ನವದೆಹಲಿ:ಸಾಂಕ್ರಾಮಿಕತೆಯ ಈ ಕಾಲಘಟ್ಟದಲ್ಲಿ ಕೈ ಸ್ವಚ್ಛಗೊಳಿಸುವುದು ಪ್ರಮುಖ ಮುನ್ನೆಚ್ಚರಿಕೆಯಾಗಿದೆ. ಈ ಹಿನ್ನೆಲೆ ತಪ್ಪದೇ ಕೈ ತೊಳೆಯುವುದಕ್ಕೆ ಆದ್ಯತೆ ನೀಡಬೇಕು ಎಂದು ಸರ್ಕಾರ ಮತ್ತು ಆರೋಗ್ಯಕಾಳಜಿ ಅಧಿಕಾರಿಗಳು ಜನರಲ್ಲಿ ಕೇಳಿಕೊಂಡಿದ್ದಾರೆ. ಆದಾಗ್ಯೂ, ಜಗತ್ತಿನ ಅನೇಕ ದೇಶಗಳು ನೈರ್ಮಲ್ಯತೆಯಿಂದ ದೂರ ಉಳಿದಿದೆ. ಇದರಿಂದಾಗಿ ವಿಶ್ವ ಆರೋಗ್ಯ ಸಂಸ್ಥೆ ವಾಶ್ (ನೀರಿ ಶುಚಿತ್ವ ಮತ್ತು ನೈರ್ಮಲ್ಯ) ಮಾನವ ಹಕ್ಕು ಆಗಬೇಕಿದೆ.
ಭಾರತದಲ್ಲಿ, ಈ ವಾಶ್ ನಿಧಾನವಾಗಿ ಅಭಿವೃದ್ಧಿ ಹೊಂದುತ್ತಿದೆ. ಆದರೂ, ಇದರ ಅಭಿವೃದ್ಧಿಯ ಬೆಳವಣಿಗೆ ಮತ್ತು ಜಾಗೃತಿ ಹೆಚ್ಚಾಗಬೇಕಿದೆ. 2010-2013ರ ಅವಧಿಯಲ್ಲಿ ಭಾರತದಲ್ಲಿ ಡಯೇರಿಯಾ, ಮಲೇರಿಯಾ ಮತ್ತು ಇನ್ನಿತರ ಸಾಂಕ್ರಾಮಿಕ ಸೋಂಕಿನಿಂದಾಗಿ ಎಲ್ಲ ವಯೋಮಾನದ ಶೇ 7.5ರಷ್ಟು ಮಂದಿ ಸಾವನ್ನಪ್ಪಿದ್ದಾರೆ. 2019ರಲ್ಲಿ 1.32 ಕೋಟಿ ಡಯರಿಯಾ ಪ್ರಕರಣಗಳು ವರದಿಯಾಗಿದೆ. ಈ ದತ್ತಾಂಶಗಳು ನೈರ್ಮಲ್ಯಕ್ಕೆ ಮಹತ್ವ ನೀಡುವುದರ ಜೊತೆಗೆ ಕೈ ತೊಳೆಯುವ ಅಭ್ಯಾಸ ನಡೆವುದು ಸುರಕ್ಷಿತ ಮುನ್ನೆಚ್ಚರಿಕೆ ಕ್ರಮವಾಗಿದೆ
ಡಯೇರಿಯಾಕ್ಕೆ ಕಾರಣ: ಪ್ರತಿಯೊಂದು ಚಟುವಟಿಕೆಗೆ ನಿತ್ಯ ನಾವು ಕೈಗಳನ್ನು ಬಳಕೆ ಮಾಡುತ್ತೇವೆ. ಇದೇ ಕಾರಣದಿಂದ ಪದೇ ಪದೆ ಕೈ ತೊಳೆಯಬೇಕು. ನೈರ್ಮಲ್ಯ ಎಂದಿಗೂ ಅಪಾಯ ತರುವುದಿಲ್ಲ. ಗೊತ್ತಿದ್ದು, ಗೊತ್ತಿಲ್ಲದೇ ಅನೇಕ ಕೀಟಾಣುಗಳಿಗೆ ನಾವು ಒಡ್ಡಿಕೊಳ್ಳುತ್ತೇವೆ. ಇದರಿಂದ ಡಯೇರಿಯಾದಂತಹ ಸೋಂಕು ಕಾಣಿಸಿಕೊಳ್ಳುತ್ತದೆ. ಜೊತೆಗೆ ನ್ಯೂಮೋನಿಯಾದಂತಹ ಸಮಸ್ಯೆ ತಡೆಗೆ ಕೈ ತೊಳೆಯುವ ಅಭ್ಯಾಸ ಇರಬೇಕು.
ಸಾಂಕ್ರಾಮಿಕತೆ ಬಳಿಕ ಕೈ ತೊಳೆಯುವ ಅಭ್ಯಾಸ ಹೆಚ್ಚುತ್ತಿದೆ. ಆದರೆ, ಇದನ್ನು ಗಂಭೀರವಾಗಿ ನಾವು ಪರಿಗಣಿಸಿದ್ದೇವಾ ಎಂಬುದು ಚಿಂತಿಸಬೆಕು. ಯುನಿಸೆಫ್ ಪ್ರಕಾರ, ಪುರಷರು ನೈರ್ಮಲ್ಯದಲ್ಲಿ ಹೆಚ್ಚಿನ ಕಡೆಗಣನೆ ವಹಿಸುತ್ತಾರೆ ಎಂದಿದ್ದಾರೆ.
ಸಲ್ಮೊನೆಲಾ, ನೊರೊವೈರಸ್ ಮತ್ತು ಇ ಸೇರಿದಂತಹ ವೈರಸ್ಗಳು ಡಯೇರಿಯಾಗೆ ಕಾರಣ. ಇರದ ಮೂ ಮಾನವನ ಮಲ ಅಥವಾ ಪ್ರಾಣಿಗಳ ಮಲ ಆಗಿದೆ. ಕೈ-ಬಾಯಿ ರೋಗ ಮತ್ತು ಅಡೆನೊವೈರಸ್ ಸೋಂಕಿನಿಂದ ಶ್ವಾಸಕೋಶದ ಸೋಂಕು ಹರಡುತ್ತದೆ. ಶೌಚಾಲಯ ಅಥವಾ ಇನ್ನಿತರ ಚಟುವಟಿಕೆಯಿಂದ ಅನೇಕರ ಕೈಯಲ್ಲಿ ಕೀಟಾಣುಗಳು ಹರಡುತ್ತದೆ.