ಲಂಡನ್:ಸಾಮಾಜಿಕ ಜಾಲತಾಣದಲ್ಲಿ ಫಿಟ್ನೆಸ್ ಟ್ರೆಂಡ್ ಅಧಿಕವಾಗಿದೆ. ಇದರಲ್ಲಿ ಕೆಲವು ಅದ್ಬುತವಾಗಿದ್ದರೆ ಮತ್ತೆ ಕೆಲವು ಅಪಾಯಕಾರಿ. ಕೆಲವು ಉಪಯುಕ್ತವೂ ಆಗಿದೆ. ಇದರಿಂದಾಗಿ ನಾಚಿಕೆ ಸ್ವಭಾವದ ಯುವತಿಯರು ಪ್ರಯೋಜನ ಪಡೆಯುತ್ತಿದ್ದಾರೆ. ಜನರು ನಿರಂತರವಾಗಿ ಸಾಮಾಜಿಕ ಜಾಲತಾಣದಲ್ಲಿ ಫಿಟ್ನೆಸ್ ಕುರಿತು ಅಂಶಗಳನ್ನು ಸೇರಿಸುತ್ತಿದ್ದು, ಇದು 2022ರಲ್ಲಿ ಆನ್ಲೈನ್ನಲ್ಲಿ ಪ್ರಖ್ಯಾತವೂ ಆಗಿತ್ತು. ನಾಚಿಕೆ ಸ್ವಭಾವದ ಹುಡುಗಿಯರಿಗೆ ಜಿಮ್ ಸ್ಥಳಾವಕಾಶ ಕಡಿಮೆ ಇರುತ್ತದೆ. ಈ ಹಿನ್ನಲೆ ಅವರು ಇರುವ ಸಣ್ಣ ಜಿಮ್ ಸ್ಥಳದಲ್ಲೇ, ಒಂದೆರಡು ಸಾಧನಗಳ ಸಹಾಯದಿಂದ ಅಭ್ಯಾಸ ನಡೆಸಬಹುದು.
ಜಿಮ್ ಎಂದರೆ ಆತಂಕ ಎನ್ನುವ ಮಹಿಳೆಯರು ಅಥವಾ ಆರಂಭಿಕ ಹಂತದಲ್ಲಿರುವವರು ಇದರ ಪ್ರಯೋಜನ ಪಡೆಯಬಹುದು. ಜಿಮ್ನಲ್ಲಿ ಸಾಕಷ್ಟು ಓಡಾಡದೆಯೇ ಅಥವಾ ಸಂಪೂರ್ಣ ಮೆಷಿನ್ ಬಳಕೆ ಮಾಡದೆ, ಉತ್ತಮ ಸಾಮರ್ಥ್ಯವನ್ನು ಪಡೆಯಬಹುದು. ಈ ವರ್ಕ್ಔಟ್ ಆರಂಭದ ಪ್ರಾಥಮಿಕ ಪ್ರಯೋಜನ ಎಂದರೆ, ಜಿಮ್ಗೆ ಹೋಗುವ ಭಯವನ್ನು ಇದು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಅವರು ದೀರ್ಘಕಾಲದ ಸಹಾಯವನ್ನು ಪಡೆಯಬಹುದು. ಇದರಿಂದ ಅವರು ಆತ್ಮವಿಶ್ವಾಸವೂ ವೃದ್ಧಿಯಾಗುತ್ತದೆ
ಜಿಮ್ ಆತಂಕ: ಸಾಮಾಜಿಕ ಒತ್ತಡದಿಂದ ಮಹಿಳೆಯರು ಪರ್ಫೆಕ್ಟ್ ಫಿಟ್ ಮತ್ತು ಉತ್ತಮ ದೇಹ ರಚನೆಯನ್ನು ಹೊಂದಬೇಕು ಎಂದು ಬಯಸುತ್ತಾರೆ. ಈ ಒತ್ತಡವೂ ಜಿಮ್ನಂತಹ ಸ್ಥಳದಲ್ಲಿ ಹೆಚ್ಚುತ್ತದೆ. ಇಲ್ಲಿ ದೇಹಧಾರ್ಢ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಈ ವೇಳೆ ಮಹಿಳೆಯರು ತಮಗೆ ಉತ್ತಮ ದೇಹ ಆಕಾರ ಇಲ್ಲ ಎಂಬ ಆಂಜಿಕೆಗೆ ಒಳಗಾಗಿ, ಮುಜುಗರ ಪಡುತ್ತಾರೆ. ಅನೇಕ ಮಹಿಳೆಯರು ಪುರುಷರು ಅಧಿಕವಾಗಿರುವ ಈ ಸ್ಥಳಗಳಲ್ಲಿ ಒಬ್ಬಂಟಿತನಕ್ಕೆ ಒಳಗಾಗುತ್ತಾರೆ. ಇದು ಅವರಲ್ಲಿ ಮತ್ತಷ್ಟು ಅಭದ್ರತೆ ಭಯ ಮೂಡಿಸುತ್ತದೆ. ಜೊತೆಗೆ ಅವರು ಸಂಪೂರ್ಣವಾಗಿ ಜಿಮ್ಗೆ ಹೋಗುವುದನ್ನೇ ನಿಲ್ಲಿಸುತ್ತಾರೆ.
ತೂಕದ ಕಳಂಕಗಳು ಕೂಡ ಅನೇಕರಲ್ಲಿ ವ್ಯಾಯಾಮದ ಗುರಿಯಿಂದ ಹಿಂದೆ ಸರಿಯುವಂತೆ ಮಾಡುತ್ತದೆ. ಅಧಿಕ ತೂಕದಿಂದ ಅವರು ವ್ಯಾಯಾಮದ ವೇಳೆ ಕಿರುಕುಳ ಮತ್ತು ಅಪಹಾಸ್ಯಕ್ಕೆ ಗುರಿಯಾಗುವುದನ್ನು ಕಾಣಬಹುದು ಎಂದು ಅಧ್ಯಯನಗಳು ತೋರಿಸಿದೆ. ಕೆಲವು ಮಹಿಳೆಯರು ಇಂತಹ ಅಪಹಾಸ್ಯದಿಂದಾಗಿ ಸಂಪೂರ್ಣವಾಗಿ ಜಿಮ್ನಿಂದ ದೂರ ಉಳಿಯುತ್ತಾರೆ. ಆದರೆ, ದೇಹದ ಅಭದ್ರತೆ ಒಂದೇ ಕಾರಣದಿಂದ ಅವರು ಜಿಮ್ನಿಂದ ದೂರಾಗುವುದಿಲ್ಲ.