ನುಣುಪಾದ, ಹೊಳೆಯುವ ಕೂದಲು ಬೇಕು ಎನ್ನುವುದು ಪ್ರತಿಯೊಬ್ಬ ಹುಡುಗಿಯ ಕನಸು. ಈ ನಡುವೆ ಅವರಿಗೆ ಸಮಸ್ಯೆಯಾಗಿ ಕಾಡುವುದು ಕೂದಲು ಉದುರುವ ಸಮಸ್ಯೆ. ಇದೇ ಸಮಸ್ಯೆ ಅನೇಕರನ್ನು ಒತ್ತಡಕ್ಕೆ ಗುರಿ ಮಾಡಿ, ಮತ್ತಷ್ಟು ಕೂದಲು ಉದುರುವಂತೆ ಮಾಡುತ್ತದೆ. ಬಹುತೇಕರನ್ನು ಕಾಡುವ ಈ ಸಮಸ್ಯೆಗೆ ವಿಶೇಷ ಕಾಳಜಿಗಿಂತ, ದೈನಂದಿನ ಜೀವನದಲ್ಲಿ ಕೆಲವು ಸಿಂಪಲ್ ಮಾರ್ಪಡು ಮಾಡಿಕೊಳ್ಳುವುದು ಅವಶ್ಯಕ. ಮನೆಯಲ್ಲಿ ಸಿಗುವ ಪದಾರ್ಥಗಳಿಂದ ಸಮಸ್ಯೆಗೆ ಮುಕ್ತಿ ನೀಡಬಹುದು.
1. ಅನ್ನ ಮಾಡುವ ಮುನ್ನ ಅಕ್ಕಿಯನ್ನು ಚೆನ್ನಾಗಿ ತೊಳೆದ ನೀರನ್ನು ಚೆಲ್ಲುವ ಬದಲು, ಅದಕ್ಕೆ ಮತ್ತೆ ಮೂರು ಕಪ್ ನೀರು ಸೇರಿಸಿ, ಒಂದು ಗಂಟೆ ಹಾಗೆಯೇ ಬಿಡಿ. ಅದನ್ನು ಸ್ಟ್ರೈ ಬಾಟಲ್ಗೆ ತುಂಬಿಸಿ, ತಲೆ ಸ್ನಾನ ಮಾಡುವಾಗ ಕೂದಲಿಗೆ ಚೆನ್ನಾಗಿ ಸಂಪಡಿಸಿಕೊಳ್ಳಿ. ಒಂದೂವರೆ ತಾಸಿನ ಬಳಿಕ ತಣ್ಣೀರಿನಲ್ಲಿ ತಲೆ ಸ್ನಾನ ಮಾಡಿ. ಅಕ್ಕಿ ತೊಳೆದ ನೀರಿನಲ್ಲಿ ಅಮೋನಿಯಂ ಆ್ಯಸಿಡ್, ನ್ಯೂಟ್ರಿಯೆಂಟ್ಸ್, ಮಿನರಲ್ಸ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಇರುತ್ತದೆ. ಇದು ಕೂದಲ ಬೆಳವಣಿಗೆಗೆ ಸಹಾಯಕ. ಇದರ ಜೊತೆಗೆ ಕೂದಲನ್ನು ಬಲಗೊಳಿಸಿ, ತುಂಡಾಗದಂತೆ ಕಾಪಾಡುತ್ತದೆ.
2. ಅರ್ಧ ಕಪ್ ರೈಸ್ಗೆ ಆಮ್ಲ (ನೆಲ್ಲಿಕಾಯಿ) ಪೌಡರ್ ಹಾಕಿ ಹತ್ತು ನಿಮಿಷ ನೆನೆಸಿಡಿ. ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಳ್ಳಿ. ಆಮ್ಲದಲ್ಲಿ ವಿಟಮಿನ್ ಸಿ ಇದ್ದು, ಆರೋಗ್ಯಯುತ ಕೂದಲಿಗೆ ಅತ್ಯವಶ್ಯಕ. ಕೂದಲ ಬೆಳವಣಿಗೆಗೆ ಸಹಾಯ ಮಾಡುವ ಆಮ್ಲ, ಹೊಟ್ಟಿನ ಸಮಸ್ಯೆ ನಿವಾರಣೆಯನ್ನು ಮಾಡುತ್ತದೆ.