ನ್ಯೂಯಾರ್ಕ್: ಕರುಳಿನಲ್ಲಿ ಬಹುಜಾತಿಯ ಬ್ಯಾಕ್ಟೀರಿಯಾಗಳು ಮನುಷ್ಯ ಮತ್ತು ಇಲಿಗಳಲ್ಲಿ ಗಂಭೀರ ಮಲೇರಿಯಾ ಅಭಿವೃದ್ಧಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ. ಜರ್ನಲ್ ನೇಚರ್ ಕಮ್ಯೂನಿಕೇಷನ್ನಲ್ಲಿ ಪ್ರಕಟವಾದ ಅಧ್ಯಯನ ಫಲಿತಾಂಶದಲ್ಲಿ ಇಲಿಯ ಕರುಳನ್ನು ಆಶ್ರಯಿಸುವ ನಿರ್ದಿಷ್ಟ ಜಾತಿಯ ಬ್ಯಾಕ್ಟೀರಾಯ್ಡ್ಗಳು ಮಲೇರಿಯಾದ ಹೆಚ್ಚಿನ ಅಪಾಯ ಹೊಂದಿದೆ ಎಂದು ತಿಳಿಸಿದೆ. ಇದೇ ರೀತಿಯ ಅಂಶವನ್ನು ಮಲೇರಿಯಗೆ ಒಳಗಾದ ಮಕ್ಕಳ ಕರುಳನ್ನು ಗಮನಿಸಿದಾಗ ಪತ್ತೆಯಾಗಿದೆ.
ಬ್ಯಾಕ್ಟೀರಾಯ್ಡ್ ಜಾತಿಯ ಸೂಕ್ಷ್ಮಾಣುಗಳು ಕರುಳಿನಲ್ಲಿ ಮೈಕ್ರೋಬಯೋಟಾ ಜೊತೆಗೆ ಸಂಪರ್ಕಿಸಿದಾಗ ಅದು ಮಲೇರಿಯಾ ಉಲ್ಬಣಕ್ಕೆ ಕಾರಣವಾಗುತ್ತದೆ. ಈ ಅಧ್ಯಯನವೂ ಗಂಭೀರ ಮಲೇರಿಯದಿಂದ ಆಗುವ ಸಾವಿನ ಅಪಾಯ ತಡೆಯಲು ಕರುಳಿನ ಬ್ಯಾಕ್ಟೀರಿಯಾ ಗುರಿಯಾಗಿಸಿ ಹೊಸ ಚಿಕಿತ್ಸಾ ವಿಧಾನವನ್ನು ಅಭಿವೃದ್ಧಿ ಪಡಿಸುವಿಕೆಯನ್ನು ತಿಳಿಸುತ್ತದೆ ಎಂದು ಅಮೆರಿಕದ ಇಂಡಿಯನಾ ಯುನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ.
ಮಲೇರಿಯಾ ಜೀವಕ್ಕೆ ಹಾನಿ ಮಾಡುವ ಸೊಳ್ಳೆಗಳ ಕಡಿತದಿಂದ ಹರಡುವ ಮಾರಣಾಂತಿಕ ಸೋಂಕು ಆಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿ ಅನುಸಾರ 2021ರಲ್ಲಿ ಜಾಗತಿಕವಾಗಿ ಮಲೇರಿಯಾದಿಂದ 6,19,000 ಮಂದಿ ಸಾವನ್ನಪ್ಪಿದ್ದು, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವಿನ ಸಂಖ್ಯೆಯಲ್ಲಿ ಶೇ 76ರಷ್ಟಿದೆ ಎಂದು ಹೇಳಿದೆ.