ತೆಯಾಗುತ್ತದೆ. ಓರೊಫಾರ್ನೆಕ್ಸ್​, ನಾಸೊಫಾರ್ನೆಕ್ಸ್​, ಹೈಪೋಫಾರ್ನೆಕ್ಸ್​, ಲಾಲಾರಸ ಗ್ರಂಥಿ, ಮೂಗಿನ ಭಾಗ ಮತ್ತು ಧ್ವನಿ ಪೆಟ್ಟಿಗೆ ಸೇರಿದಂತೆ ಮುಂತಾದವುಗಳನ್ನು ಒಳಗೊಂಡಿದೆ. ಈ ಕ್ಯಾನ್ಸರ್​​ ಅನೇಕ ಅಪಾಯದ ಅಂಶಗಳನ್ನು ಹೊಂದಿದೆ. ಇಂಥ ಕ್ಯಾನ್ಸರ್​​ಗೆ ತಂಬಾಕು ಮತ್ತು ಆಲ್ಕೋಹಾಲ್​ ಬಳಕೆ ಹೆಚ್ಚು ಕೊಡುಗೆ ನೀಡುತ್ತದೆ. ದೀರ್ಘಕಾಲದ ಧೂಮಪಾನ ಅಥವಾ ಗುಟ್ಕಾದಂತಹ ತಂಬಾಕು ಸೇವನೆ ಮತ್ತು ಆಲ್ಕೋಹಾಲ್​ ಸೇವನೆ ಕೋಶ ಮತ್ತು ಜೆನೆಟಿಕ್​ ಮ್ಯೂಟೆಷನ್​ ಹಾಳು ಮಾಡುತ್ತವೆ. ಇದು ಕ್ಯಾನ್ಸರ್​ ಉಲ್ಬಣಿಸುತ್ತದೆ ಎಂದು ಗುರುಗ್ರಾಮದ ಕ್ಯಾನ್ಸರ್​ ಇನ್ಸುಟಿಟ್ಯೂಟ್​ನ ವೈಸ್​ ಚೇರ್ಮಾನ್​ ಡಾ.ದೀಪಕ್​ ಸರಿನ್​ ತಿಳಿಸಿದ್ದಾರೆ.

ಭಾರತದಲ್ಲಿ ಸುಪಾರಿ ಸೇವನೆ ಮಾಡುವವರಲ್ಲಿ ಬಾಯಿಯೊಳಗಿನ ಚರ್ಮದ ಲೈನಿಂಗ್​ ಬದಲಾಗಿ ಅದೂ ಕೂಡ ಬಾಯಿ ಕ್ಯಾನ್ಸರ್​​ಗೆ ಕಾರಣವಾಗುತ್ತದೆ. ಇತ್ತೀಚೆಗೆ ಎಚ್​ಪಿವಿ ಸೋಂಕು ಕೂಡ ಗಂಟಲಿನ ಕ್ಯಾನ್ಸರ್​ನೊಂದಿಗೆ ಸಂಬಂಧ ಹೊಂದಿದೆ ಎಂದು ತಿಳಿದು ಬಂದಿದೆ. ಈ ವೈರಸ್​​ಗಳು ಓರಲ್​ ಸೆಕ್ಸ್​ ಅಥವಾ ಈ ರೀತಿಯ ಪರಿಣಾಮದಿಂದಲೂ ದೇಹ ಸೇರುತ್ತದೆ ಎಂದು ಅವರು ಹೇಳಿದ್ದಾರೆ.

ಇಂಥ ಕ್ಯಾನ್ಸರ್ ಲಕ್ಷಣಗಳೇನು?: ಕ್ಯಾನ್ಸರ್​.ನೆಟ್​ ವರದಿಯನುಸಾರು ಶೇ 70ರಿಂದ 80ರಷ್ಟು ಹೆಡ್​ ಆ್ಯಂಡ್​ ನೆಕ್​ ಕ್ಯಾನ್ಸರ್​​ಗಳು ತಂಬಾಕು ಬಳಕೆಯೊಂದಿಗೆ ಸಂಬಂಧ ಹೊಂದಿದೆ. ಈ ಕ್ಯಾನ್ಸರ್​ ಅನ್ನು ಆರಂಭದಲ್ಲೇ ಪತ್ತೆ ಮಾಡುವುದರಿಂದ ಇದರಿಂದ ಚೇತರಿಕೆ ಹೊಂದುವ ಪ್ರಮಾಣ ಶೇ 80ರಿಂದ 90ರಷ್ಟಿದೆ. ಗಂಟಲು ಸೋರುವಿಕೆ, ಊತ, ನುಂಗಲು ಕಷ್ಟವಾಗುವುದು, ದೀರ್ಘ ಮೂಗು ಕಟ್ಟಿದ ಅನುಭವ, ಸೈನಸ್​ ಸೋಂಕು, ಬಾಯಿಯೊಳಗೆ ಕೆಂಪು ದದ್ದು ಇವುಗಳು ಈ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳು. ಇಂಥ ಲಕ್ಷಣಗಳನ್ನು ಪತ್ತೆ ಮಾಡಿ ತಕ್ಷಣಕ್ಕೆ ಚಿಕಿತ್ಸೆ ಪಡೆಯುವುದು ಕೂಡ ನಿರ್ಣಾಯಕ ಎಂದು ವೈದ್ಯರು ತಿಳಿಸಿದ್ದಾರೆ.

ಪರೋಕ್ಷ ಧೂಮಪಾನಿಗಳಲ್ಲೂ ಹೆಡ್ ಆ್ಯಂಡ್​ ನೆಕ್​ ಕ್ಯಾನ್ಸರ್​ ಅಭಿವೃದ್ಧಿ ಹೊಂದುತ್ತದೆ. ಆಲ್ಕೋಹಾಲ್​ ಕೂಡ ಇದಕ್ಕೆ ಅಪಾಯದ ಅಂಶವೇ. ಕ್ಯಾನ್ಸರ್​ನ ಪ್ರಾಥಮಿಕ ಚಿಕಿತ್ಸೆಯಲ್ಲಿ ಸರ್ಜರಿ, ರೆಡಿಯೇಷನ್​​ ಥೆರಪಿ, ಕಿಮೋಥೆರಪಿ ಮಾಡಲಾಗುತ್ತದೆ. ಇಂಥ ಥೆರಪಿಗಳು ಕೆಲವು ಅಡ್ಡ ಪರಿಣಾಮವನ್ನೂ ಹೊಂದಿದ್ದು, ಇದರಿಂದ ಮಾತಾಡಲು ಅಥವಾ ನುಂಗಲು ಕಷ್ಟಪಡಬಹುದು. ನೋವು, ಅಹಿತಕರ ಅನುಭವ, ಆಯಾಸ, ಸುಸ್ತು, ಕೂದಲು ನಷ್ಟ, ಹಸಿವು ನಷ್ಟದಂತಹ ಸಮಸ್ಯೆ ಕಾಡಬಹುದು.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಕಡಿಮೆ ಫೈಬರ್ ಆಹಾರ ಸೇವನೆ, ಮಗುವಿನ ಮೆದುಳಿನ ಬೆಳವಣಿಗೆಗೆ ಅಡ್ಡಿ: ವರದಿ

ABOUT THE AUTHOR

...view details