ಕರ್ನಾಟಕ

karnataka

ETV Bharat / sukhibhava

ಕೋವಿಡ್‌ ಬಳಿಕ ಟೆಲಿಹೆಲ್ತ್​ ಮಾರುಕಟ್ಟೆ ಬೆಳವಣಿಗೆ: ಏನಿದು ಟೆಲಿಹೆಲ್ತ್‌ ವ್ಯವಸ್ಥೆ? - ಕಾಲಘಟ್ಟದಲ್ಲಿ ಭವಿಷ್ಯದಲ್ಲಿ ಟೆಲಿ ಹೆಲ್ತ್​

ವಿಡಿಯೋ ಸಂವಾದದ ಮೂಲಕ ವೈದ್ಯರ ಸಂಪರ್ಕಕ್ಕೊಳಗಾಗಿ ರೋಗಿಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆಯೇ ಈ ಟೆಲಿಹೆಲ್ತ್​​.

Growth in telehealth market after pandemic
Growth in telehealth market after pandemic

By

Published : Aug 21, 2023, 8:29 PM IST

ಆನ್​ಲೈನ್​ ಮೂಲಕೇ ವ್ಯವಹಾರ ನಡೆಸುತ್ತಿರುವ ಈ ಕಾಲಘಟ್ಟದಲ್ಲಿ ಭವಿಷ್ಯದಲ್ಲಿ ಟೆಲಿ ಹೆಲ್ತ್​ ಮಾರ್ಕೆಟ್​​ ಉತ್ತಮ ಬೆಳವಣಿಗೆ ಕಾಣಲಿದೆ ಎಂದು ವರದಿ ತಿಳಿಸಿದೆ. ಕೋವಿಡ್​ ಸಾಂಕ್ರಾಮಿಕದ ಬಳಿಕ ಟೆಲಿ ಹೆಲ್ತ್​​ ಮಾರ್ಕೆಟ್​ ಹೆಚ್ಚು ಅಭಿವೃದ್ಧಿ ಕಂಡಿದೆ. ಇನ್ನು ಕೆಲವೇ ವರ್ಷದಲ್ಲಿ ಇದು ಸ್ಥಿರವಾಗಲಿದೆ ಎಂದು ಭವಿಷ್ಯ ನುಡಿದಿದೆ.

ಟೆಲಿ ಹೆಲ್ತ್​ ಮೂಲಕ ರೋಗಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ವೈದ್ಯಕೀಯ ವೃತ್ತಿಪರರಿಂದ ಸಮಸ್ಯೆಗೆ ಸಹಾಯ ಪಡೆಯಬಹುದು. ಇದರಲ್ಲಿ ನೇರವಾಗಿ ವೈದ್ಯರಿಗೆ ತಮ್ಮ ಸಮಸ್ಯೆಗಳನ್ನು ಹೇಳುವ ಮೂಲಕ ದೂರದಿಂದಲೇ ವಿಡಿಯೋ ಕರೆಯಲ್ಲಿ ಪರಿಹಾರ ಕಂಡುಕೊಳ್ಳಬಹುದು. 2021ರಲ್ಲಿ ಕೋವಿಡ್​ ಮುನ್ನೆಚ್ಚರಿಕೆಯಿಂದಾಗಿ ಆರಂಭವಾದಾಗ ಟೆಲಿ ಹೆಲ್ತ್​​ ಬಳಕೆ ಕೊಂಚ ಕುಸಿತ ಕಂಡಿತ್ತು.

ಇತ್ತೀಚಿನ ಗ್ಲೋಬಲ್​ಡಾಟಾದ ಮಾರುಕಟ್ಟೆ ಮಾದರಿ ಪ್ರಕಾರ, ಕೋವಿಡ್​ ನಂತರದಲ್ಲಿ ಮಾನಸಿಕ ಆರೋಗ್ಯದ ಕಾರಣಗಳಿಗಾಗಿ ಟೆಲಿಹೆಲ್ತ್ ಬಳಕೆ ಕುಸಿತ ಕಂಡಿತು. ಆದರೆ, ಭವಿಷ್ಯದಲ್ಲಿ ಇದರ ಬಳಕೆ ಹೆಚ್ಚಲಿದೆ. ಅಮೆರಿಕ ಮಾರುಕಟ್ಟೆಯಲ್ಲಿ ಇದು ಅಭಿವೃದ್ಧಿ ಕಾಣಬಹುದಾಗಿದೆ. ಟೆಲಿಹೆಲ್ತ್​ ತಂತ್ರಜ್ಞಾನದ ಬಳಕೆಯಲ್ಲಿ ಮಾನಸಿಕ ಆರೋಗ್ಯ ಕಾಳಜಿ ಹೆಚ್ಚಿನ ಅಭಿವೃದ್ಧಿ ಕಾಣಲಿದೆ.

ಸಾಂಕ್ರಾಮಿಕತೆ ಸಮಯದಲ್ಲಿ ಟೆಲಿಹೆಲ್ತ್​ ಹೆಚ್ಚು ಪ್ರವರ್ಧಮಾನಕ್ಕೆ ಬಂದಿತ್ತು. ರೋಗಿಗಳು ಸಾಮಾಜಿಕ ಅಂತರ ಪಾಲನೆ ಮೂಲಕ ವೈದ್ಯರ ಭೇಟಿ ಮತ್ತು ಸಲಹೆ ಪಡೆಯಲು ಟೆಲಿ ಹೆಲ್ತ್​ ಅನ್ನು ಬಳಕೆ ಮಾಡಿದರು. 2020ರಲ್ಲಿ ಮಾನಸಿಕ ಆರೋಗ್ಯದ ಕಾರಣಕ್ಕೆ ಅರ್ಧದಷ್ಟು ರೋಗಿಗಳು ಇದರ ಬಳಕೆಗೆ ಮುಂದಾದರು. ಶೇ 40ರಷ್ಟು ರೋಗಿಗಳು ಇತರೆ ಸಮಸ್ಯೆಗಳಿಗೆ ಪರಿಹಾರಕ್ಕೆ ಟೆಲಿ ಹೆಲ್ತ್‌ ಪ್ರಯೋಜನ ಪಡೆದಿದ್ದಾರೆ ಎಂದು ಥಾಮಸ್​ ಫ್ಲೆಮಿಂಗ್​ ತಿಳಿಸಿದ್ದಾರೆ.

ಟೆಲಿಹೆಲ್ತ್​​ ಸಾಂಪ್ರಾದಾಯಿಕ ಮಾನಸಿಕ ಆರೋಗ್ಯಕ್ಕೆ ಪರ್ಯಾಯವಾದ ಚಿಕಿತ್ಸಾ ಮಾದರಿ ನೀಡಿತು. ಇದು ಕೆಲವು ನಿರ್ದಿಷ್ಟ ಪ್ರಯೋಜನ ಹೊಂದಿದೆ. ಓಡಾಟದ ಖರ್ಚು ತಗ್ಗಿಸುತ್ತದೆ. ಜೊತೆಗೆ ಮನೆಯಿಂದಲೇ ವೈದ್ಯರ ಸಂಪರ್ಕ ಹೊಂದುವ ಅವಕಾಶವನ್ನು ನೀಡುತ್ತದೆ. ಹೊರ ರೋಗಿಗಳ ಆರೈಕೆಗೆ ಲೆಕ್ಕಹಾಕಿದರೆ ದುಬಾರಿಯಲ್ಲ ಎಂದಿದ್ದಾರೆ.

ಗ್ಲೋಬಲ್​ ಡಾಟಾ ಅಂದಾಜು ಮಾಡಿರುವಂತೆ, ವಾರ್ಷಿಕವಾಗಿ ಶೇ 6.5ರಷ್ಟು ಬೆಳವಣಿಗೆ ಕಂಡಿದೆ. ದೀರ್ಘ ಮತ್ತು ಇನ್ನಿತರ ಸಮಸ್ಯೆಗಳಿಗೂ ಕೂಡ ಭವಿಷ್ಯದಲ್ಲಿ ಜನರು ಟೆಲಿ ಹೆಲ್ತ್‌ ಬಳಕೆಗೆ ಮುಂದಾಗಲಿದ್ದು, ಸಕಾರಾತ್ಮಕ ಅಭಿವೃದ್ಧಿ ಕಾಣಲಿದೆ. ಪ್ರತ್ಯೇಕವಾಗಿರುವ ಸಮುದಾಯಗಳಿಗೆ ಮೌಲ್ಯಯುತ ಸೇವೆಯನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶೇ 43ರಷ್ಟು ಪೋಷಕರಿಗೆ ಸ್ಮಾರ್ಟ್​ಫೋನ್​ ಇಲ್ಲದೆ ಮಕ್ಕಳನ್ನು ಬೆಳೆಸುವುದೇ ಗೊತ್ತಿಲ್ಲ!

ABOUT THE AUTHOR

...view details