ಕರ್ನಾಟಕ

karnataka

ETV Bharat / sukhibhava

ಜ್ಞಾನ್ ನೇತ್ರಾ: ಮಂಕಿಪಾಕ್ಸ್ ಒಂದು ಕುತಂತ್ರಿ ವೈರಸ್ - Autoimmunity journal

ಮಂಕಿಪಾಕ್ಸ್ ವೈರಸ್ ತುಂಬಾ ಸ್ಮಾರ್ಟ್ ಆಗಿದ್ದು ಇದು ಔಷಧಗಳು ಮತ್ತು ಮನುಷ್ಯನ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ತಪ್ಪಿಸಿಕೊಳ್ಳುತ್ತದೆ ಎಂದು ಮಿಸ್ಸೌರಿ ವಿಶ್ವವಿದ್ಯಾನಿಲಯ ವಿಜ್ಞಾನಿಗಳು 'Autoimmunity' ಜರ್ನಲ್‌ನಲ್ಲಿ ಪ್ರಕಟಿಸಿದ್ದಾರೆ.

ಮಂಕಿಪಾಕ್ಸ್ ವೈರಸ್
ಮಂಕಿಪಾಕ್ಸ್ ವೈರಸ್

By

Published : Nov 7, 2022, 5:55 PM IST

ವಾಷಿಂಗ್ಟನ್:ಚೀನಾದಲ್ಲಿ ಹುಟ್ಟಿದೆ ಎನ್ನಲಾದ ಕೋವಿಡ್​ 19 ವೈರಸ್ ಇಡೀ ಜಗತ್ತನ್ನೇ ನಡುಗಿಸಿ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು. ಈಗ ಮತ್ತೊಂದು ಮಾರಣಾಂತಿಕ ವೈರಸ್​ ಆತಂಕ ಸೃಷ್ಟಿಸುತ್ತಿದೆ. ಅದುವೇ ಮಂಕಿಪಾಕ್ಸ್.

ಈ ವೈರಸ್ ಹೇಗೆ ವಿಕಸನಗೊಂಡಿತು ಎಂಬುದರ ವಿಶ್ಲೇಷಣೆಯನ್ನು ಮಾಡಿರುವ ವಿಜ್ಞಾನಿಗಳು ಮಂಕಿಪಾಕ್ಸ್ ಒಂದು ಕುತಂತ್ರ ವೈರಸ್ ಆಗಿದ್ದು, ಪ್ರತಿಜೀವಕಗಳು ಮತ್ತು ಔಷಧಗಳಿಂದ ತಪ್ಪಿಸಿಕೊಳ್ಳಬಲ್ಲದು. ಹಾಗೆ ಇದು ವಿವಿಧ ರೂಪಾಂತರಗಳಾಗಿ ಬದಲಾಗುತ್ತಿದೆ ಎಂದು ವಿಜ್ಞಾನಿ ಶ್ರೀಕೇಶ್ ಸಚ್ಚದೇವ್ ಮಾಹಿತಿ ನೀಡಿದ್ದಾರೆ.

ಮಂಕಿಪಾಕ್ಸ್ ವೈರಸ್ ತುಂಬಾ ಸ್ಮಾರ್ಟ್ ಆಗಿದ್ದು, ಇದು ಔಷಧಗಳು ಮತ್ತು ಮನುಷ್ಯನ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ತಪ್ಪಿಸಿಕೊಳ್ಳುತ್ತದೆ ಎಂದು ಮಿಸ್ಸೌರಿ ವಿಶ್ವವಿದ್ಯಾನಿಲಯ ವಿಜ್ಞಾನಿಗಳು 'ಆಟೊ ಇಮ್ಯುನಿಟಿ' ಜರ್ನಲ್‌ನಲ್ಲಿ ಪ್ರಕಟಿಸಿರುವ ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ವಾಯುಮಾಲಿನ್ಯದ ದುಷ್ಪರಿಣಾಮ ತಡೆಗೆ ಉಪಯುಕ್ತ ಯೋಗಾಸನಗಳಿವು.. ನೀವೂ ಟ್ರೈ ಮಾಡಿ

ABOUT THE AUTHOR

...view details